Advertisement
ಈ ನೌಕರರು ಒಂದು ದಶಕದಿಂದ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾ ಬಂದಿದ್ದಾರೆ. ಈಗ ಇಲಾಖೆಯು ಆ. 1ರ ಬಳಿಕ ಸೇವೆಗೆ ಹಾಜರಾಗದಂತೆ ತಿಳಿಸಿದ್ದು, ಹೊರ ಗುತ್ತಿಗೆ ನೌಕರರು ಸಮಸ್ಯೆಯಲ್ಲಿ ಸಿಲುಕಿದ್ದಾರೆ.
ಹಿಂದುಳಿದ ವರ್ಗದ ಇಲಾಖೆಯಡಿ ಉಡುಪಿಯಲ್ಲಿ 41 ಮತ್ತು ದ.ಕ.ದಲ್ಲಿ 73 ಸೇರಿದಂತೆ ಒಟ್ಟು 114 ವಸತಿ ನಿಲಯಗಳಿವೆ. ಅವುಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸ್ವಚ್ಛತಾ ಕೆಲಸ, ಅಡುಗೆ ಸಿಬಂದಿ ಸೇರಿದಂತೆ ಉಡುಪಿಯಲ್ಲಿ 89 ಮತ್ತು ದ.ಕ.ದಲ್ಲಿ 136 ಹೊರ ಗುತ್ತಿಗೆ ನೌಕರರಿದ್ದಾರೆ. ನೇರ ನೇಮಕಾತಿ
ಕಳೆದ ವರ್ಷ ಸರಕಾರ “ಡಿ’ ವರ್ಗದ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ 10ನೇ ತರಗತಿ ಪಾಸಾದ ಅಭ್ಯರ್ಥಿಗಳನ್ನು ನೇಮಿಸಿದೆ. ಈ ಕನಿಷ್ಠ ವಿದ್ಯಾರ್ಹತೆಯಿಲ್ಲದ ಕಾರಣ ಹೊರ ಗುತ್ತಿಗೆ ನೌಕರರು ನೇರ ನೇಮಕಾತಿ ಯಲ್ಲಿ ಭಾಗವಹಿಸಲು ಆಗಿರಲಿಲ್ಲ.
Related Articles
ಸರಕಾರದ ನೇಮಕಾತಿ ನೀತಿ ವಿರೋಧಿಸಿ ಕಳೆದ ವರ್ಷ ಈ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಅದರ ಫಲವಾಗಿ ಒಂದು ವರ್ಷ ಕೆಲಸ ಮಾಡಲು ಅವರಿಗೆ ಅವಕಾಶ ನೀಡಲಾಗಿತ್ತು. ಈಗ ಇಲಾಖೆಯು ಗುತ್ತಿಗೆ ನೌಕರರು ಕೆಲಸ ನಿರ್ವಹಿಸದಂತೆ ಆದೇಶ ನೀಡಿದೆ.
Advertisement
ಜುಲೈ ತಿಂಗಳ ವೇತನ ಸಿಕ್ಕಿಲ್ಲಈ ನೌಕರರಿಗೆ ಜೂನ್ ವರೆಗಿನ ವೇತನ ಪಾವತಿಯಾಗಿದೆ. ಉಡುಪಿಯ ಬಿಸಿಎಂ ಹಾಸ್ಟೆಲ್‌ಗಳಲ್ಲಿ ನೌಕರರು ಸರಕಾರವು ತಮ್ಮ ಸೇವೆಯನ್ನು ಮುಂದುವರಿಸಬಹುದು ಎನ್ನುವ ನಂಬಿಕೆಯಲ್ಲಿ ಜುಲೈ ಪೂರ್ತಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು, ಅವರ ವೇತನ ಇನ್ನೂ ಪಾವತಿಯಾಗಿಲ್ಲ. ಹೊರಗುತ್ತಿಗೆ ಡಿ ಗ್ರೂಪ್ ನೌಕರರನ್ನು ಹುದ್ದೆಯಿಂದ ಮುಕ್ತಗೊಳಿಸಿ, ನೇರ ನೇಮಕಾತಿ ಮೂಲಕ ಆಯ್ಕೆ ಮಾಡಿರುವವರಿಗೆ ಅವಕಾಶ ನೀಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಹಿಂದುಳಿದ ವರ್ಗ ಇಲಾಖೆ ಆಯುಕ್ತರ ಹಾಗೂ ಕಾರ್ಯದರ್ಶಿಗಳಿಗೆ ಜತೆ ಮಾತುಕತೆ ನಡೆಸಲಾಗುತ್ತದೆ. ಮುಖ್ಯಮಂತ್ರಿಗಳ ಗಮಕ್ಕೆ ತರಲಾಗುತ್ತದೆ.
– ಕೋಟ ಶ್ರೀನಿವಾಸ ಪೂಜಾರಿ, ಸಚಿವರು ದ.ಕ. ಜಿಲ್ಲೆಯಲ್ಲಿ ನೇರ ನೇಮಕಾತಿಯ ಮೂಲಕ 136 ಸಿಬಂದಿಗಳು ಪ್ರಸ್ತುತ ಕೆಲಸ ಮಾಡುತ್ತಿದ್ದಾರೆ. ಹೊರಗುತ್ತಿಗೆ ನೌಕರರ ಕೆಲಸ ಮುಂದುವರಿಸಲು ಮೂರನೇ ಬಾರಿ ಮನವಿ ಸಲ್ಲಿಸಲಾಗಿತ್ತು.
-ಸಚಿನ್ ಕುಮಾರ್, ಹಿಂದುಳಿದ ವರ್ಗಗಳ ಇಲಾಖಾಧಿಕಾರಿ, ದ.ಕ. ಜಿಲ್ಲೆ ಅವಕಾಶ ನೀಡಿ
ಕೆಲಸಕ್ಕೆ ಹಾಜರಾಗದಂತೆ ಹೊರಗುತ್ತಿಗೆ ನೌಕರರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಕಡಿಮೆ ಸಂಬಳಕ್ಕೆ 9 ವರ್ಷ ಸೇವೆ ಸಲ್ಲಿಸಿದ್ದನ್ನು ಪರಿಗಣಿಸದೆ ಕೆಲಸದಿಂದ ವಜಾ ಮಾಡಲು ಆದೇಶ ನೀಡಿರುವುದು ಸರಿಯಲ್ಲ.
-ಗಜಾನನ, ಹಿಂದುಳಿದ ವರ್ಗದ , ಹಾಸ್ಟೆಲ್ ಹೊರಗುತ್ತಿಗೆ ನೌಕರ – ತೃಪ್ತಿ ಕುಮ್ರಗೋಡು