Advertisement

ಅಕ್ಟೋಬರ್‌ನಿಂದ 6 ಏರ್‌ಬ್ಯಾಗ್‌ ನಿಯಮ ಜಾರಿ

09:50 PM Jan 15, 2022 | Team Udayavani |

ನವದೆಹಲಿ: ಎಂಟು ಮಂದಿ ಪ್ರಯಾಣಿಸುವ ಕಾರುಗಳಿಗೆ ಕನಿಷ್ಠ ಆರು ಏರ್‌ಬ್ಯಾಗ್‌ಗಳು ಕಡ್ಡಾಯ ಎಂಬ ನಿಯಮ ಅಕ್ಟೋಬರ್‌ನಿಂದ ಅನ್ವಯವಾಗಲಿದೆ.

Advertisement

ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಶನಿವಾರ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಕೇಂದ್ರ ಮೋಟಾರು ವಾಹನಗಳ ನಿಯಮ 1989ರ ಅನ್ವಯ ಪ್ರಯಾಣದ ವೇಳೆ ಉಂಟಾಗುವ ಅಪಘಾತದಿಂದ ಉಂಟಾಗುವ ಅನಾಹುತ ತಪ್ಪಿಸಲು ಕನಿಷ್ಠ ಆರು ಏರ್‌ಬ್ಯಾಗ್‌ ಕಡ್ಡಾಯ ಎಂದು ಆದೇಶ ಹೊರಡಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಈ ಬಗ್ಗೆ ಶುಕ್ರವಾರ ಕರಡು ನಿಯಮಗಳನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next