Advertisement

ಹೆದ್ದಾರಿಯಲ್ಲಿ ಹಠಾತ್ ಬ್ರೇಕ್ ಹಾಕಿದ ಕಾರು: ಡಿವೈಡರ್ ಗೆ ಬಡಿದು ಉರುಳಿದ ಮಿನಿ ಟೆಂಪೋ!

01:56 PM Mar 25, 2021 | Team Udayavani |

ಉಳ್ಳಾಲ: ಹೆದ್ದಾರಿಯಲ್ಲಿ ಅವೈಜ್ಞಾನಿಕವಾಗಿ ವಾಹನ ನಿಲ್ಲಿಸಿದರೆ ಹೇಗೆ ಅಪಘಾತ ಸಂಭವಿಸುತ್ತದೆ ಎನ್ನುವುದಕ್ಕೆ ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ನಡೆದ ಅಫಘಾತದ ವೀಡಿಯೋ ಸಾಕ್ಷಿಯಾಗಿದೆ.

Advertisement

ಹೆದ್ದಾರಿಯಲ್ಲಿ ಕಾರೊಂದನ್ನು ಹಠಾತ್ ನಿಲ್ಲಿಸಿದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಲಾರಿ ಎಡಗಡೆ ಪಥಕ್ಕೆ ಬಂದಿದ್ದು, ಈ ವೇಳೆ ಅದರ ಹಿಂದಿನಿಂದ ಬಂದ ಲೈನ್ ಸೇಲ್ ನ ವಾಹನವೊಂದು ಡಿವೈಡರ್ ಗೆ ಬಡಿದು ಹೆದ್ದಾರಿಗೆ ಉರುಳಿದೆ. ಘಟನೆಯಲ್ಲಿ ಯಾವುದೇ ಅಪಾಯವಿಲ್ಲದೆ ವಾಹನದಲ್ಲಿದ್ದವರು ಪಾರಾಗಿದ್ದಾರೆ.

ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಲೈನ್ ಸೇಲ್ ವಾಹನಕ್ಕೆ, ಲಾರಿಯೊಂದು ಅಡ್ಡಬಂದ ಹಿನ್ನೆಲೆಯಲ್ಲಿ ಘಟನೆ ಸಂಭವಿಸಿದೆ.  ಆ ಲಾರಿಗೆ ಹೆದ್ದಾರಿ ಸಮೀಪದಲ್ಲೇ ಇರುವ ವಾಣಿಜ್ಯ ಮಳಿಗೆಯೊಂದರ ಎದುರು ಹೆದ್ದಾರಿಯಲ್ಲಿ ಹಠಾತ್ತಾಗಿ ಕಾರು ನಿಲ್ಲಿಸಿದ್ದರಿಂದ ಲಾರಿ ಚಾಲಕ ಕಾರಿಗೆ ಢಿಕ್ಕಿಯಾಗುವುದನ್ಬು ತಪ್ಪಿಸಲು ಬಲ ಬದಿಗೆ ತಿರುಗಿಸಿದ್ದು, ಲಾರಿಯನ್ಬು ಹಿಂದಿಕ್ಕಲು ಯತ್ನಿಸುತ್ತಿದ್ದ ಲೈನ್ ಸೇಲ್ ನ ಮಿನಿ ಟೆಂಪೊ ಬಲ ಬದಿಗೆ ತಿರುಗಿದ ಲಾರಿಯನ್ಬು ತಪ್ಪಿಸಲು ಹೋದಾಗ ಈ ಘಟನೆ ನಡೆದಿದೆ.

Advertisement

ಡಿವೈಡರ್ ಗೆ ಬಡಿದ ಮಿನಿ‌ಟೆಂಪೊ ಬಳಿಕ ಹೆದ್ದಾರಿಯಲ್ಲೇ ಮಗುಚಿ ಬಿದ್ದ ದೃಶ್ಯ ಈ ವಾಹನದ ಹಿಂದಿನ ಕಾರಿನಲ್ಲಟ್ಟಿದ್ದ ವಿಡಿಯೋ ಕ್ಯಾಮರದಲ್ಲಿ ಸೆರೆಯಾಗಿದೆ. ಘಟನೆ ಕುರಿತು ನಾಗುರಿಯಲ್ಲಿರುವ ದಕ್ಷಿಣ ಸಂಚಾರಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next