Advertisement

ಚಾರ್ಮಾಡಿ ಘಾಟ್‌ನಲ್ಲಿ ಮಿನಿ ಬಸ್‌ ಸಂಚಾರ ಪ್ರಾರಂಭ

10:09 AM Dec 28, 2019 | Team Udayavani |

ಚಿಕ್ಕಮಗಳೂರು: ಚಾರ್ಮಾಡಿ ಘಾಟ್‌ನಲ್ಲಿ ಲಘು ವಾಹನ ಹಾಗೂ ಮಿನಿ ಬಸ್‌ ಸಂಚಾರಕ್ಕೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿದ ಹಿನ್ನೆಲೆಯಲ್ಲಿ ಶುಕ್ರವಾರ ಕೆಎಸ್‌ಆರ್‌ಟಿಸಿ ಮಿನಿ ಬಸ್‌ ಸಂಚಾರ ಆರಂಭಿಸಿವೆ. ಉಡುಪಿ ಕೆಎಸ್‌ಆರ್‌ಟಿಸಿ ಘಟಕದ 2 ಮಿನಿ ಬಸ್‌ಗಳು ಶುಕ್ರವಾರ ಸಂಚಾರ ಆರಂಭಿಸಿದವು. ಉಡುಪಿಯಿಂದ- ಚಿಕ್ಕಮಗಳೂರು ಹಾಗೂ ಚಿಕ್ಕಮಗಳೂರಿನಿಂದ ಉಡುಪಿಗೆ ಮಿನಿ ಬಸ್‌ಗಳು ಸಂಚರಿಸಿದವು.

Advertisement

ಈ ಕುರಿತು “ಉದಯವಾಣಿ’ ಜತೆ ಮಾತನಾಡಿದ ಮಂಗಳೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಆನಂದ್‌, ಶುಕ್ರವಾರ ಉಡುಪಿಯಿಂದ 2 ಮಿನಿ ಬಸ್‌ಗಳು ಸಂಚಾರ ಆರಂಭಿಸಿದ್ದು, ಶನಿವಾರದಿಂದ 4 ಮಿನಿ ಬಸ್‌ಗಳು ದಿನದ 24 ಗಂಟೆ ಮಂಗಳೂರಿನಿಂದ ಚಿಕ್ಕಮಗಳೂರಿಗೆ ಚಾರ್ಮಾಡಿ ಘಾಟ್‌ ಮೂಲಕ ಸಂಚರಿಸಲಿವೆ ಎಂದರು.

ಚಿಕ್ಕಮಗಳೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾ ಧಿಕಾರಿ ದೇವರಾಜ್‌ ಮಾತನಾಡಿ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಿಂದ ಮಿನಿ ಬಸ್‌ಗಳು ಬರಲಿದ್ದು, ಇನ್ನೆರಡು ದಿನದಲ್ಲಿ ಚಿಕ್ಕಮಗಳೂರಿನಿಂದ ಮಂಗಳೂರಿಗೆ ಮಿನಿ ಬಸ್‌ ಸಂಚಾರ ಪ್ರಾರಂಭವಾಗಲಿದೆ ಎಂದರು.

ಚಾರ್ಮಾಡಿ ಘಾಟ್‌ ತಿರುವುಗಳಲ್ಲಿ ಪ್ರತಿಫಲಕ ಹಾಗೂ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ತಡೆಗೋಡೆಗಳಿಗೆ ಬಣ್ಣ ಬಳಿಯಲಾಗಿದ್ದು, ಎಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿ ಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next