Advertisement

ಕಿಡ್ನಿ ಕಸಿಗೆ ಮೀನಾಮೇಷ: ಸರ್ಕಾರದ ವಿರುದ್ಧ ಕಿಡಿ ಕಾರಿದ ಹೈಕೋರ್ಟ್‌

06:35 AM Dec 06, 2018 | Team Udayavani |

ಬೆಂಗಳೂರು: ಟೆಕ್ಕಿಯೊಬ್ಬರು ಕಿಡ್ನಿ ಕಸಿ ಮಾಡಿಸಿಕೊಳ್ಳಲು ಕೋರಿ ಸಲ್ಲಿಸಿರುವ ಮನವಿಗೆ ಅನುಮತಿ ನೀಡಲು ಮೀನಾಮೇಷ ಎಣಿಸುತ್ತಿರುವ”ಮಾನವ ಅಂಗಾಂಗ ಕಸಿ ಅನುಮತಿ ಅಧಿಕಾರಯುತ ಸಮಿತಿ’ ವಿರುದ್ಧ ಬುಧವಾರ ಕೆಂಡ ಕಾರಿದ ಹೈಕೋರ್ಟ್‌, ಸಮಿತಿಯ ಅಧಿಕಾರಯುತ ಹಿರಿಯ ಅಧಿಕಾರಿ ಗುರುವಾರ ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿತು.

Advertisement

ಕಿಡ್ನಿ ಕಸಿಗೆ ಕೋರಿ ನಗರದ ವೈಟ್‌μàಲ್ಡ್‌ ನಿವಾಸಿ ಸಾಫ್ಟ್ ವೇರ್‌ ಇಂಜಿನಿಯರ್‌ ಮೊಹಮದ್‌ ಝೈದ್‌ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಡಿಸೆಂಬರ್‌ 6ಕ್ಕೆ ಕೈಗೆತ್ತಿಕೊಳ್ಳಿ. ಏಕೆಂದರೆ, ಹೈಕೋರ್ಟ್‌ ನಿರ್ದೇಶನವಿದ್ದರೂ, ಸಮಿತಿಯು ಕಿಡ್ನಿ ಕಸಿ ಮನವಿಗೆ ಅನುಮತಿ ನೀಡುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲೆ ಅನುಚೆಂಗಪ್ಪ ಬುಧವಾರ ನ್ಯಾಯಪೀಠವನ್ನು ಕೋರಿದರು. ಈ ವೇಳೆ ಹೈಕೋರ್ಟ್‌ ಡಿ.3ರಂದು ನೀಡಿದ ನಿರ್ದೇಶನದಂತೆ ಸಮಿತಿಗೆ ಮನವಿ ಸಲ್ಲಿಸಲಾಯಿತು. ಆದರೆ, ಸಮಿತಿಯು ಅದನ್ನು ಸ್ವೀಕರಿಸುತ್ತಿಲ್ಲ ಎಂದು ಅನುಚೆಂಗಪ್ಪ ನ್ಯಾಯಪೀಠದ ಗಮನಕ್ಕೆ ತಂದರು.

ಇದರಿಂದ ಕೋಪಗೊಂಡ ನ್ಯಾ.ಬಿ.ವೀರಪ್ಪ, ಕಿಡ್ನಿ ದಾನ ಮಾಡುವವರು ಹಾಗೂ ಪಡೆಯುವವರು ಇಬ್ಬರೂ ಕಸಿಗೆ
ಒಪ್ಪಿಕೊಂಡಿರುವಾಗ, ಸಮಿತಿ ಅನುಮತಿ ಯಾಕೆ ನೀಡುತ್ತಿಲ್ಲ. ಹೈಕೋರ್ಟ್‌ ನಿರ್ದೇಶನವಿದ್ದರೂ ಪಾಲಿಸುತ್ತಿಲ್ಲವೆಂದರೆ ಏನರ್ಥ? ಸರ್ಕಾರ ರೋಗಿಯ ಪ್ರಾಣದ ಜೊತೆಗೆ ಚೆಲ್ಲಾಟ ಆಡುತ್ತಿದ್ದೇಯಾ ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಸಮಿತಿಯ ಹಿರಿಯ
ಅಧಿಕಾರಿ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಿ ವಿಚಾರಣೆ ಮುಂದೂಡಿದರು.

Advertisement

Udayavani is now on Telegram. Click here to join our channel and stay updated with the latest news.

Next