Advertisement

ಇವರದ್ದು ಇಳಿ ವಯಸ್ಸಿನಲ್ಲಿ ಎವರೆಸ್ಟ್‌ ಏರುವ ಸಾಹಸ

03:45 AM Mar 07, 2017 | |

ಕಠ್ಮಂಡು: ನೇಪಾಳ ಮೂಲದ ಮಾಜಿ ಗೂರ್ಖಾ ಯೋಧರೊಬ್ಬರು ತಮ್ಮ 86ನೇ ವಯಸ್ಸಿನಲ್ಲಿ ಹಿಮಾಲಯ ಪರ್ವತವನ್ನೇರುವ ಸಾಹಸಕ್ಕೆ ಕೈಹಾಕಿದ್ದಾರೆ. ಈ ಮೂಲಕ ಜಗತ್ತಿನ ಅತಿ ಎತ್ತರದ ಶಿಖರವನ್ನೇರಿದ ಅತ್ಯಂತ ಹಿರಿಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುವುದು ಹಾಗೂ ಈ ಹಿಂದಿನ ತಮ್ಮ ದಾಖಲೆಯನ್ನು ಮರಳಿ ಪಡೆಯುವುದು ಇವರ ಉದ್ದೇಶ.

Advertisement

ನೇಪಾಳದ ಮ್ಯಾಗಿ ಜಿಲ್ಲೆ ಟಟೋಪಾನಿ ಮೂಲದ ಮಿನ್‌ ಬಹದ್ದೂರ್‌ ಶೇರ್‌ಚಾನ್‌ ಇಂಥ ಸಾಹಸಕ್ಕೆ ಕೈಹಾಕಿರುವ ವೃದ್ಧ. ಈ ಹಿಂದೆ 2008ರಲ್ಲಿ ಹಿಮಾಲಯದ ತುದಿ ತಲುಪಿದ್ದ ಶೇರ್‌ಚಾನ್‌, ಗಿರಿಶಿಖರವನ್ನೇರಿದ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದರು. ಆಗ ಅವರ ವಯಸ್ಸು 76. ಇದಾದ ಐದು ವರ್ಷಗಳ ನಂತರ ಜಪಾನ್‌ನ 80ರ ಹರೆಯದ ಯುಚಿರೊ ಮ್ಯುರಾ ಈ ದಾಖಲೆ ಹಿಂದಿಕ್ಕಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next