Advertisement

ಲಕ್ಷಾಂತರ ರೂ. ವಿನಿಯೋಗ ಬೀದಿದೀಪಗಳು ಮಾತ್ರ ನಿಸ್ತೇಜ

02:03 AM May 20, 2019 | Sriram |

ಕಾಸರಗೋಡು: ಲಕ್ಷಾಂತರ ರೂಪಾಯಿ ವ್ಯಯಿಸಿ ಕಾಸರಗೋಡು ನಗರದ ವಿವಿಧ ಭಾಗಗಳಲ್ಲಿ ಸ್ಥಾಪಿಸಿರುವ ಹೈಮಾಸ್ಟ್‌ ಲೈಟ್‌ಗಳು ಇದೀಗ ಉರಿಯುತ್ತಿಲ್ಲ. ಇದರಿಂದ ಕಾಸರಗೋಡು ನಗರ ರಾತ್ರಿಯಾಗುತ್ತಿದ್ದಂತೆ ಅಂಧಕಾರದಲ್ಲಿ ಮುಳುಗಿರುತ್ತದೆ. ಹೊಸ ಬಸ್‌ ನಿಲ್ದಾಣ ಮೊದಲಾದೆಡೆಗಳಲ್ಲಿ ಸ್ಥಾಪಿಸಿರುವ ಲೈಟುಗಳು ಕೆಟ್ಟು ಹೋಗಿದ್ದು, ಉರಿಯದೆ ಉಳಿದುಕೊಂಡಿವೆ.

Advertisement

ರಾತ್ರಿ ವೇಳೆ ನಗರಕ್ಕೆ ತಲುಪುವವರ ಸೌಕರ್ಯಗಳನ್ನು ಪರಿಗಣಿಸಿ ಲಕ್ಷಾಂತರ ರೂಪಾಯಿ ವಿನಿಯೋಗಿಸಿ ಬೀದಿ ದೀಪ ಗಳನ್ನು ಸ್ಥಾಪಿಸಲಾಗಿತ್ತು. ಇವು ಕೆಲವೇ ದಿನ ಗಳು ಮಾತ್ರ ಉರಿದಿದ್ದು, ಇದೀಗ ದುಃಸ್ಥಿತಿಯಲ್ಲಿವೆ. ಇದರಿಂದ ನಗರದಲ್ಲಿ ಕತ್ತಲೆ ಆವರಿಸಿದೆ. ರಾತ್ರಿಯಾದರೆ ವ್ಯಾಪಾರ ಸಂಸ್ಥೆಗಳ ಮುಂಭಾಗದಲ್ಲಿರುವ ಲೈಟ್‌ಗಳಿಂದ ಮಾತ್ರ ಬೆಳಕು ಲಭಿಸುತ್ತಿದೆ. ವ್ಯಾಪಾರ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸಿದ್ದರೆ ನಗರ ಪೂರ್ಣವಾಗಿ ಕತ್ತಲೆಯನ್ನೇ ಆವರಿಸುತ್ತಿದೆ.

ಕಾಸರಗೋಡು ನಗರದಲ್ಲಿ ರಾತ್ರಿ ಹೊತ್ತಿನಲ್ಲಿ ಬೆಳಕಿಲ್ಲದಿರುವುದು ಕಿಡಿಗೇಡಿಗಳಿಗೆ ವರದಾನವಾಗಿದೆ. ಆದರೆ ಬೀದಿ ದೀಪಗಳನ್ನು ದುರಸ್ತಿಗೊಳಿಸಿ ಉರಿಸಲು ಬೇಕಾದ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next