Advertisement
1921ರ ನ. 26 ರಂದು ಕೇರಳದ ಕೋಯಿಕ್ಕೋಡ್‌ನಲ್ಲಿ ಕ್ರೈಸ್ತ ಸಿರಿಯನ್ ಕುಟುಂಬದಲ್ಲಿ ಜನಿಸಿದ ಕುರಿಯನ್ ತಮ್ಮ 22ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ತಮ್ಮ ಸೋದರ ಸಂಬಂಧಿಯಾದ ಮ್ಯಾಥ್ಯೂ ಅವರ ಆಶ್ರಯದಲ್ಲಿ ಬೆಳೆದರು. ಆರಂಭ ದಲ್ಲಿ ಮದ್ರಾಸಿನ ಲೊಯೆಲೋ ಕಾಲೇಜಿನಲ್ಲಿ, ಅನಂತರ ಗಿಂಡಿ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮುಂದುವರಿಸಿ 1943ರಲ್ಲಿ ಮೆಕ್ಯಾನಿಕಲ್ ಎಂಜಿನಿಯ ರಿಂಗ್ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಪಡೆದರು. ಓರ್ವ ಉತ್ತಮ ಕುಸ್ತಿಪಟುವಾಗಿದ್ದ ಇವರಿಗೆ ಭಾರ ತೀಯ ಸೈನ್ಯ ಸೇರಬೇಕೆಂಬ ಅಭಿಲಾಷೆ ಇತ್ತಾದರೂ ತಾಯಿಯ ಆಶಯದಂತೆ ಜಮ್‌ಶೆಡ್‌ಪುರದ ಟಾಟಾ ಸ್ಟೀಲ್ ಕಂಪೆನಿಗೆ ಸೇರ್ಪಡೆಗೊಂಡರು. ಆದರೆ ಕೆಲವೇ ಸಮಯದಲ್ಲಿ ಭಾರತ ಸರಕಾರದಿಂದ ಉಚ್ಚ ವ್ಯಾಸಂಗಕ್ಕೆ ಶಿಷ್ಯ ವೇತನ ಪಡೆದು ಡೈರಿ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಸೇರಿದರು. ಮುಂದೆ ಬೆಂಗಳೂರಿನ ಎನ್‌ಡಿಆರ್‌ಐ ಸಂಸ್ಥೆಯಲ್ಲಿ 9 ತಿಂಗಳು ಅಭ್ಯಸಿಸಿದ ಬಳಿಕ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ತೆರಳಿದರು. ಅಮೆರಿಕದ ಮಿಚಿಗನ್ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿಯನ್ನು ಚಿನ್ನದ ಪದಕದೊಂದಿಗೆ ಪೂರೈಸಿದ ಕುರಿಯನ್ ಅವರ ಮನ ಮತ್ತೆ ತಾಯ್ನಾಡ ಸೇವೆಗಾಗಿ ತುಡಿಯುತ್ತಿತ್ತು. ಆದರೂ ತಮ್ಮ ಸೋದರ ಮಾವನ ಇಚ್ಛೆಯಂತೆ ಮತ್ತೆ ಡೈರಿ ತಾಂತ್ರಿಕ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ನ್ಯೂಜಿಲೆಂಡ್‌ಗೆ ತೆರಳಿದರು.
Related Articles
Advertisement
ಗುಜರಾತ್‌ನ ಅಮೂಲ್ ಡೈರಿಯಿಂದ ರೈಲು ಟ್ಯಾಂಕರ್‌ಗಳ ಮೂಲಕ ಪಶ್ಚಿಮ ಬಂಗಾಲದ ಕಲ್ಕತ್ತಾಕ್ಕೆ ಹಾಲನ್ನು ರವಾನಿಸುವ ಪ್ರತ್ಯೇಕ “ಕ್ಷೀರವಾಹಿನಿ’ ಆರಂಭಿಸಿದ ಕೀರ್ತಿ ಡಾ| ಕುರಿಯನ್‌ಗೆ ಸಲ್ಲುತ್ತದೆ. ಸಹಕಾರಿ ಮಾದರಿಯಲ್ಲಿ ರೈತರಿಂದ, ರೈತರಿಗಾಗಿ, ರೈತರೇ ಸ್ಥಾಪಿಸಿದ ಪ್ರಾಥಮಿಕ ಹಾಲು ಉತ್ಪಾದಕರ ಸಂಘ ಮತ್ತು ಜಿಲ್ಲಾ ಹಾಲು ಒಕ್ಕೂಟ ಹಾಗೂ ಮಾರುಕಟ್ಟೆ ಮಹಾ ಮಂಡಳ ಹೀಗೆ ತ್ರಿಸ್ತರದ ವ್ಯವಸ್ಥೆಯನ್ನು ರೂಪಿಸಿ ಮಹಾತ್ಮಾ ಗಾಂಧೀಜಿ ಅವರ ಕನಸಾದ ಗ್ರಾಮೀಣ ಭಾರತದ ಜನಸಾಂದ್ರತೆಯ ಮಾನವೀಯ ಶಕ್ತಿಗಳನ್ನು ದ್ರುವೀಕರಿಸಿ ಭಾರತವನ್ನು ವಿಶ್ವದ ಕ್ಷೀರಭೂಪಟದಲ್ಲಿ ಪ್ರಥಮ ಸ್ಥಾನಕ್ಕೆ ತಂದ ಕೀರ್ತಿ ಡಾ| ಕುರಿಯನ್‌ರದ್ದು.
ಸಹಕಾರಿ ಕ್ಷೀರ ಆಂದೋಲನದ ಪ್ರಯೋಜನ ದೇಶದ ಇತರ ಭಾಗಗಳಿಗೂ ದೊರಕುವಂತಾಗಲು ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮವನ್ನು ಆನಂದ್ ನಲ್ಲಿ ಸ್ಥಾಪಿಸಲಾಯಿತು. ಡಾ| ಕುರಿಯನ್ ಇದರ ಪ್ರಥಮ ಅಧ್ಯಕ್ಷರಾದರು. ರಾಷ್ಟ್ರೀಯ ಹೈನು ಅಭಿವೃದ್ಧಿ ನಿಗಮದ ಮಾರ್ಗದರ್ಶನದಲ್ಲಿ “ಕ್ಷೀರಧಾರಾ’ ಯೋಜನೆಯನ್ನು ಜಾರಿಗೊಳಿಸಿ ಹಳ್ಳಿಗಳಲ್ಲಿ ಹಾಲು ಉತ್ಪಾದಕರ ಸಂಘಗಳನ್ನು ತೆರೆಯುವಲ್ಲಿ ಅಗತ್ಯ ನೆರ ವನ್ನು ನೀಡಲಾಯಿತು. ಈ ರೀತಿ ಗ್ರಾಮೀಣ ರೈತರು ಉತ್ಪಾದಿಸಿದ ಹಾಲನ್ನು ಉತ್ಪನ್ನಗಳನ್ನಾಗಿ ಪರಿವರ್ತಿಸಿ ಮಾರುಕಟ್ಟೆ ಮಾಡಲು ಕುರಿಯನ್ “ಗುಜರಾತ್ ಹಾಲು ಮಾರಾಟ ಮಹಾ ಮಂಡಳಿ’ ಸ್ಥಾಪಿಸಿದರು. ಆ ಬಳಿಕ ದೇಶದ ವಿವಿಧ ರಾಜ್ಯಗಳಲ್ಲಿ ಅಮೂಲ್ ಮಾದರಿಯಲ್ಲಿ ಹಾಲು ಮಹಾಮಂಡಳಗಳು ಸ್ಥಾಪನೆಗೊಂಡವು. ರೈತರ ಮಕ್ಕಳೇ ಡೈರಿ ವ್ಯವಸ್ಥಾಪಕ ರಾಗಬೇಕೆಂಬ ಅಭಿಲಾಷೆಯಿಂದ 1979ರಲ್ಲಿ ಗುಜ ರಾತ್‌ನಲ್ಲಿ ಐಆರ್‌ಎಂಎ ಎಂಬ ಸಂಸ್ಥೆಯನ್ನು ಡಾ| ಕುರಿಯನ್ ಹುಟ್ಟು ಹಾಕಿದರು. ಈ ಸಂಸ್ಥೆ ಇಂದು ಅಂತಾರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ.
2010-2011ರಲ್ಲಿ ಭಾರತ ವಿಶ್ವದ ಅಗ್ರಮಾನ್ಯ ಹಾಲು ಉತ್ಪಾದನ ದೇಶವಾಗಿ ಮೂಡಿ ಬಂದಿದ್ದು ನಾವೆಲ್ಲರೂ ಹೆಮ್ಮೆ ಪಡಬೇಕಾದ ವಿಷಯ. 1976 ರಲ್ಲಿ ಗುಜರಾತ್‌ನ ರೈತರು ತಲಾ 2/- ರೂ ಹಣ ಹೂಡಿ ಆರಂಭಿಸಿದ ರಾಷ್ಟ್ರೀಯ ಭಾವೈಕ್ಯದ ಸಿನೆಮಾ “ಮಂಥನ ರಾಷ್ಟ್ರೀಯ ಪ್ರಶಸ್ತಿ ಪಡೆದುದಲ್ಲದೇ ಆಸ್ಕರ್ ಪ್ರಶಸ್ತಿಗೆ ಶಿಫಾರಿಸಲ್ಪಟ್ಟಿತ್ತು. “ಸುರಭಿ’ ಧಾರಾವಾಹಿ, ಅಮರ ಚಿತ್ರಕಥಾ ನಿರ್ಮಿಸಿದ “ಶತಕೋಟಿ ಲೀಟರ್’ ಚಿಂತನೆಯ ಸರದಾರ ಕುರಿಯನ್ ಕುರಿತಾದ ಕಾಮಿಕ್ ಪುಸ್ತಕ ದಾಖಲೆಯನ್ನು ಸೃಷ್ಟಿಸಿತು. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿರುವ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕೃಷಿ ರತ್ನ ಮುಂತಾದ ಹಲವಾರು ಪ್ರಶಸ್ತಿಗಳಲ್ಲದೇ ರಾಮನ್ ಮ್ಯಾಗ್ಸೆಸ್ಸೆ ಅವಾರ್ಡ್, ವಿಶ್ವ ಆಹಾರ ಪಾರಿತೋಷಕ, 1993ರ “ಅಂತಾರಾಷ್ಟ್ರೀಯ ಡೈರಿ ವ್ಯಕ್ತಿ ಪ್ರಶಸ್ತಿ’, ನೆದರ್‌ಲ್ಯಾಂಡ್, ಜಪಾನ್, ಫ್ರಾನ್ಸ್, ಕೊರಿಯಾ ಮುಂತಾದ ಹಲವಾರು ದೇಶಗಳ ಅತ್ಯುನ್ನತ ಪ್ರಶಸ್ತಿ, ಅಲ್ಲದೇ ಸುಮಾರು 15 ಕ್ಕೂ ಹೆಚ್ಚು ದೇಶ-ವಿದೇಶಗಳ ವಿಶ್ವವಿದ್ಯಾನಿಲಯಗಳು ನೀಡಿದ ಗೌರವ ಡಾಕ್ಟರೇಟ್ ಡಾ| ಕುರಿಯನ್ ಅವರ ಸಾಧನೆಗೆ ಸಂದ ಗೌರವವಾಗಿದೆ. 2014ರಿಂದ ಡಾ| ಕುರಿಯನ್ ಅವರ ಜನ್ಮ ದಿನವಾದ ನ. 26 ರಂದು ದೇಶಾದ್ಯಂತ “ರಾಷ್ಟ್ರೀಯ ಕ್ಷೀರ ದಿನಾಚರಣೆ’ಯನ್ನು ಆಚರಿಸಲಾಗುತ್ತಿದೆ. ಈ ಬಾರಿ ಡಾ| ಕುರಿಯನ್ ಅವರ ಜನ್ಮಶತಮಾನೋತ್ಸವ ವರ್ಷವಾಗಿದ್ದು ರಾಷ್ಟ್ರೀಯ ಕ್ಷೀರ ದಿನಾಚರಣೆಗೆ ಹೆಚ್ಚಿನ ಮಹತ್ವ ಲಭಿಸಿದೆ.
2012ರ ಸೆ. 9ರಂದು ಕುರಿಯನ್ ಅವರು 90ನೇ ಇಳಿವಯಸ್ಸಿನಲ್ಲಿ ಗುಜರಾತ್‌ನ ತಮ್ಮ ಕರ್ಮ ಭೂಮಿಯಲ್ಲಿ ಕೊನೆಯುಸಿರನ್ನೆಳೆದರು. ಭಾರತದ ಪ್ರತಿಯೊಬ್ಬ ಹಾಲು ಉತ್ಪಾದಕರಿಗೆ ಜೀವನಾಧಾರ ವನ್ನು ಕಲ್ಪಿಸಿಕೊಟ್ಟು ವಿಶ್ವದಲ್ಲಿ ದೇಶವು ಹಾಲು ಉತ್ಪಾದನೆಯಲ್ಲಿ ಉತ್ತುಂಗಕ್ಕೇರಲು ಕಾರಣೀಭೂತ ರಾದ “ಮಿಲ್ಕ್ ಮ್ಯಾನ್ ಆಫ್ ಇಂಡಿಯಾ’ ಖ್ಯಾತಿಯ ಡಾ| ವರ್ಗೀಸ್ ಕುರಿಯನ್ ಪ್ರಾತಃಸ್ಮರಣೀಯರು.
-ಡಿ. ಎಸ್. ಹೆಗಡೆ, ಮಂಗಳೂರು