Advertisement

ಜೀವನಕ್ಕೆ ಹಾಲು, ಬದುಕುವುದಕ್ಕೆ ತುಪ್ಪ

11:55 AM Nov 03, 2017 | |

ಆಗ ಬರಬಹುದು, ಈಗ ಬರಬಹುದು ಎಂದು ಕಾದಿದ್ದ “ಹಾಲು ತುಪ್ಪ’ ಇದೀಗ ಕೊನೆಗೂ ಇಂದು ಬಿಡುಗಡೆಯಾಗುತ್ತಿದೆ. ಚಿತ್ರವನ್ನು ರಾಘವೇಂದ್ರ ಎನ್ನುವವರು ರಾಜ್ಯಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಯಾಗುತ್ತಿರುವ ವಿಷಯವನ್ನು ಹೇಳಿಕೊಳ್ಳುವುದಕ್ಕೆಂದೇ ನಿರ್ಮಾಪಕ ದೊಡ್ಮನೆ ವೆಂಕಟೇಶ್‌ ಬಂದಿದ್ದರು.

Advertisement

ಅವರ ಜೊತೆಗೆ ನಿರ್ದೇಶಕ ಶಶಾಂಕ್‌ ರಾಜ್‌, “ತಿಥಿ’ ಖ್ಯಾತಿಯ ಸೆಂಚ್ಯುರಿ ಗೌಡ ಮತ್ತು ಗಡ್ಡಪ್ಪ, ನಾಯಕ ಪವನ್‌, ಸಂಗೀತ ನಿರ್ದೇಶಕ ಇಂದ್ರಸೇನಾ ಎಲ್ಲರೂ ಇದ್ದರು. ಈ ಚಿತ್ರವನನು ಬಿಡುಗಡೆ ಮಾಡುವುದಕ್ಕೆ ಹಲವು ಹಳೆಯ ವಿತರಕರನ್ನು ಸಂಪರ್ಕಿಸಿದರಂತೆ ವೆಂಕಟೇಶ್‌. ಯಾರೂ ಸರಿಯಾಗಿ ಸ್ಪಂದಿಸದ ಕಾರಣ, ರಾಘವೇಂದ್ರ ಅವರ ಮೊರೆ ಹೋಗಿದ್ದಾರೆ.

“ನಾನೂ ಆರಂಭದಲ್ಲಿ ಹೊಸಬನಾಗಿದ್ದೆ. ಹೊಸಬರಿಗೆ ಅವಕಾಶ ನೀಡಿದರೆ ತಾನೇ, ಅವರೇನೆಂದು ಗೊತ್ತಾಗುವುದು’ ಎಂದರು ವೆಂಕಟೇಶ್‌. ಈ ಹಳ್ಳಿ ಸೊಗಡಿನ ಕಥೆಗೆ ದೇಸಿ ಸಂಗೀತ ಸಂಯೋಜಿಸಿದ್ದಾರಂತೆ ಸಂಗೀತ ನಿರ್ದೇಶಕ ಇಂದ್ರಸೇನಾ. “ದೇವರ ಸೃಷ್ಟಿ ಹಾಲು, ಮನುಷ್ಯ ಸೃಷ್ಟಿ ಮಾಡಿದ್ದು ತುಪ್ಪ. ಜೀವನಕ್ಕೆ ಹಾಲು, ಬದುಕುವುದಕ್ಕೆ ತುಪ್ಪ ಬೇಕು.

ಈ ಚಿತ್ರದ ಮೂಲಕ ಹಾಲು-ತುಪ್ಪ ನಮಗೆಷ್ಟು ಮುಖ್ಯ ಎಂಬುದನ್ನು ಹೇಳಲಾಗಿದೆ’ ಎಂದು ವ್ಯಾಖ್ಯಾನ ಮಾಡಿದರು ಇಂದ್ರಸೇನಾ. ಚಿತ್ರದಲ್ಲಿ ಗಡ್ಡಪ್ಪನವರು ನಾಟಿ ವೈದ್ಯನಾಗಿ ನಟಿಸಿದರೆ, ಅವರ ಮೊಮ್ಮಗನಾಗಿ ಗಡ್ಡಪ್ಪ ಅಭಿನಯಿಸಿದ್ದಾರೆ. ಇನ್ನು ಅವರ ಮೊಮ್ಮಗನ ಪಾತ್ರದಲ್ಲಿ ನಾಯಕ ಪವನ್‌ ಇದ್ದಾರೆ. ವೃತ್ತಿಯಲ್ಲಿ ಮಾಡಲ್‌ ಆಗಿರುವ ವಿಂಧ್ಯಾ ಈ ಚಿತ್ರದಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next