ಸುರತ್ಕಲ್: ಅಂಗಡಿಗಳಿಗೆ ಹಾಲಿನ ಪ್ಯಾಕೆಟ್ ಸರಬರಾಜು ಮಾಡುವ ಸಂಸ್ಥೆಗಳು ಹೆಚ್ಚಾಗಿ ರಾತ್ರಿ ವೇಳೆ ಈ ಕೆಲಸವನ್ನು ಮಾಡುತ್ತವೆ. ತಡರಾತ್ರಿ ವೇಳೆ ಅಂಗಡಿಗಳ ಮುಂಭಾಗದಲ್ಲಿ ಹಾಲಿನ ಕ್ರೇಟ್ ಗಳನ್ನು ಇಟ್ಟು ಹೋಗುವುದು ವಾಡಿಕೆ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳನೊಬ್ಬ ಅಂಗಡಿಗಳ ಎದುರುಗಡೆ ಇರಿಸಿದ ಹಾಲಿನ ಪ್ಯಾಕೆಟ್ ಗಳನ್ನು ಕ್ರೇಟ್ ಸಹಿತವಾಗಿ ಎಗರಿಸುವ ಕಾರ್ಯಕ್ಕೆ ಮುಂದಾಗಿದ್ದಾನೆ. ಈ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆ ನಡೆದಿದ್ದು ಮಂಗಳೂರಿನ ಕೊಟ್ಟಾರ ಬಳಿ. ಇಲ್ಲಿನ ಶ್ರೀ ಕೃಷ್ಣ ಮಿಲ್ಕ್ ಪಾರ್ಲರ್ ನಲ್ಲಿ ಈ ಕಳ್ಳತನ ನಡೆದಿದೆ. ಡಿ.30ರಂದು ಒಮ್ಮೆ ಈ ಘಟನೆ ನಡೆದಿದ್ದರೆ, ಫೆ.2ರಂದು ಮತ್ತೆ ನಡೆದಿದೆ.
ಇದನ್ನೂ ಓದಿ:ಮನೆಗೆ ಬೆಂಕಿ: ಲಕ್ಷ ರೂ. ನಗದು, ಗೃಹೋಪಯೋಗಿ ವಸ್ತು ಆಹುತಿ
ಮೂರು ಕ್ರೇಟ್ ಗಳಲ್ಲಿನ 36 ಲೀಟರ್ ಹಾಲಿನ ಪ್ಯಾಕೆಟ್ ಗಳನ್ನು ಈ ಕಳ್ಳ ಎಗರಿಸಿದ್ದಾನೆ. ಬೈಕ್ ನಲ್ಲಿ ಬರುವ ಈ ಕಳ್ಳ ಅಂಗಡಿಯ ಮುಂಭಾಗದಿಂದ ಕ್ರೇಟ್ ಗಳನ್ನು ಹಿಡಿದು ಪರಾರಿಯಾಗುತ್ತಾನೆ.
ಈ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.