Advertisement

ಬಾಡಿಗೆ ಕಟ್ಟಡದಲ್ಲಿದ್ದ ಸಂಘವೀಗ ತನ್ನ ಕಟ್ಟಡವನ್ನೇ ಬಾಡಿಗೆಗೆ ನೀಡಿದೆ

09:48 PM Feb 15, 2020 | mahesh |

ಅಲ್ಲಿಪಾದೆ ಚರ್ಚ್‌ನ ಧರ್ಮಗುರುಗಳ ಮಾರ್ಗದರ್ಶನದೊಂದಿಗೆ ಸ್ಥಳೀಯ ಮುಂದಾಳುಗಳ ಕಲ್ಪನೆಯ ಕೂಸಾಗಿ ಆರಂಭಗೊಂಡ ಸಂಘವು ಹೈನುಗಾರರ ಜೀವನಾಧಾರ ಸಂಸ್ಥೆಯಾಗಿದೆ.

Advertisement

ಬಂಟ್ವಾಳ: ಗ್ರಾಮೀಣ ಭಾಗದ ರೈತರಿಗೆ ಹೊಸ ಆದಾಯದ ಮಾರ್ಗವನ್ನು ಒದಗಿಸುವ ದೃಷ್ಟಿಯಿಂದ ಅಲ್ಲಿಪಾದೆ ಚರ್ಚ್‌ನ ಧರ್ಮಗುರುಗಳ ಮಾರ್ಗದರ್ಶನದೊಂದಿಗೆ ಸ್ಥಳೀಯ ಮುಂದಾಳುಗಳ ಕಲ್ಪನೆಯ ಕೂಸಾಗಿ ಆರಂಭಗೊಂಡ ಅಲ್ಲಿಪಾದೆ ಹಾಲು ಉತ್ಪಾ ದಕರ ಸಹಕಾರ ಸಂಘವು ಹೈನುಗಾರರ ಜೀವನಾಧಾರ ಸಂಸ್ಥೆಯಾಗಿದೆ. ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಸಂಘವು ಪ್ರಸ್ತುತ ತನ್ನ ಕಟ್ಟಡವನ್ನೇ ಬಾಡಿಗೆಗೆ ನೀಡುವ ಹಂತಕ್ಕೆ ಬೆಳೆದಿದೆ.

ಸಂಘವು 1988ರ ನ. 16ರಂದು ಸತೀಶ್‌ಕುಮಾರ್‌ ಅನೆಜ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿದ್ದು, 31 ವರ್ಷಗಳ ಹೆಗ್ಗಳಿಕೆ ಗಳಿಸಿಕೊಂಡಿದೆ. ಅಲ್ಲಿಪಾದೆ ಸಂತ ಅಂತೋನಿಯವರ ಚರ್ಚ್‌ನ ಅಂದಿನ ಧರ್ಮಗುರು ವಂ| ಆಲ್ಫಾನ್‌ ಡಿ’ಸೋಜಾ, ಲಿಂಗಪ್ಪ ಪೂಜಾರಿ ಅವರ ಮಾರ್ಗದರ್ಶನ ದೊಂದಿಗೆ ಶ್ರೀಧರ್‌ ರಾವ್‌ ಕೇದಿಗೆ ಅವರ ಬಾಡಿಗೆ ಕಟ್ಟಡದಲ್ಲಿ ಪ್ರಾರಂಭಗೊಂಡಿತ್ತು.

ಪ್ರಾರಂಭದಲ್ಲಿ 51 ಸದಸ್ಯರನ್ನು ಹೊಂದಿ 30 ಲೀ. ಹಾಲು ಸಂಗ್ರಹಿಸುತ್ತಿದ್ದ ಸಂಘವು ಪ್ರಸ್ತುತ ದೇವಶ್ಯಪಡೂರು, ನಾವೂರು, ಸರಪಾಡಿ ಬ್ಲಾಕ್‌ಗಳ ವ್ಯಾಪ್ತಿ ಹೊಂದಿ 189 ಸದಸ್ಯರ ಮೂಲಕ ದಿನಕ್ಕೆ ಸರಾಸರಿ 700 ಲೀ. ಹಾಲು ಸಂಗ್ರಹಿಸುತ್ತಿದೆ. ಸಂಘ ದಲ್ಲಿ ಪ್ರಸ್ತುತ ನಾರಾಯಣ ಕಿನ್ನಿಯೂರು ಅಧ್ಯಕ್ಷರಾಗಿ, ಪದ್ಮನಾಭ ಎಂ. ಅವರು ಕಾರ್ಯ ದರ್ಶಿಯಾಗಿ, ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಾಡಿಗೆಯೂ ಬರುತ್ತಿದೆ
ಸಂಘವು ಸುಮಾರು 5 ಸೆಂಟ್ಸ್‌ ನಿವೇಶನದಲ್ಲಿ ಸ್ವಂತ ಕಟ್ಟಡವನ್ನು ಹೊಂದಿದ್ದು, ಕಟ್ಟಡದಲ್ಲಿ ಹಾಲು ಉತ್ಪಾದಕರ ಸಂಘದ ಜತೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಚೇರಿ, ವಿಜಯ ಬ್ಯಾಂಕ್‌ ಶಾಖೆ ಹಾಗೂ ಖಾಸಗಿ ಶಾಮಿಯಾನ ಮಳಿಗೆಯೊಂದಕ್ಕೆ ಬಾಡಿಗೆಗಾಗಿ ನೀಡಲಾಗಿದೆ.
ಅಂದಿನ ಅಧ್ಯಕ್ಷ ಕೆ. ಜಯರಾಮ ಶೆಟ್ಟಿ ಕುಕ್ಕಿಲ ಅವರ ದೂರದೃಷ್ಟಿ, ಶ್ರಮದ ಫಲವಾಗಿ ಸಂಘಕ್ಕೆ ಸುಸಜ್ಜಿತ ಕಟ್ಟಡ ನಿರ್ಮಾಣದ ಜತೆಗೆ ಪ್ರಸ್ತುತ ವಾರ್ಷಿಕವಾಗಿ ಸುಮಾರು 73 ಸಾವಿರ ರೂ. ಆದಾಯ ನೀಡುವ ಕಟ್ಟಡ ನಿರ್ಮಾಣವಾಗಿತ್ತು. ಇನ್ನಷ್ಟು ಅನುಕೂಲದ ದೃಷ್ಟಿಯಿಂದ ಸಂಘದ ಕಟ್ಟಡವನ್ನು ವಿಸ್ತರಿಸುವ ಗುರಿಯನ್ನು ಹಾಲಿ ಆಡಳಿತ ಮಂಡಳಿ ಹೊಂದಿದೆ.

Advertisement

ಶೀತಲೀಕರಣ ಘಟಕ
ಅಲ್ಲಿಪಾದೆ ಸಂಘದಲ್ಲಿ 2018ರಲ್ಲಿ ಶೀತಲೀಕರಣ ಘಟಕ ಆರಂಭಗೊಂಡಿದ್ದು, ಪ್ರಸ್ತುತ ಅಲ್ಲಿಪಾದೆ ಸಹಿತ ಕಜೆಕಾರ್‌, ಕಕ್ಯಪದವು ಹಾಲು ಉತ್ಪಾದಕರ ಸಂಘಗಳ ಹಾಲನ್ನು ಇಲ್ಲಿನ ಶೀತಲೀಕರಣ (ಬಿಎಂಸಿ) ಘಟಕದಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಪ್ರಸ್ತುತ 3,000 ಲೀ. ಸಾಮರ್ಥ್ಯ ಹೊಂದಿದ್ದು, ಮುಂದಿನ ದಿನಗಳಲ್ಲಿ ಅದನ್ನು 5 ಸಾವಿರ ಲೀ.ಗೆ ಏರಿಸುವ ಗುರಿ ಸಂಘದ ಮುಂದಿದೆ.

ಪ್ರತಿಭಾ ಪುರಸ್ಕಾರ
ಸಂಘವು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತನ್ನ ಪ್ರತಿ ಮಹಾಸಭೆಯಲ್ಲಿ ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುತ್ತಿದೆ. ಜತೆಗೆ ಸದಸ್ಯರಿಗೆ ಗರಿಷ್ಠ ಬೋನಸ್‌ ನೀಡಿ ಪ್ರೋತ್ಸಾಹಿಸುತ್ತಿದೆ. ಊರಿನ ಇತರ ಸಾಮಾಜಿಕ ಕಾರ್ಯಗಳಿಗೆ ಸಂಘವು ಬೆಂಬಲವನ್ನು ನೀಡುತ್ತಿದೆ. ಸಂಘದ ಸಾಧನೆಗೆ ಹಲವು ಗೌರವಗಳೂ ಲಭಿಸಿವೆ.

ಪ್ರಸ್ತುತ ಸಂಘವು ಪ್ರಗತಿಯಲ್ಲಿ ಮುನ್ನಡೆಯುತ್ತಿದ್ದು, ಸುಸಜ್ಜಿತ ಕಟ್ಟಡದೊಂದಿಗೆ ಶೀತಲೀಕರಣ ಘಟಕವೂ ಕಾರ್ಯಾಚರಿಸುತ್ತಿದೆ. ಗುಣಮಟ್ಟದ ಹಾಲಿಗಾಗಿ ರೈತರಿಗೆ ಉತ್ತಮ ದರವನ್ನೂ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಂಘದ ಕಟ್ಟಡವನ್ನು ವಿಸ್ತರಿಸುವ ಗುರಿಯನ್ನೂ ಹೊಂದಿದ್ದೇವೆ.
– ನಾರಾಯಣ ಕಿನ್ನಿಯೂರು, ಅಧ್ಯಕ್ಷರು

ಮಾಜಿ ಅಧ್ಯಕ್ಷರು ಸತೀಶ್‌ಕುಮಾರ್‌ ಅನೆಜ, ಕೆ. ಜಯರಾಮ ಶೆಟ್ಟಿ ಕುಕ್ಕಿಲ, ಶ್ರೀನಿವಾಸ ಮೇಸ್ತ್ರಿ ಅಂಕರಗುಂಡಿ.
ಮಾಜಿ ಕಾರ್ಯದರ್ಶಿಗಳು ವಿಕ್ಟರ್‌ ಪಿಂಟೋ ಅಲ್ಲಿಪಾದೆ, ನಂದಾ.

ಹೈನುಗಾರಿಕೆ ಬಗ್ಗೆ ಹೇಳುವು ದೆಂದರೆ ಗ್ರಾಮೀಣ ಆರ್ಥಿಕತೆಯ ಪ್ರಮುಖ ಚಕ್ರ. ಈ ದಿಸೆಯಲ್ಲೇ ನಮ್ಮ ಕ್ಷೀರಕಥನ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next