Advertisement

ಹಾಲು ಉತ್ಪಾದಕರು ಗುಣಮಟ್ಟ ಕಾಪಾಡಲು ಗಮನ ಹರಿಸಬೇಕು’

08:15 PM Jun 07, 2019 | Sriram |

ಬದಿಯಡ್ಕ: ಉತ್ತಮ ಗುಣಮಟ್ಟದ ಹಾಲಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಹಾಲುತ್ಪಾದಕರು ಗುಣಮಟ್ಟ ಕಾಪಾಡುವತ್ತ ಹೆಚ್ಚಿನ ಗಮನ ಹರಿಸಬೇಕು. ಎಂದು ಹಾಲುತ್ಪಾದಕರ ಸಂಘದ ಅಧ್ಯಕ್ಷ ಕೆ.ಎ.ಐತ್ತಪ್ಪ ಶೆಟ್ಟಿ ಹೇಳಿದರು. ಆವರು ಬದಿಯಡ್ಕ ಗುರುಸದನದಲ್ಲಿ ಜರಗಿದ ಬದಿಯಡ್ಕ ಟೌನ್‌ ಕ್ಷೀರೋತ್ಪಾದಕ ಸಹಕಾರಿ ಸಂಘದ 2018-19ನೇ ವರ್ಷದ ವಾರ್ಷಿಕ ಮಹಾಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಬಿ.ನಿಖೀತ ಶಂಕರ್‌ ಪ್ರರ್ಥನೆ ಹಾಡಿದರು. ಸಂಘದ ನಿರ್ದೇಶಕರಾದ ಸದಾನಂದ ರೈ, ಪದ್ಮಲತಾ ಶೆಟ್ಟಿ, ಮಲ್ಲಿಕಾ ಆರ್‌.ರೈ ಶುಭಾಶಂಸನೆಗೈದರು. ಸಂಘದ ಕಾರ್ಯದರ್ಶಿ ಸುರೇಖ ಸ್ವಾಗತಿಸಿ, ಕೃಪ ವಂದಿಸಿದರು.

Advertisement

1998ರಲ್ಲಿ ಸ್ಥಾಪಿಸಲ್ಪಟ್ಟ ಈ ಸಂಘವು, ಕಳೆದ 21 ವರ್ಷಗಳಲ್ಲಿ ಬದಿಯಡ್ಕ ಪಂಚಾಯತಿನ 7,8,9,10,12 ಮತ್ತು 14ನೇ ವಾರ್ಡುಗಳ ಭಾಗಿಕ ಪ್ರದೇಶಗಳ ಕ್ಷೀರ ಉತ್ಪಾದನಾ ಚಟುವಟಿಕೆಗಳಲ್ಲಿ ಸಂಘದ ಸದಸ್ಯ ಹಾಲು ಉತ್ಪಾದಕ ಬಂಧುಗಳ ನೆರವಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸಂಘವು ಈ ಕಾಲಘಟ್ಟದಲ್ಲಿ ಆಡಳಿತೆಯ ಅನುಕೂಲಕ್ಕೆ ಬೇಕಾಗುವ ಕಂಪ್ಯೂಟರ್‌, ಎನಲೆ„ಸರ್‌ ಇನ್‌ವರ್ಟರ್‌, ತೂಕದ ಮಿಷಿನ್‌ ಒಳಗೊಂಡಂತೆ ಒಟ್ಟು ಸುಮಾರು ರೂ.4 ಲಕ್ಷಗಳಷ್ಟು ಉಪಕರಣಗಳನ್ನು ಖರೀದಿಸಿದ್ದು, ಸಂಘವು ಯಾವುದೇ ಸಾಲ ಯಾ ಇತರ ಆರ್ಥಿಕ ಬಾಧ್ಯತೆಯ ಒತ್ತಡಗಳಿಲ್ಲದೆ, ದೆ„ನಂದಿನ ವಹಿವಾಟಿಗಾಗಿ ಸುಮಾರು ರೂ 3 ಲಕ್ಷಗಳಷ್ಟನ್ನು ಪ್ರತ್ಯೇಕ ಮೀಸಲಿಡಲಾಗಿದೆ.

ಮಾತ್ರವಲ್ಲದೇ ಬ್ಯಾಂಕ್‌ ನಿಕ್ಷೇಪವಾಗಿ ಸುಮಾರು ರೂ 6 ಲಕ್ಷಗಳನ್ನು ಹೊಂದಿದೆ. ಆದರೆ ಸ್ವಂತವಾಗಿ ಒಂದು ಕಟ್ಟಡದ ಕೊರತೆಯಿದ್ದು ಸಧ್ಯದಲ್ಲಿಯೇ ಅದು ಕೂಡ ಕೈಗೂಡಬಹುದೆಂಬ ಆತ್ಮವಿಶ್ವಾಸ ಸಂಘಕ್ಕಿದೆ. ಸಂಘವು ಕ್ಷೀರ ವಿಕಸನ ಇಲಾಖೆಗೆ ಸಲ್ಲಿಸಬೇಕಾದ ನಿರ್ದಿಷ್ಟ ಲೆಕ್ಕಪತ್ರಗಳನ್ನು ಸಲ್ಲಿಸುತ್ತಿದೆ. 2018-19ನೇ ಸಾಲಿನ ಕಾಸರಗೋಡು ಬ್ಲೋಕಿನ ಕ್ಷೀರ ಸಂಗಮವನ್ನು ಸಂಘದ ನೇತೃತ್ವದಲ್ಲಿ ಬದಿಯಡ್ಕದಲ್ಲಿ ಯಶಸ್ವಿಯಾಗಿ ನಡೆಸುವ ಅವಕಾಶ ಸಂಘದ ಪಾಲಿಗೆ ದೊರಕಿದೆ ಎಂದವರು ತಿಳಿಸಿದರು.

ಸಂಘದ ದೆ„ನಂದಿನ ವ್ಯವಹಾರಗಳನ್ನು ಪ್ರಾದೇಶಿಕ ಮಾರಾಟ ಇತ್ಯಾದಿಗಳನ್ನು ಪಾರದರ್ಶಕವಾಗಿಡುವ ನಿಟ್ಟಿನಲ್ಲಿ ಸೊಸೆ„ಟಿಯ ದೆ„ನಂದಿನ ಖರ್ಚು ವೆಚ್ಚಗಳ ಸಂದಾಯ ರಶೀದಿಗಳನ್ನು ಪ್ರತ್ಯೇಕ, ಪ್ರತ್ಯೇಕ ಫೆ„ಲು ರೂಪದಲ್ಲಿ ಶೇಖರಿಸಿಡುವುದು ಮತ್ತು ಬಂದ ಹಣವನ್ನು ದಿನನಿತ್ಯ ಬ್ಯಾಂಕ್‌ ಲೆಕ್ಕಕ್ಕೆ ಜಮೆ ಮಾಡುವ ವ್ಯವಸ್ಥೆ ಮಾಡಲಾಗಿದೆ. ಸಂಘದ 2018-19ನೇ ವರ್ಷದ ಆಯ-ವ್ಯಯಗಳನ್ನು ಮತ್ತು 2019-20ರ ಬಜೆಟನ್ನು ಪ್ರತ್ಯೇಕ ಪ್ರತ್ಯೇಕವಾಗಿ ಸಭೆಯ ಮುಂದೆ ಮಂಡಿಸಲಾಯಿತು. ಕಾಸರಗೋಡು ಕ್ಷೀರ ವಿಕಸನ ಇಲಾಖೆಯ ಉಪಮಹಾಪ್ರಬಂಧಕರು,ಡೈರಿ ವಿಕಸನ ಆಫೀಸರು, ಕಾಸರಗೋಡು ವಿಭಾಗ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳ ಪೂರ್ಣ ಸಹಕಾರ, ಮಾರ್ಗದರ್ಶನಗಳನ್ನು ನಿಭಾಯಿಸುವ ಮಿಲ್ಮಾ ಸಂಸ್ಥೆಗೂ ಆಭಿನಂದನೆ ಸಮರ್ಪಿಸಲಾಯಿತು.

2018-19ರ ಆಡಳಿತ ವರದಿ, ಆಯ-ವ್ಯಯಗಳ ವರದಿ ಮಂಡಿಸಲಾಯಿತು. 2019-20ನೇ ವರ್ಷದ ಬಜೆಟ್‌ ಮಂಡನೆಯ ಬಳಿಕ ವಿವಿಧ ವಿಷಯ ಚರ್ಚಿಸಲಾಯಿತು.

Advertisement

ಪೂರಕ ಮಾರುಕಟ್ಟೆ ವ್ಯವಸ್ಥೆ
ಕಾಸರಗೋಡು ಜಿಲ್ಲೆ ಹಾಲುತ್ಪಾದನಾ ವಲಯದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದು ಮಾರುಕಟ್ಟೆ ವ್ಯವಸ್ಥೆಯು ಪೂರಕವಾಗಿದೆ. ಹಾಲುತ್ಪಾದಕರ ಸಹಕಾರಿ ಸಂಘಗಳ ಮೂಲಕ ಹೆ„ನುಗಾರಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ನೀಡುವ ತಿಳಿವಳಿಕೆ, ಸರಕಾರೀ ಸೌಲಭ್ಯಗಳ ಮಾಹಿತಿಗಳು ಕ್ಷೀರೋತ್ಪಾದಕರಿಗೆ ಅನುಕೂಲಕರವಾಗಿದೆ. ಹಾಲಿಗೆ ಹೆಚ್ಚಿನ ಬೇಡಿಕೆಯೂ ಇದೆ.
– ಕೆ.ಎ. ಐತ್ತಪ್ಪ ಶೆಟ್ಟಿ
ಅಧ್ಯಕ್ಷರು ,ಹಾಲು ಉತ್ಪಾದಕರ ಸಹಕಾರಿ ಸಂಘ, ಬದಿಯಡ್ಕ

Advertisement

Udayavani is now on Telegram. Click here to join our channel and stay updated with the latest news.

Next