Advertisement
ಏಪ್ರಿಲ್ ಮೊದಲ ವಾರದಿಂದಲೇ ಈ ದರ ಜಾರಿಗೆ ಬರುವ ನಿರೀಕ್ಷೆಯಿದ್ದು, ಇದರಿಂದಾಗಿ ಬೆಂಗಳೂರು ಸಹಕಾರ ಹಾಲು ಒಕ್ಕೂಟ ವ್ಯಾಪ್ತಿಯ ಸುಮಾರು 1.50 ಲಕ್ಷ ರೈತರಿಗೆ ಅನುಕೂಲ ವಾಗಲಿದೆ. ಬಮೂಲ್ ಈ ಹಿಂದೆ ಪ್ರತಿ ಲೀಟರ್ ಹಾಲಿಗೆ 27.50 ಪೈಸೆ ನೀಡಿ ರೈತರಿಂದ ಹಾಲು ಖರೀದಿ ಮಾಡುತ್ತಿತ್ತು. ಆದರೆ, ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಹಾಲು ಮಾರಾಟ ದಲ್ಲಿ ಇಳಿಕೆ ಕಂಡು ಬಂತು. ಇದರಿಂದ ಬಮೂಲ್‌ನ ಹಾಲು ಮಾರಾಟದಲ್ಲಿ ದಿಢೀರ್ ಕುಸಿತವಾಗಿತ್ತು.
Related Articles
Advertisement
ಶೇ.50ರಷ್ಟು ಮಹಿಳಾ ಹಾಲು ಉತ್ಪಾದಕರು : ಬೆಂಗಳೂರು ಸಹಕಾರ ಹಾಲು ಒಕ್ಕೂಟದ ವ್ಯಾಪ್ತಿಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಸೇರಲಿದೆ. ಸುಮಾರು 5 ಲಕ್ಷ ಹಾಲು ಮಾರಾಟಗಾರರು ಒಕ್ಕೂಟ ವ್ಯಾಪ್ತಿಯಲ್ಲಿದ್ದಾರೆ. ಆದರೆ, ಸಕ್ರಿಯವಾಗಿ ಇರುವ ಹಾಲು ಮಾರಾಟಗಾರರ ಸಂಖ್ಯೆ 1.5 ಲಕ್ಷವಾಗಿದೆ. ಇದರಲ್ಲಿ ಶೇ.50ರಷ್ಟು ಮಹಿಳೆಯರು ಒಕ್ಕೂಟಕ್ಕೆ ಹಾಲು ಹಾಕುತ್ತಿದ್ದಾರೆ ಎಂದು ಬಮೂಲ್ ಅಧಿಕಾರಿಗಳು ಹೇಳುತ್ತಾರೆ. ರಾಮನಗರ ವ್ಯಾಪ್ತಿಯಲ್ಲಿ ಸುಮಾರು 80 ಲಕ್ಷ ರೈತರು ಹಾಲು ಮಾರಾಟ ಮಾಡುತ್ತಾರೆ.
ಬೆಂಗಳೂರು ನಗರ ಮತ್ತು ಗ್ರಾಮಾಂತ ವ್ಯಾಪ್ತಿಯಲ್ಲಿ 70 ಸಾವಿರ ರೈತರು ಹಾಲು ಮಾರಾಟ ಮಾಡುತ್ತಿದ್ದಾರೆ. ಈ ಹಿಂದೆ ಒಕ್ಕೂಟ ಪ್ರತಿ ದಿನ 19 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈಗ ಸುಮಾರು 15 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಹಾಲಿನ ದರ 5 ರೂ. ಏರಿಕೆ : ಮಾಡುವಂತೆ ಸರ್ಕಾರಕ್ಕೆ ಒಕ್ಕೂಟದ ವತಿಯಿಂದ ಮನವಿ ಮಾಡಲಾಗಿದೆ. 3 ರೂ. ಏರಿಕೆ ಮಾಡುವ ಬಗ್ಗೆ ಸರ್ಕಾರ ಆಶ್ವಾಸನೆ ನೀಡಿದೆ. ಸರ್ಕಾರದ ಘೋಷಣೆಗೆ ಒಕ್ಕೂಟ ಎದುರು ನೋಡುತ್ತಿದೆ. 3 ರೂ.ಏರಿಕೆ ಮಾಡಿದರೆ ಆ ದರವನ್ನು ರೈತರಿಗೆ ಸಂಪೂರ್ಣವಾಗಿ ನೀಡಲಾಗುವುದು. –ನರಸಿಂಹಮೂರ್ತಿ, ಬಮೂಲ್ ಅಧ್ಯಕ್ಷ
–ದೇವೇಶ ಸೂರಗುಪ್ಪ