Advertisement

ಹಾಲು ಶೀತಲೀಕರಣ ಘಟಕ ಉದ್ಘಾಟನೆ

12:30 AM Feb 22, 2019 | |

ಅಜೆಕಾರು: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಡಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೈನುಗಾರರು ಸುಮಾರು 4.5 ಲಕ್ಷ ಲೀಟರ್‌ ಹಾಲನ್ನು ಪ್ರತೀನಿತ್ಯ ಉತ್ಪಾದನೆ ಮಾಡುತ್ತಿದ್ದಾರೆ ಎಂದು ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾದ ರವಿರಾಜ್‌ ಹೆಗಡೆ ಹೇಳಿದರು.

Advertisement

ಅವರು ಹಿರ್ಗಾನ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ನಿರ್ಮಾಣ ಮಾಡಲಾದ ಸಾಂದ್ರ ಹಾಲು ಶೀತಲೀಕರಣ ಘಟಕದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ಹಿರ್ಗಾನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಕರುಣಾಕರ್‌ ಕಡಂಬ ವಹಿಸಿದ್ದರು.ಹಿರ್ಗಾನ ಹಾಲು ಉತ್ಪಾದಕರ ಸಂಘದ ವಿಸ್ತರಣಾ ಕಟ್ಟಡದ ಉದ್ಘಾಟನೆಯನ್ನು ಶಾಸಕ ಸುನಿಲ್‌ ಕುಮಾರ್‌ ನೆರವೇರಿಸಿ ದರು. ಮಾಜಿ ಶಾಸಕ ಎಚ್‌. ಗೋಪಾಲ ಭಂಡಾರಿ ಸಭಾಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅಥಿತಿಗಳಾಗಿ ಒಕ್ಕೂಟದ ನಿರ್ದೇಶಕರಾದ ಉದಯ ಎಸ್‌. ಕೋಟ್ಯಾನ್‌, ನವೀನ್‌ಚಂದ್ರ ಜೈನ್‌, ಒಕ್ಕೂಟದ ವ್ಯವಸ್ಥಾಪಕರಾದ ಡಾ| ನಿತ್ಯಾನಂದ ಭಕ್ತ, ಹಿರ್ಗಾನ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಸಂತೋಷ್‌ ಶೆಟ್ಟಿ, ಹಿರ್ಗಾನ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸಿರಿಯಣ್ಣ ಶೆಟ್ಟಿ, ಒಕ್ಕೂಟದ ಉಪವ್ಯವಸ್ಥಾಪಕರಾದ ಡಾ| ಅನಿಲ್‌ ಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು.

ಸಂಘದ ಸಿಇಒ ಸುಮಂಗಳಾ ವರದಿ ವಾಚಿಸಿದರು.ಒಕ್ಕೂಟದ ಅಧ್ಯಕ್ಷರಾದ ರವಿರಾಜ್‌ ಹೆಗ್ಡೆ ಕೊಡವೂರು ಮತ್ತು ಹಿರ್ಗಾನ ಹಾಲು ಉತ್ಪಾದಕರ ಸಂಘದ ನಿವೃತ ಕಾರ್ಯದರ್ಶಿ ಮಾಧವ ಭಟ್‌ರವರನ್ನು ಸಮ್ಮಾನಿಸಿ ಗೌರವಿಸಲಾಯಿತು.ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಶಂಕರ್‌ ನಾಯ್ಕ ಕಾರ್ಯಕ್ರಮ ನಿರೂಪಿ ಸಿದರು. ಶುಭಶ್ರೀ ಪ್ರಾರ್ಥಿಸಿದರು. ನಿರ್ದೇಶಕ  ಸತೀಶ್‌ ಪೂಜಾರಿ ಸ್ವಾಗತಿಸಿ ದರು. ನಿರ್ದೇಶಕ ರಾಮಕೃಷ್ಣ ನಾಯಕ್‌ ಧನ್ಯವಾದ ಸಲ್ಲಿಸಿದರು.

Advertisement

ಉಪಾಧ್ಯಕ್ಷರಾದ ಭೋಜರಾಜ್‌ ಹೆಗ್ಡೆ, ನಿರ್ದೇಶಕರಾದ ಉಪೇಂದ್ರ ನಾಯಕ್‌, ದಿನೇಶ್‌ ಕುಮಾರ್‌, ದಯಾನಂದ ಬೋರ್ಕರ್‌, ಹರೀಶ್‌ ಪೂಜಾರಿ, ಲೀಲಾವತಿ, ಮಂಜುನಾಥ ನಾಯಕ್‌, ರೇವತಿ ಶೆಟ್ಟಿ, ಸಿಬಂದಿ‌ ಸುಶ್ಮಿತಾ, ರಂಜಿತ್‌ ನಾಯಕ್‌ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next