Advertisement
ಪಡುಬಿದ್ರಿ: ತೆಂಕ ಎರ್ಮಾಳು ಹಾಲು ಉತ್ಪಾದಕರ ಸಂಘ ಹುಟ್ಟಿಕೊಂಡ ಹಿಂದಿನ ಕಥೆ ನಿಜಕ್ಕೂ ವಿಶಿಷ್ಟ. ತೆಂಕ ಗ್ರಾಮದ ಶಬ್ಬೀರ್‌ಖಾನ್ ಹಾಗೂ ನಿಸಾರ್ ಅಹ್ಮದ್ ಮನೆ ಮನೆಗೆ ತೆರಳಿ ಹಾಲು ಸಂಗ್ರಹಿಸುತ್ತಾ ಮಾರಾಟಕ್ಕೆ ತೊಡಗಿದ್ದ ಕಾಲವದು. ಇವರ ಮೇಲೆ ಕೆಮುಲ್ ಹಾಗೂ ಕೆನರಾ ಹಾಲು ಒಕ್ಕೂಟ ಪ್ರಭಾವ ಬೀರಿತ್ತು.
ಮುಸ್ಲಿಂ ಅಲ್ಪಸಂಖ್ಯಾತರಾಗಿದ್ದರೂ ಸಹಕಾರಿ ರಂಗ ಇವರನ್ನು ಬಹುವಾಗಿ ಸೆಳೆದಿದ್ದು, ಸಂಘದ ಸ್ಥಾಪನೆಗೆ ನಾಂದಿಯಾಯಿತು. ಸಹಕಾರಿ ತತ್ವದ ಮೇಲೆ ನಂಬಿಕೆಯಿರಿಸಿ, ಶುಭ್ರ ಶ್ವೇತ ಕ್ರಾಂತಿಯ ಧ್ಯೇಯದೊಂದಿಗೆ 66 ಹೈನುಗಾರ ಸದಸ್ಯರನ್ನು ಕಲೆ ಹಾಕಿದರು. ಸಂಘದ ಬೈಲಾ ತಯಾರಾಗಿತ್ತು. ಅದರಂತೆ ಎರ್ಮಾಳು ಬೀಡು ಅಶೋಕರಾಜರ ನೇತೃತ್ವದಲ್ಲಿ ತೆಂಕ ಎರ್ಮಾಳು ಹಾಲು ಉತ್ಪಾದಕರ ಸಹಕಾರ ಸಂಘವು 1987 ಅ.12ರಂದು ಸ್ಥಾಪನೆಯಾಯಿತು. ಆಗ ಸಂಘದ ಕಾರ್ಯದರ್ಶಿಯಾದವರು ಶಬ್ಬೀರ್‌ಖಾನ್ ಅವರೇ. ಅತಿ ಹೆಚ್ಚು ಡಿವಿಡೆಂಡ್
ಸ್ಥಾಪಕ ಅಧ್ಯಕ್ಷರಾಗಿ ಎರ್ಮಾಳು ಬೀಡು ಅಶೋಕರಾಜ ಅವರು ಸಂಘದ ಬೆಳವಣಿಗೆಯನ್ನು ಅಂದಿನಿಂದಲೂ ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಸಂಘದ ಸದಸ್ಯರಿಗೆ ವಾರ್ಷಿಕ 25ಶೇಕಡಾ ಡಿವಿಡೆಂಡನ್ನು ಕಳೆದ ಐದು ವರ್ಷಗಳಿಂದಲೂ ನೀಡುತ್ತಲೇ ಬಂದಿದೆ. ರೈತರಿಗೆ ಉತ್ತಮ ಬೋನಸ್ ವಿತರಿಸಲಾಗುತ್ತಿದೆ. ಸದಸ್ಯರ ನಡುವೆ ಮೂರು ಸ್ವಸಹಾಯ ಸಂಘಗಳನ್ನು ನಿರ್ವಹಿಸಲಾಗುತ್ತಿದೆ. ಸದಸ್ಯರನ್ನು ಪ್ರತಿ ವರ್ಷವೂ ಹೈನುರಾಸು ನಿರ್ವಹಣಾ ತರಬೇತಿಗಾಗಿ ಅಷ್ಟೇ ಅಲ್ಲದೆ ಹಾಸನ, ಕೋಟ, ಕಬ್ಬಿನಾಲೆ ಮುಂತಾದೆಡೆಗಳಿಗೆ ಅಧ್ಯಯನ ಪ್ರವಾಸಕ್ಕೂ ಕರೆದೊಯ್ಯಲಾಗಿದೆ.
Related Articles
ಒಕ್ಕೂಟದ ಮೂಲಕ ಸಿಗುವ ಅನುದಾನದ ಹೊರತಾಗಿ ಹಾಲು ಕರೆಯುವ ಯಂತ್ರಗಳಿಗೆ, ರಬ್ಬರ್ ಮ್ಯಾಟ್‌ಗೆ ಹಾಗೂ ಅಜೋಲಾ ತೊಟ್ಟಿಗಳಿಗೆ ಸಂಘವೂ ಕಿಂಚಿತ್ ಅನುದಾನ ಸದಸ್ಯರಿಗೆ ನೀಡುತ್ತಿದೆ. ರೈತರ ಕಲ್ಯಾಣ ಟ್ರಸ್ಟ್, ರಾಷ್ಟ್ರೀಯ ಜಾನುವಾರು ವಿಮೆ ಯೋಜನೆಯಡಿ ರಾಸುಗಳಿಗೆ ವಿಮೆ, ಸದಸ್ಯರಿಗೂ ವಿಮೆ ಒದಗಿಸಲಾಗುತ್ತಿದೆ. ಹಾಲು ದಿನ, ಸಹಕಾರಿ ಸಪ್ತಾಹಗಳನ್ನು ಒಕ್ಕೂಟದ ಪ್ರಾಯೋಜನೆಯಲ್ಲಿ ಸಂಘವು ನಡೆಸುತ್ತಿದೆ.
Advertisement
ಸಂಘದ ಸದಸ್ಯರಿಗೆ ನೇತ್ರ ತಪಾಸಣೆ, ಬ್ಲಿಡ್‌ಕಾÂಂಪ್, ರಕ್ತದೊತ್ತಡ, ಮಧುಮೇಹ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ತೆಂಕ ಎರ್ಮಾಳು ಗ್ರಾಮ ಶಾಲೆಗಳಲ್ಲಿ ನಡೆಯುವ ಶಾಲಾ ಮಕ್ಕಳ ಪ್ರತಿಭಾ ಕಾರಂಜಿ, ವಿವಿಧ ಪಂದ್ಯಾಕೂಟಗಳಿಗೆ ಸಂಘವು ಉಚಿತವಾಗಿ ಹಾಲನ್ನು ಸರಬರಾಜು ಮಾಡಿದೆ.
ಪ್ರಶಸ್ತಿಗಳು 2004 – 05 ಉತ್ತಮ ಗುಣಮಟ್ಟದ ಹಾಲು ಸಂಗ್ರಹಕ್ಕಾಗಿ ಬಹುಮಾನ , 4 ಬಾರಿ ತಾಲೂಕು ಮಟ್ಟದಲ್ಲಿ ಪ್ರಥಮ, 3 ಬಾರಿ ತಾಲೂಕು ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುವ ಈ ಸಂಘವು 2018 – 19ರಲ್ಲಿ ಜಿಲ್ಲೆಯ ಸಂಘಗಳಲ್ಲೇ ಪ್ರಥಮ ಸ್ಥಾನಿಯಾಗಿತ್ತು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೂಡ 2011-12 ಮತ್ತು 2016-17ನೇ ಸಾಲಿನಲ್ಲಿ ಸಾಧನಾ ಪ್ರಶಸ್ತಿ ನೀಡಿದೆ. ಈ ಸಂಘವನ್ನು ಮುಸ್ಲಿಂ ಬಾಂಧವರು ಆರಂಭಿಸಿದ್ದು, ಹಾಲಿನ ಗುಣಮಟ್ಟವನ್ನು ಅತ್ಯುತ್ತಮವಾಗಿ ಕಾಪಿಟ್ಟುಕೊಂಡಿದ್ದರಿಂದಲೇ ಇಂದು ಹೆಮ್ಮರವಾಗಿ ಬೆಳೆದಿದೆ. ಪ್ರತಿ ವರ್ಷ ಸದಸ್ಯ ಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದು, ಸದಸ್ಯರ ಪ್ರೋತ್ಸಾಹವೇ ಸಂಘದ ಬೆಳವಣಿಗೆ ಮತ್ತು ಜಿಲ್ಲೆಯಲ್ಲೇ ಪ್ರಥಮ ಸ್ಥಾನಿಯಾಗಲು ಕಾರಣ.
– ಅಶೋಕರಾಜ ಎರ್ಮಾಳು, ಅಧ್ಯಕ್ಷರು