ಕಿಕ್ಕೇರಿ: ಪಟ್ಟಣದಲ್ಲಿರುವ ತಾಲೂಕಿನ ಪ್ರತಿಷ್ಠಿತ ಹಾಲು ಉತ್ಪಾದಕರ ಸಹಕಾರಸಂಘದ ಚುನಾವಣೆ ಭಾನುವಾರನಡೆದು ನಿರ್ದೇಶಕರ ಆಯ್ಕೆಗಾಗಿವಿವಿಧ ಪಕ್ಷಗಳ ಬಣ ರಚಿಸಿಕೊಂಡು ಗೆಲುವಿಗಾಗಿ ಪೈಪೋಟಿ ನಡೆಸಿದರು.
ಒಟ್ಟು 13 ನಿರ್ದೇಶಕರಿರುವ ಸಂಘದಲ್ಲಿ 10ಸ್ಥಾನಕ್ಕೆ ಚುನಾವಣೆನಡೆಯಿತು. ಇದರಲ್ಲಿ ಪರಿಶಿಷ್ಟ ವರ್ಗದಮೀಸಲು ಸ್ಥಾನಕ್ಕೆ ಬಿಜೆಪಿ ಬೆಂಬಲಿತಅಭ್ಯರ್ಥಿ ಪಲ್ಲವಿ ಅವಿರೋಧಆಯ್ಕೆಯಾದ ಕಾರಣ ಉಳಿಕೆ 10ನಿರ್ದೇಶಕರ ಸ್ಥಾನಕ್ಕೆ ಗೆಲುವಿಗಾಗಿ 24ಸದಸ್ಯರು ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿ ಮುಖಂಡ ಜಿಪಂ ಮಾಜಿಉಪಾಧ್ಯಕ್ಷ ಕೆ.ಎಸ್. ಪ್ರಭಾಕರ್ ಮುಂದಾಳ ತ್ವದಲ್ಲಿ ಬೆಂಬಲಿತರಾಗಿ 10 ಸದಸ್ಯರು ಕಾಂಗ್ರೆಸ್ ಮುಂದಾಳಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಬೆಂಬಲಿತರಾಗಿ 9ಸದಸ್ಯರು, ಜೆಡಿಎಸ್ ಹೋಬಳಿ ಅಧ್ಯಕ್ಷಮಂಜೇಗೌಡ ನೇತೃತ್ವದಲ್ಲಿ ಬೆಂಬಲಿತರಾಗಿ4ಸದಸ್ಯರು ಕಣದಲ್ಲಿ ಸ್ಪರ್ಧಿಸಿದರೆ, ಈಬಾರಿ ವಿಶೇಷವಾಗಿ ಬಿಜೆಪಿ ಬಂಡಾಯ ವಾಗಿ ಓರ್ವ ಸದಸ್ಯರು ಚುನಾವಣಾಕಣದಲ್ಲಿ ಸ್ಪರ್ಧಿಸಿದ್ದರು. ಗೆಲುವಿಗಾಗಿಹರಿದ ಹಣ, ಹೆಂಡದ ಹೊಳೆ ನಡೆಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಫಲಿತಾಂಶ: ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪುಟ್ಟಣ್ಣಯ್ಯ, ನಾಗರಾಜ ಶೆಟ್ಟಿ, ಪೂರ್ಣಿಮಾ, ಮಂಜೇಗೌಡಗೆಲುವು ಸಾಧಿಸಿದರು. ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ವಾಸುದೇವ, ಕೆ.ಎಂ. ಮೋಹನ ವಿಜೇತರಾದರು. ಬಿಜೆಪಿಬೆಂಬಲಿತ ಅಭ್ಯರ್ಥಿಗಳಾದ ಕೆ.ಬಿ.ಪರಮೇಶ, ಎಂ.ಆರ್. ಮೀನಾಕ್ಷಿ,ಹೇಮಾ ಜಯಶೀಲರಾದರು.
ಕುತೂಹಲವೆಂ ಬಂತೆ ಬಿಜೆಪಿ ಬಂಡಾಯವಾಗಿ ಸ್ಪರ್ಧಿಸಿದ್ದ ಮನ್‌ಮುಲ್ ಮಾಜಿ ನಿರ್ದೇಶಕ ಕೆ.ಜಿ.ತಮ್ಮಣ್ಣ ಮತಗಳಿಸಿ ನಿರ್ದೇಶಕರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಆನಂದ ನಾಯಕ್ ಕರ್ತವ್ಯ ನಿರ್ವಹಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಬಿಜೆಪಿಮುಖಂಡ ಕೆ.ಎಸ್.ಪ್ರಭಾಕರ್, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಸುರೇಶ್, ಜೆಡಿಎಸ್‌ಹೋಬಳಿ ಅಧ್ಯಕ್ಷ ಮಂಜೇಗೌಡ, ಸುರೇಶ್ ಮತ್ತಿತರರಿದ್ದರು.