ಚಿಂತಾಮಣಿ: ಬರೋಬ್ಬರಿ ಐದು ದಶಕಗಳ ಕಾಲ ನೂರಾರು ಕಾರ್ಮಿಕರ ಕುಟುಂಬಗಳಿಗೆ ಬದುಕು ಕಟ್ಟಿಕೊಟ್ಟಿದ್ದ ನಗರದ ಹೊರ ವಲಯದ ಕನ್ನಂಪಲ್ಲಿಯಲ್ಲಿರುವ ಹಾಲಿನ ಶೀತಲ ಕೇಂದ್ರ 12 ದಿನಗಳ ಹಿಂದೆಯೆ ಸ್ಥಗಿತಗೊಂಡು ಕಾರ್ಮಿಕರು ಅಭದ್ರತೆಯಲ್ಲಿ ಭವಿಷ್ಯದ ಬದುಕಿನ ಬಗ್ಗೆ ಚಿಂತಿಸುವಂತಾಗಿದೆ.
5 ದಶಕಗಳ ಹಿಂದೆಯೆ ಈ ಕೇಂದ್ರ ಆರಂಭಗೊಂಡಿದ್ದು, 1999 ರಿಂದ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ವ್ಯಾಪ್ತಿಗೆ ಸೇರಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೋಚಿಮುಲ್ ಹೋಬಳಿಗೆ, ಗ್ರಾಪಂ ಒಂದು ಬಿಎಂಸಿ ಕೇಂದ್ರಗಳ ಸ್ಥಾಪನೆ ಮಾಡಿರುವ ಪರಿಣಾ ಮ ದಶಕಗಳ ಕಾಲ ಹಾಲು ಶೀತಲ ಕೇಂದ್ರವಾಗಿ ಕಾರ್ಯ ನಿರ್ವಹಿಸಿದ ಚಿಂತಾಮಣಿ ಕೇಂದ್ರ ಇದೀಗ ಸ್ಥಗಿತಗೊಂಡು ಕಾರ್ಮಿಕರ ಬದುಕು ಕಾವಲು ದಾರಿ ಹಿಡಿದಿದೆ.
ಕುಟುಂಬಗಳು ಜೀವನ ನಿರ್ವಹಣೆಗೆ ಕಷ್ಟಸಾಧ್ಯ: ಕಳೆದ 14 ದಿನಗಳಿಂದ ಕಾರ್ಮಿಕರು ಎಂದನಂತೆ ಈ ಶೀತಲ ಕೇಂದ್ರಕ್ಕೆ ಬಂದು ಕಾದು ಕಾದು ಕುಳಿತು ಮನೆಗಳಿಗೆ ಕೆಲಸ ಇಲ್ಲದೇ ಬರಿಗೈಯಲ್ಲಿ ವಾಪಸ್ ತೆರಳುವಂತಾಗಿದೆ. ಅಲ್ಲದೇ ಕೇಂದ್ರದಲ್ಲಿ ಗುತ್ತಿಗೆ ಆಧಾರಿತ ಮೇಲೆ ಕಾರ್ಯನಿರ್ವಹಿಸುವ ಸುಮಾರು 50ಕ್ಕೂ ಹೆಚ್ಚು ಕಾರ್ಮಿಕರು ಹಾಗೂ ಅವರ ಅವಲಂಬಿತ ಕುಟುಂಬಗಳು ಜೀವನ ನಿರ್ವಹಣೆಗೆ ಕಷ್ಟಸಾಧ್ಯವಾ ಗುವ ರೀತಿಯಲ್ಲಿ ಆತಂಕದ ಕಾರ್ಮೋಡ ಮೂಡಿದೆ.
ಕಾರ್ಮಿಕರೊಂದಿಗೆ ಅಧಿಕಾರಿಗಳ ಸಭೆ: ಕಾರ್ಮಿಕ ಕುಟುಂಬಗಳು ಬೀದಿ ಪಾಲಾಗುವ ಸಂಭವವಿದೆ ಯೆಂದು ಹೆಸರು ಹೇಳಲು ಇಚ್ಛಿಸಿದ ಕಾರ್ಮಿಕರು ತಮ್ಮ ಅಂತರಾಳದ ನೋವನ್ನು ವ್ಯಕ್ತಪಡಿಸಿದ್ದಾರೆ. ಇನ್ನೂ ಹಾಲು ಶೀತಲ ಕೇಂದ್ರ ಬಾಗಿಲು ಮುಚ್ಚುತ್ತಿರುವ ಪರಿ ಣಾಮ ಇತ್ತ ಈ ಕೋಟ್ಯಾಂತರ ಬೆಳೆಬಾಳುವ ಶೀತಲ ಕೇಂದ್ರದ ಯಂತ್ರಗಳು ಅವುಗಳು ಹಂತ ಹಂತವಾಗಿ ಕಿಲುಬಿಡಿದು ಒಕ್ಕೂಟಕ್ಕೆ ನಷ್ಟವಾಗುವುದು ಖಂಡಿತ. ಇಷ್ಟೆಲ್ಲಾ ಸಮಸ್ಯೆಗಳ ಮಧ್ಯೆ ಅಧಿಕಾರಿಗಳು ಕಾರ್ಮಿಕರೊಂದಿಗೆ ಒಂದು ಸುತ್ತಿನ ಸಭೆಯನ್ನು ನಡೆಸಿ ಸುಧೀರ್ಘ ಚರ್ಚೆಯನ್ನು ಕೂಡ ಮಾಡಿದ್ದಾರೆ. ಆದರೆ ಐಸ್ ಕ್ರೀಂ ಫ್ಯಾಕ್ಟರಿ ನಿರ್ಮಾಣ 2 ವರ್ಷ ಹಿಡಿಯುತ್ತದೆ. ಅಲ್ಲಿಯ ವರೆಗೂ ಒಕ್ಕೂಟವು ಮತ್ತು ಸರ್ಕಾರವು ಈ ಕಾರ್ಮಿಕರ ಜೀವನ ಬದುಕಿನ ಬಗ್ಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಅಧಿಕಾರಿಗಳು ಹೇಳುವುದೇನು?: ಇನ್ನೂ ಕೋಚಿಮುಲ್ ಅಧಿಕಾರಿಗಳೆನು ಹೇಳುವುದೇನೆಂದರೆ ಎರಡು ವರ್ಷ ಗಳಲ್ಲಿ ಇಲ್ಲಿ ಐಸ್ ಕ್ರೀಮ್ ಫ್ಯಾಕ್ಟರಿ ಆರಂಭಗೊಂಡ ನಂತರ ಇದೇ ಸಿಬ್ಬಂದಿ ಯನ್ನು ಐಸ್ ಕ್ರೀಮ್ ಫ್ಯಾಕ್ಟರಿಯ ಕಾರ್ಯ ನಿರ್ವಹಣೆಗೆ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ, ಅಲ್ಲಿಯ ತನಕ ಕಾರ್ಮಿಕ ಕುಟುಂಬಗಳ ಜೀವನ ಹೇಗೆ ಎನ್ನುವ ಪ್ರಶ್ನೆ, ಕಾರ್ಮಿಕರದ್ದಾಗಿದೆ. ಒಟ್ಟಾರೆಯಾಗಿ ಒಂದು ಕಡೆ ಅಭಿವೃದ್ಧಿ ಹೆಜ್ಜೆ ಮತ್ತೂಂದು ಕಡೆ ಕಾರ್ಮಿಕರ ಬದುಕಲ್ಲಿ ನಿರಾಸೆಯ ಕಾರ್ಮೋಡದ ಛಾಯೆ ಮೂಡಿದೆ
.
– ಎಂ.ಡಿ.ತಿಪ್ಪಣ್ಣ