Advertisement

ಹಾಲು ಖರೀದಿ ದರ ಖಡಿತ ಆದೇಶ ವಾಪಸ್‌ ಪಡೆಯಿರಿ

01:00 PM Dec 10, 2021 | Team Udayavani |

ಮುಳಬಾಗಿಲು: ಒಕ್ಕೂಟದ ನಷ್ಟದ ನೆಪದಲ್ಲಿ ಹಾಲು ಖರೀದಿ ದರ 1.50 ರೂ. ಖಡಿತಗೊಳಿಸುವ ಆದೇಶ ವಾಪಸ್‌ ಪಡೆಯಿರಿ, ಇಲ್ಲವೆ, ಉಚಿತ ಪಶು ಆಹಾರ ವಿತರಣೆ ಮಾಡಿ, ಅಲ್ಲದೆ, ಒಕ್ಕೂಟ ನಷ್ಟಕ್ಕೆ ಕಾರಣ ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡಬೇಕೆಂದು ನಗರದಲ್ಲಿ ರೈತ ಸಂಘದ ಕಾರ್ಯಕರ್ತರು ಕೋಚಿಮುಲ್‌ ಉಪ ವ್ಯವಸ್ಥಾಪಕ ಶ್ರೀರಾಮ್‌ಗೆ ಮನವಿ ನೀಡಿದರು.

Advertisement

ರೈತ ಸಂಘದ ತಾಲೂಕು ಅಧ್ಯಕ್ಷ ಯಲುವಹಳ್ಳಿ ಪ್ರಭಾಕರ್‌ ಮಾತನಾಡಿ, ಹಾಲು ಒಕ್ಕೂಟ ಅಧ್ಯಕ್ಷರು, ವ್ಯವಸ್ಥಾಪಕರು ಸರ್ಕಾರದ ಜೊತೆ ಚರ್ಚೆ ಮಾಡಿ ಪ್ರತಿ ಲೀಟರ್‌ಗೆ 40 ರೂ. ನಿಗದಿ ಮಾಡಬೇಕು, ಇಲ್ಲವೆ, ಪಶು ಆಹಾರ ಉಚಿತವಾಗಿ ನೀಡಬೇಕು, ಮಳೆ ಅವಾಂತರದಿಂದ ರೈತರು ಬೆಳೆದ ಬೆಳೆಗೆ ಬೆಲೆ ಇಲ್ಲದೆ ದುಡಿಯುವ ಕೈಗೆ ಕೆಲಸವಿಲ್ಲದೆ ಜೀವನ ಕಷ್ಟವಾಗಿದೆ ಎಂದು ವಿವರಿಸಿದರು.

ಸ್ವಾಭಿಮಾನದ ಬದುಕು ಕಿತ್ತುಕೊಳ್ಳುತ್ತಿದೆ: ಒಕ್ಕೂಟದ ಭ್ರಷ್ಟಾಚಾರ, ನಷ್ಟದ ನೆಪದಲ್ಲಿ ಹಾಲಿನ ದರ ಇಳಿಕೆ ಮಾಡುವ ಮೂಲಕ ರೈತ, ಬಡ ಕೂಲಿ ಕಾರ್ಮಿಕರ ಸ್ವಾಭಿಮಾನದ ಬದುಕು ಒಕ್ಕೂಟ ಕಿತ್ತುಕೊಳ್ಳುವ ಮೂಲಕ ಹಸಿವಿನ ದವಡೆಗೆ ನೂಕುತ್ತಿದೆ ಎಂದು ತಿಳಿಸಿದರು.

ಒಕ್ಕೂಟದ ಬೇಜವಾಬ್ದಾರಿ: ರೈತ ಯುವ ಮುಖಂಡ ನಂಗಲಿ ಕಿಶೋರ್‌ ಮಾತನಾಡಿ, ಹಾಲು ಒಕ್ಕೂಟ ನಷ್ಟದಲ್ಲಿದೆ. ರೈತರಿಗೆ ಹಾಲಿನ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಒಕ್ಕೂಟದ ತೀರ್ಮಾನದ ಹಿಂದೆ ಇರುವ ಷಡ್ಯಂತ್ರವಾದ್ರೂ ಏನು? ರೈತರು ಡೇರಿಗಳಿಗೆ ನೀಡುವ ಹಾಲು ಗುಣಮಟ್ಟದಿಂದ ಕೂಡಿದ್ದರೂ ಬಿಎಂಸಿನಿಂದ ಬರು ವ ಹಾಲು ಕಲುಷಿತಗೊಳ್ಳುತ್ತಿದೆ. ಇದಕ್ಕೆ ಒಕ್ಕೂಟದ ಬೇಜವಾಬ್ದಾರಿಯೇ ಕಾರಣ ಎಂದು ಹೇಳಿದರು.

ಹಾಲಿನಲ್ಲಿ ನೀರು ಬೆರಕೆ: ಬಿಎಂಸಿಗಳಿಂದ ಹಾಲು ತರುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಆರ್‌ ಎಸ್‌ ಅಳವಡಿಸಲು ಮೀನಮೇಷ ಎಣಿಸಲು ಕಾರಣವೇನು, ಬಿಎಂಸಿ ಹಾಲಿನಲ್ಲಿ ನೀರು ಬೆರೆಯಿಸಿ ಅಕ್ರಮ ಎಸಗುತ್ತಿರುವುದು ಇತ್ತೀಚೆಗೆ ಒಕ್ಕೂಟದ ಗಮನಕ್ಕೂ ಬಂದಿದೆ. ಆದ್ರೂ, ಮುಚ್ಚಿಕೊಳ್ಳಲು ಶತಪ್ರಯತ್ನ ನಡೆಯುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

Advertisement

 ಹಾಲು ಚರಂಡಿ ಪಾಲು: ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಅಧಿ ಕಾರಿಗಳ ಬೇಜವಾಬ್ದಾರಿಯಿಂದ ತುಪ್ಪ, ಮೊಸರು, ಹಾಲು, ಮತ್ತಿತರ ಉತ್ಪನ್ನ ಚರಂಡಿ ಪಾಲಾಗಿದ್ದರೂ ಇದರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಐತಾಂಡಹಳ್ಳಿ ಮಂಜುನಾಥ, ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ಪೊಂಬರಹಳ್ಳಿ ನವೀನ್‌, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ರಾಮಮೂರ್ತಿ, ಪದ್ಮಘಟ್ಟ ಧರ್ಮ, ಸೋಮ, ನಂಗಲಿ ನಾಗೇಶ್‌, ರಾಮಕೃಷ್ಣಪ್ಪ, ಗಣೇಶ್‌, ಯುವ ರೈತ ಮುಖಂಡ ಪುತ್ತೇರಿರಾಜು, ಅಣ್ಣಹಳ್ಳಿ ನಾಗರಾಜ, ವೆಂಕಟರವಣಪ್ಪ, ಮಂಗಸಂದ್ರ ತಿಮ್ಮಣ್ಣ, ಕೋಲಾರ ತಾಲೂಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next