Advertisement

ವಿಶಿಷ್ಟ ಶೈಲಿಯಲ್ಲಿ  ಐಪಿಎಲ್‌ ಆರಂಭ

12:30 AM Mar 20, 2019 | Team Udayavani |

ಹೊಸದಿಲ್ಲಿ: ಈ ಬಾರಿಯ ಐಪಿಎಲ್‌ ಪಂದ್ಯಾವಳಿಯ ಉದ್ಘಾಟನೆ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಮಾ. 23ರ ಶನಿವಾರದಂದು ಎಂ.ಎ. ಚಿದಂಬರಂ ಸ್ಟೇಡಿಯಂನ‌ಲ್ಲಿ ಆರಂಭವಾಗಲಿರುವ 12ನೇ ಐಪಿಎಲ್‌ ಆವೃತ್ತಿಯ ಉದ್ಘಾಟನಾ ಪಂದ್ಯಕ್ಕೆ ಮಿಲಿಟರಿ ಬ್ಯಾಂಡ್‌ ಬಾರಿಸುವ ಮೂಲಕ ಚಾಲನೆ ನೀಡಲಾಗುತ್ತದೆ. ಈ ಬಾರಿಯ ಐಪಿಎಲ್‌ನಲ್ಲಿ ಉದ್ಘಾಟನಾ ಸಮಾರಂಭ ಇರುವುದಿಲ್ಲ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಈ ಸಮಾರಂಭದ ಎಲ್ಲ ವೆಚ್ಚವನ್ನು ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟ  ಸೈನಿಕರ ಕುಟುಂಬದ ಆರ್ಥಿಕ, ಶೈಕ್ಷಣಿಕ ವೆಚ್ಚಕ್ಕೆ ನೀಡಲಾಗುವುದು ಎಂದು ಬಿಸಿಸಿಐ ತಿಳಿಸಿತ್ತು. ಇದರೊಂದಿಗೆ ಸೈನ್ಯಕ್ಕೆ ಗೌರವ ನೀಡುವ ನಿಟ್ಟಿನಲಿಚ್ಲ ಬಿಸಿಸಿಐ ಈ ಬಾರಿಯ ಐಪಿಎಲ್‌ ಕೂಟವನ್ನು ಮಿಲಿಟರಿ ಬ್ಯಾಂಡ್‌ ಮೂಲಕ ಆರಂಭಿಸಲು ನಿರ್ಧರಿಸಿದೆ.

Advertisement

ಹುತಾತ್ಮರಿಗೆ ಗೌರವ
“ಸಿಒಎನ ಸದಸ್ಯರು ಹಾಗೂ ಎಲ್ಲ ಕ್ರಿಕೆಟಿಗರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಸಂಪೂರ್ಣ ಕಾರ್ಯಕ್ರಮವು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಸಣ್ಣ ಪ್ರಯತ್ನವಾಗಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇತ್ತೀಚೆಗೆ ರಾಂಚಿಯಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯ ನಡು ವಣ ಏಕದಿನ ಪಂದ್ಯವೊಂದರಲ್ಲಿ  ಭಾರತೀಯ ಆಟಗಾರರು ಆರ್ಮಿ ಕ್ಯಾಪ್‌ ಧರಿಸುವ ಮೂಲಕ ಪುಲ್ವಾಮಾ ದಾಳಿಯಲ್ಲಿ  ಮೃತಪಟ್ಟ  ಸೈನಿಕರಿಗೆ ಗೌರವ ಸೂಚಿಸಿ, ತಮ್ಮ ಒಂದು ದಿನದ ಪಂದ್ಯದ ಸಂಭಾವನೆಯನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next