Advertisement

ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಶಸ್ತ್ರಾಸ್ತ್ರ ಕೊರತೆ; ಡ್ರೋನ್‌ ಮೂಲಕ ಸಾಗಣೆ

07:51 AM Aug 07, 2020 | mahesh |

ಶ್ರೀನಗರ: ಪಾಕಿಸ್ಥಾನವು ಈಗ ಡ್ರೋನ್‌ (ಯುಎವಿ)ಗಳ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡುವ ಹೊಸ ವಿಧಾನ ಕಂಡುಕೊಂಡಿದ್ದು, ಇತ್ತೀಚಿನ ದಿನಗಳಲ್ಲಿ ಇಂತಹ ಅನೇಕ ಪ್ರಕರಣಗಳು ಪತ್ತೆಯಾಗಿವೆ ಎಂದು ಡಿಜಿಪಿ ದಿಲ್‌ಬಾಘ… ಸಿಂಗ್‌ ಹೇಳಿದ್ದಾರೆ.

Advertisement

ಕುಪ್ವಾರಾ, ಹೀರಾನಗರ, ಕಥುವಾ ಮತ್ತು ರಜೌರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ತಂದ ಡ್ರೋನ್‌ಗಳು ಪತ್ತೆಯಾಗಿವೆ. ಅಲ್ಲದೆ, ಟ್ರಕ್‌ಗಳ ಮೂಲಕ ಶಸ್ತ್ರಾಸ್ತ್ರ ಸಾಗಿಸುವ ಪಾಕಿಸ್ಥಾನದ ಕುಕೃತ್ಯ ಕೂಡ ಇತ್ತೀಚೆಗೆ ಪಂಜಾಬ್‌ನಲ್ಲಿ ಬಯಲಾ ಗಿದೆ ಎಂದಿದ್ದಾರೆ ಸಿಂಗ್‌. ಜತೆಗೆ, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ 200ಕ್ಕಿಂತಲೂ ಕಡಿಮೆ ಉಗ್ರರು ಸಕ್ರಿಯರಾಗಿದ್ದಾರೆ. ಅಲ್ಲದೆ, ಈ ವರ್ಷ ಕೇವಲ 26 ಉಗ್ರರಿಗಷ್ಟೇ ದೇಶದೊಳಕ್ಕೆ ನುಸುಳಲು ಸಾಧ್ಯವಾಗಿದೆ. ಕಣಿವೆ ರಾಜ್ಯದಲ್ಲಿನ ಉಗ್ರರಿಗೆ ಈಗ ಶಸ್ತ್ರಾಸ್ತ್ರಗಳ ಭಾರೀ ಕೊರತೆ ಎದುರಾಗಿದೆ. ಹೀಗಾಗಿ ಪಾಕಿಸ್ಥಾನವು ಬೇರೆ ಬೇರೆ ವಿಧಾನಗಳ ಮೂಲಕ ಅವುಗಳನ್ನು ಕಳ್ಳ ಸಾಗಣೆ ಮಾಡುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ನಡೆದ ಉಗ್ರ ಸಂಹಾರ ಕಾರ್ಯಾಚರಣೆಯಿಂದಾಗಿ ಕೆಲವು ವರ್ಷಗಳ ಹಿಂದೆ 350ರಷ್ಟಿದ್ದ ಉಗ್ರರ ಸಂಖ್ಯೆ ಈಗ 200ಕ್ಕಿಂತಲೂ ಕಡಿಮೆಯಾಗಲು ಸಾಧ್ಯವಾಯಿತು. ಈ ವರ್ಷ 80 ಮಂದಿ ಸ್ಥಳೀಯ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿದ್ದಾರೆ. ಈ ಪೈಕಿ 20 ಮಂದಿ ಸಕ್ರಿಯರಾಗಿದ್ದಾರೆ. ಆದರೆ, ಇಂಥ ಉಗ್ರರ ಜೀವಿತಾವಧಿ ಗರಿಷ್ಠವೆಂದರೆ 90 ದಿನಗಳು ಮಾತ್ರ ಎಂದೂ ಸಿಂಗ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next