Advertisement
ಈ ಬಗ್ಗೆ ನಡೆದ ತನಿಖೆಯಲ್ಲಿ ಪಾಕ್‌ನ ಐಎಸ್‌ಐ ಮತ್ತು ಉಗ್ರ ಸಂಘಟನೆ ಜೈಶ್ ಎ ಮೊಹಮ್ಮದ್ ತಮ್ಮ ಉಗ್ರರಿಗೆ ಸ್ಟೀಲ್ ಬುಲೆಟ್‌ಗಳನ್ನು ನೀಡುತ್ತಿದೆ. ಈ ಸ್ಟೀಲ್ ಬುಲೆಟ್‌ಗಳನ್ನು ಬಳಸುವ ಉದ್ದೇಶವೇ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಭೇದಿಸಿ ಗಾಯಗೊಳಿಸುವುದಾಗಿದೆ. ಸೇನಾ ಸಿಬ್ಬಂದಿ ಮತ್ತು ಪೊಲೀಸರನ್ನು ಟಾರ್ಗೆಟ್ ಮಾಡುವುದಕ್ಕೆಂದೇ ಇದನ್ನು ಬಳಸಲಾಗುತ್ತಿದೆ. ಪುಲ್ವಾಮಾ ಮತ್ತು ಟ್ರಾಲ್ನಲ್ಲಿ ನಡೆದ ದಾಳಿಗೂ ಸ್ಟೀಲ್ ಬುಲೆಟ್ ಬಳಸಲಾಗಿತ್ತು. ಜೈಶ್ ಉಗ್ರರು ಮೊದಲಿನಿಂದಲೂ ಈ ಸ್ಟೀಲ್ ಬುಲೆಟ್ ಬಳಸುತ್ತಿದ್ದಾರೆ. 2017ರ ಡಿಸೆಂಬರ್‌ನಲ್ಲಿ ಮೊದಲ ಬಾರಿಗೆ ಇದರ ಬಳಕೆ ಗಮನಕ್ಕೆ ಬಂದಿತ್ತು. ಸ್ಟೀಲ್ ಬುಲೆಟ್‌ಗಳಿಗೆ ಜಾಗತಿಕ ನಿಷೇಧ ವಿಧಿಸಲಾಗಿದ್ದರೂ, ಉಗ್ರರಿಗೆ ಇದು ಲಭ್ಯವಾಗುತ್ತಿದೆ. Advertisement
ದಾಳಿಗೆ ಸ್ಟೀಲ್ ಬುಲೆಟ್ ಬಳಸುತ್ತಿರುವ ಉಗ್ರರು
01:33 AM Jun 21, 2019 | sudhir |
Advertisement
Udayavani is now on Telegram. Click here to join our channel and stay updated with the latest news.