Advertisement

ಪುಲ್ವಾಮದಲ್ಲಿ ಸೇನಾ ಶಿಬಿರದ ಮೇಲೆ ಗ್ರೇನೆಡ್ ಎಸೆತ

09:40 AM Jan 21, 2020 | Hari Prasad |

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿರುವ ಭಾರತೀಯ ಸೇನಾನೆಲೆಯ ಮೆಲೆ ಉಗ್ರಗಾಮಿಗಳು ಇಂದು ಗ್ರೆನೇಡ್ ದಾಳಿ ನಡೆಸಿದ್ದಾರೆ. ಪುಲ್ವಾಮದ ನೇವಾ ಗ್ರಾಮದಲ್ಲಿರುವ ಸೇನಾ ನೆಲೆಯ ಮೇಲೆ ಈ ಗ್ರೆನೇಡ್ ದಾಳಿ ನಡೆದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮೂವರು ಉಗ್ರರು ಮತ್ತು ಅವರಿಗೆ ಸಹಾಯ ಮಾಡುತ್ತಿದ್ದ ಓರ್ವ ಪೊಲೀಸ್ ಅಧಿಕಾರಿಯನ್ನು ಜಮ್ಮು ಕಾಶ್ಮೀರದ ಸೋಫಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಎನ್ ಕೌಂಟರ್ ನಲ್ಲಿ ಹೊಡೆದು ಹಾಕಿದ ಬಳಿಕ ಈ ಗ್ರೆನೇಡ್ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next