Advertisement

ಪೊಲೀಸ್‌ ಠಾಣೆ ಮೇಲೆ ಉಗ್ರರಿಂದ ಗ್ರೆನೇಡ್‌ ದಾಳಿ

12:52 AM Jun 19, 2019 | mahesh |

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪೊಲೀಸ್‌ ಠಾಣೆಯ ಮೇಲೆ ಮಂಗಳವಾರ ಉಗ್ರರು ಗ್ರೆನೇಡ್‌ ದಾಳಿ ನಡೆಸಿದ್ದು, ಈ ದಾಳಿಯಲ್ಲಿ 7 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.

Advertisement

ಏಕಾಏಕಿ ಪೊಲೀಸ್‌ ಠಾಣೆಯ ಮಾರ್ಗದಲ್ಲಿ ಆಗಮಿಸಿದ ಉಗ್ರರು, ಠಾಣೆಯನ್ನು ಗುರಿಯಾಗಿಸಿಕೊಂಡು ಗ್ರೆನೇಡ್‌ ಎಸೆದು ಪರಾರಿಯಾಗಿದ್ದಾರೆ. ಆದರೆ, ಗ್ರೆನೇಡ್‌ ರಸ್ತೆಬದಿಯೇ ಸ್ಫೋಟಗೊಂಡ ಪರಿಣಾಮ, ಅಲ್ಲಿ ನಡೆದುಕೊಂಡು ಹೋಗುತ್ತಿದ್ದ ನಾಗರಿಕರು ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದಿದ್ದು, ಉಗ್ರರಿಗಾಗಿ ಬಲೆ ಬೀಸಿದೆ. ಇದೇ ವೇಳೆ, ಪುಲ್ವಾಮಾದಲ್ಲಿ ಉಗ್ರ ಸಂಘಟನೆಯಲ್ಲಿದ್ದ ಇಬ್ಬರು ಯುವಕರು ಮಂಗಳವಾರ ಶಸ್ತ್ರ ತ್ಯಜಿಸಿ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next