Advertisement

ಕೇಂದ್ರ ಕಾಶ್ಮೀರದ ಗಂದೇರ್‌ಬಾಲ್‌ನಲ್ಲಿ ಉಗ್ರರ ಅಡಗು ತಾಣ ಪತ್ತೆ

09:56 AM May 09, 2019 | Team Udayavani |

ಶ್ರೀನಗರ: ಕೇಂದ್ರ ಕಾಶ್ಮೀರದ ಗಂದೇರ್‌ಬಾಲ್‌ನಲ್ಲಿ ಉಗ್ರರ ಅಡಗುತಾಣವೊಂದನ್ನು ಪತ್ತೆ ಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮತ್ತು ಸೇನಾಪಡೆಗಳು ಜಂಟಿ ಕಾರ್ಯಾಚರಣೆ  ನಡೆಸಿ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.

ಎರಡು ವೈಲ್‌ಲೆಸ್‌ ಸೆಟ್‌ಗಳು, ಗ್ರೆನೇಡ್‌ ಫ್ಯೂಸ್‌ಗಳು, ಗ್ರೆನೇಡ್‌ ಕ್ಲಿಪ್ಸ್‌ , 50 ಎಕೆ ರೌಂಡ್ಸ್‌, ಎರಡು ಎಸ್‌ಎಲ್‌ಆರ್‌ಗಳು,6 ಗ್ರೆನೇಡ್‌ ಕವರ್‌ಗಳನ್ನು ಅಡಗುತಾಣದಲ್ಲಿ ಪತ್ತೆಹಚ್ಚಲಾಗಿದೆ.

ಕಾರ್ಯಾಚರಣೆ ವೇಳೆ ಸ್ಥಳದಲ್ಲಿ ಯಾವುದೇ ಉಗ್ರರು ಪತ್ತೆಯಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next