Advertisement

“ಮೈಲ್‌ಸ್ಟೋನ್‌ 25′ವಾಣಿಜ್ಯ ಸಂಕೀರ್ಣ, ನೂತನ ಕಚೇರಿ ಇಂದು ಉದ್ಘಾಟನೆ

06:07 PM Feb 18, 2020 | Team Udayavani |

ಮಂಗಳೂರು: ನಗರದ ಲ್ಯಾಂಡ್‌ಟ್ರೇಡ್ಸ್‌ ಬಿಲ್ಡರ್ ಆ್ಯಂಡ್‌ ಡೆವಲಪರ್ ಸಂಸ್ಥೆ, ಬಲ್ಮಠದಲ್ಲಿ ನಿರ್ಮಿಸಿರುವ ಪ್ರತಿಷ್ಠಿತ “ಮೈಲ್‌ಸ್ಟೋನ್‌ 25′ ಅತ್ಯಾಧುನಿಕ ವಾಣಿಜ್ಯ ಸಂಕೀರ್ಣ ಜ.30ರಂದು ಬೆಳಗ್ಗೆ ಉದ್ಘಾಟನೆ ಯಾಗಲಿದೆ. ಇದೇ ಸಂಕೀರ್ಣದ ಐದನೇ ಅಂತಸ್ತಿನಲ್ಲಿ ಲ್ಯಾಂಡ್‌ಟ್ರೇಡ್ಸ್‌ನ ನೂತನ ಸುಸಜ್ಜಿತ ಕಚೇರಿಯ ಉದ್ಘಾಟನೆಯೂ ಈ ಸಂದರ್ಭದಲ್ಲಿ ನೆರವೇರಲಿದೆ.

Advertisement

“ಮೈಲ್‌ಸ್ಟೋನ್‌ 25′ ವಾಣಿಜ್ಯ ಸಂಕೀರ್ಣವನ್ನು ಮಣಿಪಾಲ್‌ ಮೀಡಿಯಾ ನೆಟ್‌ವರ್ಕ್‌ ಲಿ.ನ ವ್ಯವಸ್ಥಾಪಕ ನಿರ್ದೇಶಕ ಟಿ.ಸತೀಶ್‌ ಪೈ ಮತ್ತು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್‌. ಪೈ ಅವರು ಉದ್ಘಾಟಿಸುವರು. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಟ್ರಸ್ಟ್‌ನ ಅಧ್ಯಕ್ಷ ಡಾ|ಕಲ್ಲಡ್ಕ ಪ್ರಭಾಕರ ಭಟ್‌ ಅವರು ಸಂಕೀರ್ಣದ ಪ್ರವೇಶದ ಆವರಣದಲ್ಲಿ ಗಣೇಶ ದೇವರ ವಿಗ್ರಹವನ್ನು ಅನಾವರಣ ಗೊಳಿಸಲಿದ್ದಾರೆ.

ಯೇನಪೊಯ ವಿವಿಯ ಕುಲಪತಿ ಅಲ್‌ಹಾಜ್‌ ಯೇನಪೊಯ ಅಬ್ದುಲ್ಲ ಕುಞಿ ಅವರು ಲ್ಯಾಂಡ್‌ಟ್ರೇಡ್ಸ್‌ನ ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್‌.ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್‌, ಶಾಸಕ ಐವನ್‌ ಡಿಸೋಜ, ಮಾಜಿ ಶಾಸಕ ಜೆ.ಆರ್‌.ಲೋಬೋ, ಕಾರ್ಪೊರೇಟರ್‌ ನವೀನ್‌ ಡಿಸೋಜ, ಮಿಲಾಗ್ರಿಸ್‌ ಚರ್ಚ್‌ನ ಧರ್ಮಗುರು ರೆ| ಫಾ| ಜೋಸೆಫ್‌ ಜೆ.ಲೋಬೋ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅತ್ಯಾಕರ್ಷಕ: “ಮೈಲ್‌ಸ್ಟೋನ್‌ 25′ ಸಂಕೀ ರ್ಣವು ವಿಸ್ತೃತ ಮತ್ತು ವಿಶಿಷ್ಟ ವಾಸ್ತು ಶೈಲಿ ಸಹಿತ ನಿರ್ಮಾಣವಾಗಿದೆ. ಆರ್ಕಿಟೆಕ್ನಿಕ್ಸ್‌ನ ಪೀಟರ್‌ ಮಸ್ಕರೇಞ್ಞಸ್‌ ಅವರು ಆರ್ಕಿಟೆಕ್ಟ್. ಎಂಫೇರ್‌ ಕನ್‌ಸ್ಟಕ್ಷನ್ಸ್‌ ನವರು ನಿರ್ಮಾಣ ಕಂಟ್ರಾಕ್ಟರ್. ನ್ಯಾಯವಾದಿ ಭಾಸ್ಕರ್‌ ಎಸ್‌. ಕಟ್ಟೆಮಾರ್‌ ಅವರು ಯೋಜನೆಯ ಜಂಟಿ ಪಾಲುದಾರರು.

ಲ್ಯಾಂಡ್‌ಟ್ರೇಡ್ಸ್‌ ಸಂಸ್ಥೆಯ ಸ್ಥಾಪನೆಯ 25 ವರ್ಷಗಳು ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಸಾರ್ಥಕ ಎರಡೂವರೆ ದಶಕಗಳ ಯಶಸ್ವಿ ಪರಂಪರೆಯ ಸವಿನೆನಪಿ ಗಾಗಿ ಈ “ಮೈಲ್‌ಸ್ಟೋನ್‌ 25′ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿದೆ. ನೆಲ ಅಂತಸ್ತು ಮತ್ತು ಐದು ಅಂತಸ್ತುಗಳ ಅತ್ಯಾಕ ರ್ಷಕ ವಾಣಿಜ್ಯ ಸ್ಥಳಾವಕಾಶವಿರುವ ಈ ವಾಣಿಜ್ಯ ಸಂಕೀರ್ಣವು, ಹೂಡಿಕೆದಾರರು, ಉದ್ಯಮಿಗಳಿಗೆ ಅನುಕೂಲಕರವಾಗಿದೆ.

Advertisement

ಪೂರಕ ಮಾಹಿತಿ: www.landtrades.in

ನೂತನ ಕಚೇರಿಗೆ ಚಾಲನೆ: 5ನೇ ಅಂತಸ್ತಿನಲ್ಲಿ ಲ್ಯಾಂಡ್‌ಟ್ರೇಡ್ಸ್‌ನ ನೂತನ ಕಚೇರಿ ಶುಭಾರಂಭಗೊಳ್ಳಲಿದೆ. ಸಂಸ್ಥೆಯ ಆಡಳಿತ, ಮಾರುಕಟ್ಟೆ, ಮಾರಾಟ ನಂತರದ ಸೇವೆಗಳು ಈ ಕಚೇರಿಯಿಂದಲೇ ನಿರ್ವಹಣೆಯಾಗಲಿವೆ.

ಲ್ಯಾಂಡ್‌ಟ್ರೇಡ್ಸ್‌ನ ಅಭಿಯಾನದಲ್ಲಿ “ಮೈಲ್‌ಸ್ಟೋನ್‌ 25′ ಪ್ರಮುಖ ಕಾಲಘಟ್ಟವಾಗಿದೆ. ಕಳೆದ 27 ವರ್ಷಗಳಿಂದ ನಾವು ಜನತೆಗೆ ಉತ್ತಮ ಗೃಹ, ಅಪಾರ್ಟ್‌ ಮೆಂಟ್ಸ್‌, ಕಚೇರಿ, ನಿವೇಶನ ಒದಗಿಸುತ್ತಾ ಬಂದಿದ್ದೇವೆ. ಈಗ ಹೊಸ ವಿಸ್ತಾರವಾದ ಕಚೇರಿಯ ಮೂಲಕ ಗ್ರಾಹಕರಿಗೆ ಮತ್ತಷ್ಟು ಸೇವೆ ಒದಗಿಸಲಾಗುತ್ತದೆ.
-ಶ್ರೀನಾಥ್‌ ಹೆಬ್ಬಾರ್‌, ಲ್ಯಾಂಡ್‌ಟ್ರೇಡ್ಸ್‌ನ ಮಾಲಿಕ

Advertisement

Udayavani is now on Telegram. Click here to join our channel and stay updated with the latest news.

Next