ಶಿಮ್ಲಾ : ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಲಘು ಭೂಕಂಪ ಸಂಭವಿಸಿರುವುದು ವರದಿಯಾಗಿದೆ.
ಭೂಕಂಪದ ಪರಿಣಾಮವಾಗಿ ಯಾವುದೇ ಜೀವಹಾನಿ ಅಥವಾ ಸೊತ್ತು ನಾಶ ನಷ್ಟ ವಾದ ವರದಿಗಳು ಬಂದಿಲ್ಲ.
ಹವಾಮಾನ ಇಲಾಖೆಯ ಪ್ರಕಾರ ಚಂಬಾ ಜಿಲ್ಲೆಯಲ್ಲಿ ನಸುಕಿನ 1.45ರ ಹೊತ್ತಿಗೆ ಸಂಭವಿಸಿರುವ ಭೂಕಂಪವು ರಿಕ್ಟರ್ ಮಾಪಕಲ್ಲಿ 3.3 ಅಂಕಗಳ ತೀವ್ರತೆಯಲ್ಲಿ ದಾಖಲಾಗಿದೆ.
ಭೂಕಂಪದ ಕೇಂದ್ರ ಬಿಂದು ಚಂಪಾ ಜಿಲ್ಲೆಯ ಈಶಾನ್ಯ ಭಾಗದಲ್ಲಿ 10 ಕಿ.ಮೀ. ನೆಲದಾಳದಲ್ಲಿ ಇತ್ತೆಂದು ವರದಿ ತಿಳಿಸಿದೆ. ಭೂಕಂಪದ ಬಳಿಕ ಚಂಬಾ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಹಲವು ಪಶ್ಚಾತ್ ಕಂಪನಗಳು ಅನುಭವಕ್ಕೆ ಬಂದಿವೆ.
ಕಳೆದ ಜೂನ್ 14, 17 ಮತ್ತು 23ರಂದು ಚಂಬಾ ಮತ್ತು ಶಿಮ್ಲಾ ಜಿಲ್ಲೆಗಳಲ್ಲಿ ಮೂರು ಲಘು ಭೂಕಂಪಗಳು ಸಂಭವಿಸಿವೆ.