Advertisement
ತಾಲೂಕಿನ ಸಗರ ಗ್ರಾಮದಲ್ಲಿ ಜಿಲ್ಲಾ ಕರಾರೈಸಂ ಹಾಗೂ ಹಸಿರು ಸೇನೆ ಘಟಕ ಆಯೋಜಿಸಿದ್ದ ಹಿರಿಯ ರೈತ ಹೋರಾಟಗಾರ ದಿ| ಮೈಲಾರಪ್ಪ ಸಗರ ಅವರ ನುಡಿನಮನ ಕಾರ್ಯಕ್ರಮದಲ್ಲಿ ನೇಗಿಲ ಪೂಜೆ ನೆರವೇರಿಸಿ ಅವರು ಮಾತನಾಡಿದರು.
Related Articles
Advertisement
ಲಕ್ಷ್ಮಿಪುರ ಶ್ರೀಗಿರಿಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಹೇಶಗೌಡ ಸುಬೇದಾರ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಚಾಲಕ ಶಾಂತರಡ್ಡಿ ಪಾಟೀಲ್, ಮುಖಂಡರಾದ ಅಶೋಕಗೌಡ ಸುಬೇದಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಹೊಸಪೇಟೆ, ಭಕ್ತರಳ್ಳಿ ಭೆ„ರೆಗೌಡಮ ಹನುಮಂತ ಹೊಳೆಯಾಚೆ, ಶ್ರೀನಿವಾಸ ನಾಯಕ, ಬಸನಗೌಡ ಬಿರೆದಾರ, ಗಗನ, ಮಲ್ಲನಗಭಡ ಹಗರಟಗಿ, ದೇವಿಂದ್ರಪ್ಪಗೌಡ ಪಾಟೀಲ್, ಬಸವರಾಜಪ್ಪಗೌಡ ಪಾಟೀಲ್,ದೇವರಾಜ, ಶಿವಕುಮಾರ ಮಲ್ಲೇದ್, ಶಂಕರ ಪಡಶೆಟ್ಟಿ, ರಾಯಪ್ಪ ನಾಯ್ಕೋಡಿ ಇದ್ದರು. ಇದೇ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು. ಮುಂಚಿತವಾಗಿ ಎತ್ತಿನ ಬಂಡಿಯಲ್ಲಿ ಕೋಡಿಹಳ್ಳಿ ಸೇರಿದಂತೆ ರೈತ ನಾಯಕರನ್ನು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ಮಾಡಲಾಯಿತು. ರೈತರು ಇಂತಹ ರಾಜಕಾರಣಿಗಳ ಬಗ್ಗೆ ಕುರಿತು ಚರ್ಚಿಸೋದು ನಿಲ್ಲಿಸಿ. ನಿಮ್ಮ ಬದುಕಿನ ಬಗ್ಗೆ ಚಿಂತಿಸಿ. ಕೇಂದ್ರ ಸರ್ಕಾರ ಹೊಸ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿದೆ. ಇದರಿಂದ ರೈತರ ಬಾಳು ಹಾಳಾಗಿ ಹೋಗಲಿದೆ. ನಮ್ಮ ಜಮೀನುಗಳಲ್ಲಿ ಕಂಪನಿಗಳು ಕೃಷಿ ಮಾಡಲು ಆಗಮಿಸಲಿದ್ದಾರೆ. ನಾವೆಲ್ಲ ಕೃಷಿತನವನ್ನು ಆಯಾ ಕಂಪನಿಗಳಿಗೆ ಒಪ್ಪಿಸಬೇಕಾಗುತ್ತದೆ. ಹೀಗಾದಲ್ಲಿ ಮುಂದೆ ನಮ್ಮ ಗತಿ ಏನಾಗಲಿದೆ ಎಂಬುದನ್ನು ಯೋಚಿಸಿ. ಅದರ ವಿರುದ್ಧ ಸೆಟೆದು ನಿಲ್ಲಬೇಕಿದೆ. ನಮ್ಮತನ ಕೃಷಿತನ ಉಳಿಸಿಕೊಳ್ಳಬೇಕಿದೆ.
ಕೋಡಿಹಳ್ಳಿ ಚಂದ್ರಶೇಖರ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ