Advertisement

ಫಾರ್‌ ರಿಜಿಸ್ಟ್ರೇಶನ್‌; ದಿಯಾ ಹೀರೋ; ಲವ್‌ ಮಾಕ್ಟೇಲ್‌ ಹೀರೋಯಿನ್‌!

12:14 PM Apr 07, 2022 | Team Udayavani |

2020ರ ಸೂಪರ್‌ ಹಿಟ್‌ ಚಿತ್ರಗಳಾದ “ದಿಯಾ’ ಹಾಗೂ “ಲವ್‌ ಮಾಕ್ಟೇಲ್’ ಚಿತ್ರಗಳ ಮೂಲಕ ಮನೆಮಾತಾಗಿರುವ ಪೃಥ್ವಿ ಅಂಬರ್‌ ಹಾಗೂ ಮಿಲನ ನಾಗರಾಜ್‌ ಅಭಿನಯದಲ್ಲಿ ಮೂಡಿಬರುರುತ್ತಿರುವ ಮತ್ತೂಂದು ಚಿತ್ರ “ಫಾರ್‌ ರಿಜಿಸ್ಟ್ರೇಶನ್‌’.

Advertisement

ವರ್ಷದ ಮೊದಲ ಹಬ್ಬ ಯುಗಾದಿಯಂದು ಈ ಚಿತ್ರದ ಫ‌ಸ್ಟ್ ಲುಕ್‌ ಬಿಡುಗಡೆಯಾಗಿದೆ. ಚಿತ್ರದ ಫ‌ಸ್ಟ್ ಲುಕ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಒಂದು ಮಿಲಿಯನ್‌ಗೂ ಅಧಿಕ ಲೈಕ್ಸ್ ದೊರಕಿದೆ. ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಈ ಚಿತ್ರದಲ್ಲಿ ಪೃಥ್ವಿ, ಆಶು ಪಾತ್ರದಲ್ಲಿ ಹಾಗೂ ಮಿಲನಾ ಅವರು ಅನ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:2.7 ಮಿಲಿಯನ್ ವೀಕ್ಷಣೆ ಪಡೆದ ಕೆಜಿಎಫ್ 2 ಚಿತ್ರದ ‘ಗಗನ ನೀ..’ ಹಾಡು

ನಿಶ್ಚಲ್‌ ಫಿಲಂಸ್‌ ಮೂಲಕ ಎನ್‌ .ನವೀನ್‌ ರಾವ್‌ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ದ್ವಾರಕನಾಥ್‌ ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ.

ಆರ್‌.ಕೆ.ಹರೀಶ್‌ ಸಂಗೀತ ನಿರ್ದೇಶನ, ಅಭಿಷೇಕ್‌ ಕಳತ್ತಿ ಛಾಯಾಗ್ರಹಣ ಹಾಗೂ ಮನು ಶೆಡ್ಗಾರ್‌ ಅವರ ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿ ನಿರಂಜನ್‌ ರಾಧಾಕೃಷ್ಣ ಇದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next