Advertisement
ಬಹುತೇಕ ಎಲ್ಲ ಮಸೀದಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಶೃಂಗರಿ ಸಲಾಗಿತ್ತು. ಬೆಳಗ್ಗಿನಿಂದಲೇ ವಿದ್ಯಾರ್ಥಿಗಳಿಂದ ಪ್ರವಾದಿಯವರ ಮದ್‌ಹ್ ಗೀತೆಗಳು, ಮೆರವಣಿಗೆ, ವಾಹನ ರ್ಯಾಲಿ, ಮೌಲಿದ್ ಮಜಿÉಸ್, ಕೂಟು ಝಿಯಾರತ್ ಇತ್ಯಾದಿ ನಡೆದವು. ಮದ್ರಸಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಮಂಗಳೂರಿನ ಬಂದರು, ಕಂದಕ, ಕುದ್ರೋಳಿ, ಬೆಂಗ್ರೆ, ತಣ್ಣೀರುಬಾವಿ, ಜೆಪ್ಪು, ಬೋಳಾರ, ಕಂಕನಾಡಿ, ಅಡ್ಯಾರ್ ಕಣ್ಣೂರು, ಮಾರಿಪಳ್ಳ, ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೆ.ಸಿ.ರೋಡ್, ಸೋಮೇಶ್ವರ, ಕೋಟೆಕಾರ್, ದೇರಳಕಟ್ಟೆ, ಕುತ್ತಾರ್, ಕೊಣಾಜೆ, ಪಾವೂರು, ಹರೇಕಳ, ಅಂಬ್ಲಿಮೊಗರು, ಬೆಳ್ಮ, ನಾಟೆಕಲ್, ಕಿನ್ಯ, ಮಂಜನಾಡಿ, ಮುಡಿಪು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಇತರ ಮಸೀದಿಗಳಲ್ಲಿಯೂ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಉಡುಪಿ ಜಿಲ್ಲೆಯ ದೊಡ್ಡಣಗುಡ್ಡೆ, ಹೂಡೆ, ಕುಂದಾಪುರ, ಗಂಗೊಳ್ಳಿ, ಉಚ್ಚಿಲ, ಕಾಪು, ಪಡುಬಿದ್ರಿ, ಕಾರ್ಕಳ ಮೊದಲಾದೆಡೆ ಮಿಲಾದುನ್ನಬಿ ಆಚರಣೆ ನಡೆಯಿತು. ಮಂಗಳೂರು ನಗರದ ಬಂದರು ಪ್ರದೇಶದಲ್ಲಿ ಅಲ… ಅಝØರಿಯಾ, ಕಂಡತ್ ಪಳ್ಳಿ, ಮದೀನಾ ಮಸ್ಜಿದ್, ಮೊಯ್ದಿನ್ ಪಳ್ಳಿ, ನಡುಪಳ್ಳಿ ವ್ಯಾಪ್ತಿಗೊಳಪಟ್ಟ ಮದ್ರಸಗಳ ಮಕ್ಕಳು ರವಿವಾರ ಬೆಳಗ್ಗೆ ಮಿಲಾದ್ ಮೆರವಣಿಗೆ ನಡೆಸಿದರು. ಕಂದಕ ಪ್ರದೇಶದಲ್ಲಿ ಮೆರವಣಿಗೆಯ ವೇಳೆ ತುಳುನಾಡ ಸಂಜೀವಿನಿ ಸಂಸ್ಥೆ ಮತ್ತು ಯುವಶಕ್ತಿ ಫ್ರೆಂvÕ… ಸದಸ್ಯರು ಸಿಹಿ ತಿಂಡಿ ಮತ್ತು ತಂಪು ಪಾನೀಯಗಳನ್ನು ವಿತರಿಸಿ ಸೌಹಾರ್ದಕ್ಕೆ ಸಾಕ್ಷಿಯಾದರು. ಈ ಸಂಸ್ಥೆಗಳ ಪದಾಧಿಕಾರಿಗಳಾದ ರೋಹಿತ್ ಕುಮಾರ್, ಸದಾಶಿವ ಶೆಟ್ಟಿ, ಮಹೇಂದ್ರ ಕಾಶಿಪಟ್ಣ, ರಾಹುಲ್ ದೇವಿಪ್ರಸಾದ್, ಮಹೇಶ್ ಉಪ್ಪಿನಂಗಡಿ ಉಪಸ್ಥಿತರಿದ್ದರು.