Advertisement

ಅಮೇರಿಕ ಶ್ವೇತಭವನಕ್ಕೂ ಕಾಲಿಟ್ಟ ಕೋವಿಡ್ 19: ಟ್ರಂಪ್ ಗೂ ಶುರುವಾಯಿತು ಚಿಂತೆ

10:57 AM Mar 22, 2020 | keerthan |

ವಾಷಿಂಗ್ಟನ್ ಡಿಸಿ: ವಿಶ್ವದಾದ್ಯಂತ ಹೆಮ್ಮಾರಿಯಂತೆ ಹಬ್ಬುತ್ತಿರುವ ಕೋವಿಡ್-19 ಸೋಂಕು ಅಮೇರಿಕದ ಶ್ವೇತಭವನಕ್ಕೂ ಕಾಲಿಟ್ಟಿದೆ. ಅಮೇರಿಕ ಉಪಾಧ್ಯಕ್ಷ ಮೈಕ್ ಪೆನ್ಸ್ ರ ಕಚೇರಿ ಸಿಬ್ಬಂದಿಗೆ ಕೋವಿಡ್ 19 ಸೋಂಕು ತಗುಲಿದೆ.

Advertisement

ಈ ವಿಷಯವನ್ನು ಶ್ವೇತಭವನ ಅಧಿಕೃತವಾಗಿ ಘೋಷಿಸಿದ್ದು, ಆ ಸಿಬ್ಬಂದಿಯ ಸನಿಹಕ್ಕೆ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅಥವಾ ಉಪಾಧ್ಯಕ್ಷ ಮೈಕ್ ಪೆನ್ಸ್ ಬಂದಿಲ್ಲ ಎನ್ನಲಾಗಿದೆ.

ಉಪಾಧ್ಯಕ್ಷರ ಆಫೀಸ್ ನ ಸದಸ್ಯನಿಗೆ ಕೋವಿಡ್ 19 ಪಾಸಿಟಿವ್ ಬಂದಿರುವುದು ಅಧಿಕೃತವಾಗಿದೆ ಎಂದು ಮೈಕ್ ಪೆನ್ಸ್ ರ ವಕ್ತಾರ ಕ್ಯಾಟೀ ಮಿಲ್ಲರ್ ಹೇಳಿಕೆ ನೀಡಿದ್ದಾರೆ.

ಅಮೇರಿಕ ಪ್ರಧಾನಿ ಡೋನಾಲ್ಡ್ ಟ್ರಂಪ್ ಅವರಿಗೂ ಕಳೆದ ವಾರ ಕೋವಿಡ್ 19 ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್ ವರದಿ ಬಂದಿದೆ.

ಕೋವಿಡ್ 19 ಸೋಂಕು ನಿಯಂತ್ರಣದ ಟಾಸ್ಕ್ ಫೋರ್ಸ್ ನ ನೇತೃತ್ವ ವಹಿಸಿದ್ದ ಉಪಾಧ್ಯಕ್ಷ ಮೈಕ್ ಪೆನ್ಸ್ ಗೆ ಇ್ನನೂ ಸೋಂಕು ಪರೀಕ್ಷೆ ನಡೆಸಲಾಗಿಲ್ಲ.

Advertisement

ಅಮೇರಿಕದಲ್ಲಿ ಇದುವರೆಗೆ 19,658 ಜನರು ಕೋವಿಡ್ 19 ಸೋಂಕು ಪೀಡಿತರಾಗಿದ್ದು, 264 ಜನರು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next