Advertisement

ಸಿಎಸ್ ಕೆ ಬ್ಯಾಟಿಂಗ್ ಕೋಚ್ ಮೈಕ್ ಹಸ್ಸಿಗೆ ಮತ್ತೊಮ್ಮೆ ಕೋವಿಡ್ ಪಾಸಿಟಿವ್

11:06 AM May 12, 2021 | Team Udayavani |

ನವದೆಹಲಿ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬ್ಯಾಟಿಂಗ್‌ ತರಬೇತುದಾರ ಮೈಕೆಲ್‌ ಹಸ್ಸಿ ಮತ್ತೂಮ್ಮೆ ಕೋವಿಡ್ ಸಂಕಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಮತ್ತಷ್ಟು ದಿನಗಳ ಕಾಲ ಭಾರತದಲ್ಲಿಯೇ ಉಳಿದುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

Advertisement

ಮೈಕ್ ಹಸ್ಸಿ ಅವರ ಶುಕ್ರವಾರದ ವರದಿ ನೆಗೆಟಿವ್‌ ಬಂದಿತ್ತು. ಹೀಗಾಗಿ ತವರಿಗೆ ಮರಳುವ ಸಿದ್ದತೆಯಲ್ಲಿದ್ದರು. ಆದರೆ ಭಾರತದಿಂದ ವಾಪಾಸಾಗುವ ಮುನ್ನ ‌ನಡೆಸಿದ ಮತ್ತೊಂದು ಪರೀಕ್ಷೆಯಲ್ಲಿ ಪಾಸಿಟಿವ್‌ ಬಂದ ಕಾರಣ ಹಸ್ಸಿ ತೀವ್ರ ಹತಾಶರಾಗಿದ್ದಾರೆ.

ಇದನ್ನೂ ಓದಿ:ಐಪಿಎಲ್‌ ಮುಂದಿನ ಭಾಗಕ್ಕೆ ಇಂಗ್ಲೆಂಡಿಗರು ಅಲಭ್ಯ?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಮತ್ತು ಸಿಇಓ ಕಾಶಿ ವಿಶ್ವನಾಥನ್ ಗೆ ಮೊದಲು ಕೋವಿಡ್ ಸೋಂಕು ದೃಢವಾಗಿತ್ತು.  ನಂತರ ಕಾಶಿ ವಿಶ್ವನಾಥನ್ ಅವರ ವರದಿ ನೆಗೆಟಿವ್ ಎಂದಾಗಿತ್ತು. ಇದಾದ ಒಂದು ದಿನದ ನಂತರ ಮೈಕ್ ಹಸ್ಸಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next