Advertisement

ಮಿಕಾ ಸಿಂಗ್‌ ಬಿಡುಗಡೆ; ಇಂದು UAE ಕೋರ್ಟಿಗೆ : ಭಾರತೀಯ ರಾಯಭಾರಿ

11:02 AM Dec 07, 2018 | Team Udayavani |

ಅಬುಧಾಬಿ : ಲೈಂಗಿಕ ದುರ್ವರ್ತನೆ ತೋರಿದ ಕಾರಣಕ್ಕೆ ಬಂಧಿಸಲ್ಪಟ್ಟಿದ್ದ ಭಾರತೀಯ ಪಾಪ್‌ ಸ್ಟಾರ್‌ ಮಿಕಾ ಸಿಂಗ್‌ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಯುಎಇ ಭಾರತೀಯ ರಾಯಭಾರಿ ನವದೀಪ್‌ ಸಿಂಗ್‌ ಸೂರಿ ತಿಳಿಸಿದ್ದಾರೆ. 

Advertisement

17 ವರ್ಷ ಪ್ರಾಯದ ಬ್ರಝಿಲ್‌ನ ಅಪ್ರಾಪ್ತ ವಯಸ್ಸಿನ ಬಾಲಕಿಯ ಆಕ್ಷೇಪಾರ್ಹ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್‌ ಮಾಡಿದ್ದ ಮಿಕಾ ಸಿಂಗ್‌ ವಿರುದ್ಧ ಬಾಲಕಿಯು ನೀಡಿದ್ದ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿತ್ತು. 

ಮಿಕಾ ಸಿಂಗ್‌ ರನ್ನು ಇಂದು ಶುಕ್ರವಾರ ಸ್ಥಳೀಯ ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ನವದೀಪ್‌ ಸಿಂಗ್‌ ಸೂರಿ ತಿಳಿಸಿದ್ದಾರೆ.  ಮಿಕಾ ಸಿಂಗ್‌ ರನ್ನು ಯುಎಇ ಕಾಲಮಾನ ಗುರುವಾರ ರಾತ್ರಿ 11.30ಕ್ಕೆ ಬಿಡುಗಡೆಗೊಳಿಸಲಾಗಿತ್ತು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next