Advertisement
ಯಾವುದೇ ಯೋಜನೆಯ ಕಾಮಾರಿಗಳು ನಡೆಯಬೇಕಾದರೂ ಹೊರ ರಾಜ್ಯ, ಹೊರಜಿಲ್ಲೆಗಳಿಂದ ಕೂಲಿ ಅರಸಿ ಬರುವ ಕಾರ್ಮಿಕರು ಪ್ರಮುಖವಾಗಿರುತ್ತಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಮಗಾರಿಗೆ ಪಕ್ಕದ ಆಂದ್ರಪ್ರದೇಶ, ತೆಲಂಗಾಣ, ತಮಿಳು ನಾಡು, ಕೇರಳ, ಗುಜರಾತ್, ರಾಜಸ್ಥಾನ. ಉತ್ತರ ಪ್ರದೇಶಸೇರಿದಂತೆ ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಕಾರ್ಮಿಕರು ನಗರದ ಹೊರವಲಯಗಳಲ್ಲಿ ಶೆಡ್ ಹಾಕಿಕೊಂಡು ಗುತ್ತಿಗೆದಾರರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ.
Related Articles
Advertisement
ರಸ್ತೆ, ಪೈಪ್‌ಲೈನ್ ಕಾರ್ಮಿಕರಿಗೆ ಸಂಕಷ್ಟ:ಜಿಲ್ಲೆಯಲ್ಲಿ ಸಾವಿರಾರು ಕೋಟಿ ವೆಚ್ಚದಲ್ಲಿ ರಸ್ತೆಮತ್ತು ಪೈಲ್‌ಲೈನ್ ಕಾಮಗಾರಿ, ಕುಡಿಯುವನೀರಿನ ಯೋಜನೆ, ಎತ್ತಿನಹೊಳೆ ಕಾಮಗಾರಿಹಾಗೂ ರೈಲ್ವೆ ಯೋಜನೆಯ ಕಾಮಗಾರಿನಡೆಯುತ್ತಿವೆ. ಹಲವಾರು ಗುತ್ತಿಗೆದಾರರುಈ ಕಾರ್ಮಿಕರ ಯೋಗಕ್ಷೇಮ ನೋಡಿ ಕೊಂಡು ತಮ್ಮ ಕಾಮಗಾರಿ ಕೆಲಸ ಮಾಡಿಸು ತ್ತಿದ್ದಾರೆ. ಆದರೆ, ಈಗ ಕೊರೊನಾ ತೀವ್ರತೆ ಯಿಂದಕಾರ್ಮಿಕರಲ್ಲಿ ಆತಂಕ ಮನೆ ಮಾಡಿದೆ.
ಕೊರೊನಾರ್ಭಟಕ್ಕೆ ನಲುಗಿರುವಕಾರ್ಮಿ ಕ ರ ರಕ್ಷಣೆ ಮಾಡುವ ಜವಾಬ್ದಾರಿಕಾಮ ಗಾರಿಗಳ ಗುತ್ತಿಗೆ ಪಡೆದಗುತ್ತಿಗೆದಾರರ ಮೇಲಿ ದ್ದು, ಕಳೆದ ವರ್ಷಆದ ಕೊರೊನಾ ಸಂದ ರ್ಭದಲ್ಲಿಕಾರ್ಮಿಕರ ಆರೋಗ್ಯ ತಪಾ ಸಣೆ ಮತ್ತು ಅವರಿಗೆ ಆಹಾರ ಒದಗಿಸಲು ಜಿಲ್ಲಾಡಳಿತದ ಜೊತೆಗೆ ಗುತ್ತಿಗೆದಾರರು ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಿದ್ದರು.
86,500 ಕಟ್ಟಡ ಕಾರ್ಮಿಕರು: ಜಿಲ್ಲೆಯಲ್ಲಿ86, 500 ಕಟ್ಟಡ ಕಾರ್ಮಿಕರು ಇದ್ದು, 11 ಸಾವಿರ ಗಾರ್ಮೆಂಟ್ಸ್ ಕಾರ್ಮಿಕರು, 9,000 ಅಸಂಘಟಿತ ಕಾರ್ಮಿಕರು ಇದ್ದಾರೆ. ಇನ್ನೂ ವಿವಿ ಧಬಗೆಯ ಕಾರ್ಮಿಕರು ಇದ್ದು, ಅವರ ನೋಂದಣಿ ಕಾರ್ಮಿಕ ಇಲಾಖೆ ಯಲ್ಲಿ ಆಗಿ ಲ್ಲ. ಕಳೆದವರ್ಷ ಕೊರೊನಾ ಆರ್ಭಟ ದಿಂ ದ ನಗರಪ್ರದೇಶದಿಂದ 4 ಸಾವಿರಕ್ಕೂ ಹೆಚ್ಚು ಕಾರ್ಮಿಕರು ತಮ್ಮ ಊರುಗಳತ್ತ ತೆರಳಿದ್ದರು.
ಸ್ವಗ್ರಾಮಗಳಿಗೆಹೋಗಲು ಸಿದ್ಧತೆಕಳೆದ ಲಾಕ್‌ಡೌನ್ ವೇಳೆಯಲ್ಲಿ ನಗರಪ್ರದೇಶಗಳನ್ನು ಬಿಟ್ಟು ಹಳ್ಳಿ ಕಡೆ ಮುಖಮಾಡಿದವರು ತಮ್ಮ ಪಾಳು ಬಿದ್ದಿದ್ದಜಮೀನುಗಳನ್ನು ಉಳುಮೆ ಮಾಡಿದಪರಿಣಾಮ ಬಿತ್ತನೆ ಪ್ರಮಾಣವೂ ಹೆಚ್ಚಾಗಿತ್ತು. ಕೊರೊನಾದಿಂದ ಕೆಲಸ ಕಳೆದುಕೊಂಡ ಹಲವರು ಕೃಷಿ ಚಟುವಟಿಕೆಯಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ.
ಕೊರೊನಾ ಮಹಾಮಾರಿ ಆರ್ಭಟಕ್ಕೆಹೆದರಿ ತಮ್ಮ ಹಳ್ಳಿ ಸೇರಿದ್ದ ಮಂದಿ ಕೃಷಿಚಟುವಟಿಕೆ ಜೊತೆಗೆ ಮಹಾತ್ಮಗಾಂಧಿಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 100 ದಿನದ ಕೆಲಸ ಪಡೆದು ತಮ್ಮಜಮೀನುಗಳಿಗೆ ಅಗತ್ಯವಾಗಿರುವ ಕೆಲಸಕಾರ್ಯಗಳನ್ನು ಮಾಡುತ್ತಿದ್ದಾರೆ. ಈಗಮತ್ತೆ ಲಾಕ್‌ಡೌನ್ ಆದರೆ ಈಗ ನಗರಪ್ರದೇಶಗಳಲ್ಲಿ ಕೆಲಸ ಮಾಡುವ ಮಂದಿಮತ್ತೆ ತಮ್ಮ ಗ್ರಾಮಗಳಿಗೆ ಹೋಗಲುಸಿದ್ಧತೆ ಮಾಡಿಕೊಂಡಿದ್ದಾರೆ.ರ್ಕಾರದ ಈಗಿನ ಮಾರ್ಗಸೂಚಿಯಂತೆಕಾರ್ಮಿಕರ ಕೆಲಸಕ್ಕೆ ಯಾವುದೇ ರೀತಿಯ ತೊಂದರೆಇಲ್ಲ. ತಮ್ಮ ಕೆಲಸವನ್ನು ಮಾಡಲು ಸರ್ಕಾರ ಅನುವುಮಾಡಿದೆ. ಈ ಸಂಬಂಧ ಹೊಸ ನಿಯಮ ಏನೂ ಬಂದಿಲ್ಲ.ಕಟ್ಟಡ ಕಾರ್ಮಿಕರು ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ.
ಸುಭಾಷ್ ಆಲದಕಟ್ಟೆ. ಕಾರ್ಮಿಕ ಅಧಿಕಾರಿ
ಚಿ.ನಿ.ಪುರುಷೋತ್ತಮ್