Advertisement

Egypt: ವಲಸಿಗರಿದ್ದ ನೌಕೆ ಮುಳುಗಿ 49 ಸಾವು

10:13 PM Jun 11, 2024 | Team Udayavani |

ಕೈರೊ: ವಲಸಿಗರು ಪಯಣಿಸುತ್ತಿದ್ದ ನೌಕೆಯೊಂದು ಸಮುದ್ರದಲ್ಲಿ ಮುಳುಗಿದ ಕಾರಣ 49 ಜನ ಸಾವನ್ನಪ್ಪಿದ್ದು, 140 ಜನ ಕಾಣೆಯಾಗಿದ್ದಾರೆ. ಸೋಮಾಲಿಯಾ ಹಾಗೂ ಇಥಿಯೋಪಿಯಾದ 260 ವಲಸಿಗರು ನೌಕೆಯಲ್ಲಿ ಪಯಣಿಸುತ್ತಿದ್ದರು.

Advertisement

ಯೆಮೆನ್‌ ದಕ್ಷಿಣ ಕರಾವಳಿ ಬಳಿ ನೌಕೆ ಮುಳುಗಡೆಯಾಗಿದೆ. ಈವರೆಗೆ 71 ಜನರನ್ನು ರಕ್ಷಿಸಲಾಗಿದ್ದು, ಘಟನೆಯಲ್ಲಿ 31 ಮಹಿಳೆಯರು, 6 ಮಕ್ಕಳು ಅಸುನೀಗಿದ್ದಾರೆ ಎಂದು ಅಂತಾರಾಷ್ಟ್ರೀಯ ವಲಸೆ ಸಂಸ್ಥೆಯ ವಕ್ತಾರ ಮೊಹಮ್ಮದಲಿ ಅಬುಂಜೆಲಾ ತಿಳಿಸಿದ್ದಾರೆ.

ಪೂರ್ವ ಆಫ್ರಿಕಾದಿಂದ ಕೊಲ್ಲಿ ದೇಶಕ್ಕೆ  ಉದ್ಯೋಗ ನಿಮಿತ್ತ ಸಾವಿರಾರು ವಲಸಿಗರು ಯೆಮೆನ್‌ ಮಾರ್ಗ ಮೂಲಕವೇ ಸಂಚರಿಸುತ್ತಾರೆ. ಏಪ್ರಿಲ್‌ನಲ್ಲೂ ಇದೇ ರೀತಿ ಘಟನೆ ನಡೆದಿತ್ತು. ಆಗ 1860 ಜನ ಪ್ರಾಣ ಕಳೆದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next