ನವದೆಹಲಿ:ಮಿಗ್ 29ಕೆ ತರಬೇತಿ ವಿಮಾನವೊಂದು ಅರಬ್ಬಿ ಸಮುದ್ರದಲ್ಲಿ ಗುರುವಾರ(ನವೆಂಬರ್ 26, 2020) ಸಂಜೆ ಪತನಗೊಂಡಿದ್ದು, ಓರ್ವ ಪೈಲಟ್ ಪವಾಡಸದೃಶ ಪಾರಾಗಿದ್ದು, ಮತ್ತೊರ್ವ ಪೈಲಟ್ ಗಾಗಿ ತೀವ್ರ ಶೋಧ ಕಾರ್ಯ ನಡೆಸುತ್ತಿರುವುದಾಗಿ ಭಾರತೀಯ ನೌಕಾಪಡೆ ತಿಳಿಸಿದೆ.
ಕಳೆದ 12 ತಿಂಗಳಲ್ಲಿ ಮಿಗ್ 29ಕೆ ಪತನಕ್ಕೀಡಾದ 3ನೇ ಪ್ರಕರಣ ಇದಾಗಿದೆ. ಈ ಘಟನೆ ಅರಬ್ಬಿ ಸಮುದ್ರ ಪ್ರದೇಶದಲ್ಲಿ ಸಂಭವಿಸಿದೆ. ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆದೇಶ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಮಿಗ್ 29ಕೆ ತರಬೇತಿ ಕಾರ್ಯಾಚರಣೆ ವೇಳೆ ಪತನಗೊಂಡಿದ್ದು, ಎರಡನೇ ಪೈಲಟ್ ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆ ದಿಢೀರ್ ಹೇಗೆ ಸಂಭವಿಸಿದೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಮೇ 8ರಂದು ಪಂಜಾಬ್ ನ ಜಲಂಧರ್ ನಲ್ಲಿಯೂ ಮಿಗ್ 29 ಪತನಗೊಂಡಿತ್ತು.
ಇದನ್ನೂ ಓದಿ:ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ
ಭಾರತೀಯ ನೌಕಾಪಡೆಯಲ್ಲಿ 40ಕ್ಕೂ ಅಧಿಕ ಮಿಗ್ 29 ಯುದ್ಧ ವಿಮಾನಗಳಿದ್ದು, ಇವುಗಳು ಗೋವಾ ಹಾಗೂ ಐಎನ್ ಎಸ್ ವಿಕ್ರಮಾದಿತ್ಯದ ಮೂಲಕ ಕಾರ್ಯಾಚರಿಸುತ್ತಿರುವುದಾಗಿ ವರದಿ ತಿಳಿಸಿದೆ.