Advertisement

Gyanvapi: ತೀರ್ಪಿನ ಬೆನ್ನಲ್ಲೇ ಮಧ್ಯರಾತ್ರಿ ಜ್ಞಾನವಾಪಿಯಲ್ಲಿ ವಿಗ್ರಹಗಳಿಗೆ ಪೂಜೆ

11:12 AM Feb 01, 2024 | Team Udayavani |

ಉತ್ತರಪ್ರದೇಶ: ಜ್ಞಾನವಾಪಿ ಮಸೀದಿಯ ನೆಲಮಾಳಿಗೆಯಲ್ಲಿರುವ ವಿಗ್ರಹಗಳ ಮುಂದೆ ಅರ್ಚಕರು ಪೂಜೆ ಸಲ್ಲಿಸಬಹುದು ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಬುಧವಾರ ತೀರ್ಪು ನೀಡಿದ್ದು ಇದಾದ ಬಳಿಕ ಜ್ಞಾನವಾಪಿ ಆವರಣದಲ್ಲಿ ಮಧ್ಯರಾತ್ರಿಯಲ್ಲಿ ಧಾರ್ಮಿಕ ಸಮಾರಂಭಗಳನ್ನು ನಡೆಸಲಾಯಿತು.

Advertisement

ಮಾಹಿತಿಯ ಪ್ರಕಾರ, ನ್ಯಾಯಾಲಯದ ಆದೇಶದ ಬಳಿಕ ಪೂಜೆಗೆ ಸಿದ್ಧತೆಗಳನ್ನು ಮಾಡಲಾಯಿತು ಅಲ್ಲದೆ ಪೂಜೆಯ ವೇಳೆಗೆ ಜ್ಞಾನವಾಪಿಯಾ ಸುತ್ತ ಬಿಗಿ ಭದ್ರತೆ ಏರ್ಪಡಿಸಲಾಯಿತು.

ಈ ಎಲ್ಲಾ ಬೆಳವಣಿಗೆಯನ್ನು ಸುಪ್ರೀಂ ಕೋರ್ಟ್ ವಕೀಲ ವಿಷ್ಣು ಶಂಕರ್ ಜೈನ್ ಅವರು ಎಕ್ಸ್‌ನಲ್ಲಿ ದೃಢಪಡಿಸಿದ್ದಾರೆ “ನ್ಯಾಯಾಲಯದ ಆದೇಶಗಳನ್ನು ಪಾಲಿಸಲಾಗಿದೆ. ಜ್ಞಾನವಾಪಿ ಆವರಣದ ಸರ್ವೆ ವೇಳೆ ದೊರೆತ ಮೂರ್ತಿಗಳನ್ನು ಇಟ್ಟು ಪ್ರಾರ್ಥನೆ ಸಲ್ಲಿಸಿ, ಬಳಿಕ ಅರ್ಚಕರು ವಿಗ್ರಹಗಳಿಗೆ ಶಯನ ಆರತಿ ಮಾಡಿದರು. ಮುಂಭಾಗದಲ್ಲಿ ಅಖಂಡ ಜ್ಯೋತಿ ಬೆಳಗಲಾಯಿತು. ಈ ವೇಳೆ ಜ್ಞಾನವಾಪಿಯಾ ಸುತ್ತ ಹೆಚ್ಚಿನ ಭದ್ರತೆ ಒದಗಿಸಲಾಗಿತ್ತು ಎಂದು ಬರೆದುಕೊಂಡಿದ್ದಾರೆ.

ಗುರುವಾರದಿಂದ, ಜ್ಞಾನವಾಪಿ ಸಂಕೀರ್ಣದಲ್ಲಿ ಯಥಾ ಪ್ರಕಾರ ಪೂಜೆ, ಮಂಗಳಾರತಿ ನಡೆಯಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: Budget 2024: ಬಜೆಟ್‌ ನಲ್ಲಿ ಮಹಿಳಾ ಸಬಲೀಕರಣ, ರೈತರ ಆದಾಯಕ್ಕೆ ಹೆಚ್ಚಿನ ಒತ್ತು ಸಾಧ್ಯತೆ…

Advertisement
Advertisement

Udayavani is now on Telegram. Click here to join our channel and stay updated with the latest news.

Next