Advertisement
ಕೊಲ್ಲಿ ರಾಜ್ಯಗಳು ಮತ್ತು ಸೌದಿ ಅರೇಬಿಯಾದ ಕೆಲವು ಭಾಗಗಳಲ್ಲಿ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಚ್ಚಿದ ವಿಮಾನ ನಿಲ್ದಾಣಗಳು ಕಾರ್ಮಿಕರನ್ನು ಕಟ್ಟಿಹಾಕಿವೆ. ಅತ್ತ ತಾಯ್ನಾಡಿಗೆ ತೆರಳಲು ಸಾಧ್ಯವಾಗುತ್ತಿಲ್ಲ, ಇತ್ತ ದುಡಿಯಲೂ ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್ ಪ್ರಾರಂಭವಾಗುವ ಮೊದಲೇ ಲೆಬನಾನ್‌ನ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ಬಹುತೇಕ ಆದಾಯದ ಮೂಲಗಳನ್ನು ಛಿದ್ರಗೊಳಿಸಿದ್ದವು.
Related Articles
Advertisement
ಕೋವಿಡ್ 19 ಪೀಡಿತ ರಾಷ್ಟ್ರವಾದ ಇರಾನ್‌ನ ಸಮೀಪದಲ್ಲೇ ಈ ರಾಷ್ಟ್ರ ಇದೆ. ಅದಕ್ಕೆ ಹೋಲಿಸಿದರೆ ಕೊಲ್ಲಿ ರಾಜ್ಯಗಳಲ್ಲಿನ ಅಧಿಕೃತ ಕೊರೊನಾ ವೈರಸ್ ಸಂಖ್ಯೆಗಳು ತುಲನಾತ್ಮಕವಾಗಿ ಕಡಿಮೆ ಇದೆ. ಮೇ ತಿಂಗಳ ಕೊನೆಯಲ್ಲಿ ರಂಜಾನ್ ಅಂತ್ಯದ ವೇಳೆಗೆ ಈ ಪ್ರದೇಶದ ವಿಮಾನ ನಿಲ್ದಾಣಗಳು ತೆರೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಒಂದಿಷ್ಟು ಮಂದಿ ತಮ್ಮ ದೇಶಗಳಿಗೆ ತೆರಳುವ ಸಾಧ್ಯತೆ ಇದೆ. ಕೋವಿಡ್ 19 ಬಿಕ್ಕಟ್ಟು ಕೊಲ್ಲಿಯಾದ್ಯಂತ ಉದ್ಯೋಗವನ್ನು ಕುಂಠಿತಗೊಳಿಸಿದೆ. ಇದರಿಂದ ನಿರ್ಮಾಣ ವಲಯ, ಚಿಲ್ಲರೆ ವ್ಯಾಪಾರ ಮತ್ತು ಇತರ ಕ್ಷೇತ್ರಗಳಿಗೆ ಸಮಸ್ಯೆ ಆಗಿದೆ. ದೇಶಗಳ ಆರ್ಥಿಕ ಸ್ಥಿತಿಯ ಮೇಲೂ ಹೊಡೆತ ಬೀಳುವ ಆತಂಕ ಎದುರಾಗಿದೆ.
ಟೀಕೆಗೆ ಗುರಿಲೆಬನಾನ್ಗೆ ವಲಸೆ ಬಂದ ಗೃಹ ಕಾರ್ಮಿಕರನ್ನು ಶೋಷಿಸುವ ಅಥವಾ ನಿಂದಿಸುವ ಉದ್ಯೋಗದಾತರರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಸರಕಾರ ಸ್ಪಷ್ಟವಾಗಿ ಎಚ್ಚ ರಿಸದಿರುವುದು ಟೀಕೆಗೆ ಗುರಿಯಾಗಿದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗ ಹರಡುವ ಸಮಯದಲ್ಲಿ ಕಾರ್ಮಿಕರಿಗೂ ಆರೋಗ್ಯ ಸೇವೆಗೆ ಅವಕಾಶವಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಘಟಕ ಮಾಧ್ಯಮಗಳಿಗೆ ತಿಳಿಸಿದೆ.