Advertisement
1.ಏಳು ಲಕ್ಷ ರೂ.ಗೆ ಏರಿಕೆಪ್ರಸಕ್ತ ಹಳೆಯ ಹಾಗೂ ಹೊಸ ತೆರಿಗೆ ವ್ಯವಸ್ಥೆಯಡಿ ಐದು ಲಕ್ಷ ವಾರ್ಷಿಕ ಆದಾಯ ಇರುವವರು ತೆರಿಗೆ ಪಾವತಿಸುವ ಅಗತ್ಯ ಇರಲಿಲ್ಲ. ಆದರೆ ಇನ್ನು ಮುಂದೆ ಹೊಸ ವ್ಯವಸ್ಥೆಯಡಿ, ವಾರ್ಷಿಕವಾಗಿ 7 ಲಕ್ಷ ರೂ. ವರೆಗೆ ಆದಾಯ ಇರುವವವರು ಯಾವುದೇ ರೀತಿಯಲ್ಲಿ ತೆರಿಗೆ ಪಾವತಿ ಮಾಡಬೇಕಾಗಿಲ್ಲ. ಗಮನಾರ್ಹ ಅಂಶವೆಂದರೆ ಹೊಸ ತೆರಿಗೆ ವ್ಯವಸ್ಥೆಯನ್ನು ಬಯಸುವವರಿಗೆ ಮಾತ್ರ 7 ಲಕ್ಷ ರೂ. ವರೆಗೆ ಇರುವರು ಯಾವುದೇ ರೀತಿಯಲ್ಲಿ ತೆರಿಗೆಯಿಂದ ವಿನಾಯಿತಿ ಪಡೆಯಲಿದ್ದಾರೆ. ಹೊಸತಾಗಿ ತೆರಿಗೆ ಪಾವತಿ ಮಾಡುವವರಿಗೆ ಸರಕಾರ ಘೋಷಣೆ ಮಾಡಿದ ತೆರಿಗೆ ವ್ಯವಸ್ಥೆಯೇ ಅನ್ವಯ (ಡಿಫಾಲ್ಟ್)ವಾಗುತ್ತದೆ ಎಂದು ಸಚಿವೆ ನಿರ್ಮಲಾ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ನಿಧಾನವಾಗಿ ಹಳೆಯ ತೆರಿಗೆ ವ್ಯವಸ್ಥೆಯನ್ನು ತೆರೆ ಮರೆಗೆ ಸರಿಸುವ ಸಾಧ್ಯತೆಗಳು ಇದೆ ಎಂಬ ವಿಶ್ಲೇಷಣೆಗಳೂ ನಡೆದಿವೆ.
ಮಧ್ಯಮ ವರ್ಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸದ್ಯ ಆರು ಹಂತಗಳ ತೆರಿಗೆ ಹಂತಗಳನ್ನು ಐದಕ್ಕೆ ಇಳಿಸಲು ತೀರ್ಮಾನಿಸಲಾಗಿದೆ. ಅದಕ್ಕೆ ಪೂರಕವಾಗಿ ಸದ್ಯ ವಾರ್ಷಿಕವಾಗಿ ಇರುವ 2.5 ಲಕ್ಷ ರೂ.ಗಳನ್ನು 3 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಇದರಿಂದಾಗಿ 3 ಲಕ್ಷ ರೂ. ಗಳವರೆಗೆ ಆದಾಯ ಇರುವವರಿಗೆ ಯಾವುದೇ ರೀತಿಯ ತೆರಿಗೆ ಇಲ್ಲ. 3 ಲಕ್ಷ ರೂ.ಗಳಿಂದ 6 ಲಕ್ಷ ರೂ. ಇರುವವರಿಗೆ ಶೇ.5, 6 ಲಕ್ಷ ರೂ.ಗಳಿಂದ 9 ಲಕ್ಷ ರೂ. ಆದಾಯ ಇರುವವರಿಗೆ ಶೇ.10, 9 ಲಕ್ಷ ರೂ.ಗಳಿಂದ 12 ಲಕ್ಷ ರೂ. ಆದಾಯ ಇರುವವರಿಗೆ ಶೇ.15, 12 ಲಕ್ಷ ರೂ.ಗಳಿಂದ 15 ಲಕ್ಷ ರೂ. ಆದಾಯ ಇರುವವರಿಗೆ ಶೇ.20, 15 ಲಕ್ಷ ರೂ.ಗಳಿಗಿಂತ ಹೆಚ್ಚು ಆದಾಯ ಇರುವವರಿಗೆ ಶೇ.30 ತೆರಿಗೆ ವಿಧಿಸಲಾಗುತ್ತದೆ.
ತೆರಿಗೆದಾರರಿಗೆ ಹೊಸ ತೆರಿಗೆ ಪದ್ಧತಿಯಿಂದ ಅನುಕೂಲ ಎಂದು ಪ್ರತಿಪಾದಿಸುತ್ತಿದೆ ಕೇಂದ್ರ ಸರಕಾರ. ಹೊಸ ವ್ಯವಸ್ಥೆಯಲ್ಲಿ ವಾರ್ಷಿಕವಾಗಿ 9 ಲಕ್ಷ ರೂ. ಆದಾಯ ಹೊಂದಿರುವ ವ್ಯಕ್ತಿ 45 ಸಾವಿರ ರೂ. ತೆರಿಗೆ ಪಾವತಿ ಮಾಡಿದರೆ ಸಾಕು. ಅಂದರೆ ವ್ಯಕ್ತಿಯ ಆದಾಯದ ಶೇ.5 ಮಾತ್ರ ತೆರಿಗೆ. 15 ಲಕ್ಷ ರೂ. ಆದಾಯ ಹೊಂದಿರುವ ವ್ಯಕ್ತಿಗೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಶೇ.10ರ ವ್ಯಾಪ್ತಿಯಲ್ಲಿ 1.5 ಲಕ್ಷ ರೂ. ತೆರಿಗೆ ಪಾವತಿ ಮಾಡಿದರೆ ಸಾಕು. ಹಳೆಯ ತೆರಿಗೆ ವ್ಯವಸ್ಥೆಯಲ್ಲಿ 1,87, 500 ರೂ. ತೆರಿಗೆ ಪಾವತಿ ಮಾಡಬೇಕಾಗುತ್ತದೆ. 3.ಸ್ಟಾಂಡರ್ಡ್ ಡಿಡಕ್ಷನ್ ವಿಸ್ತರಣೆ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಮೂರನೇ ಪ್ರಸ್ತಾವವೆಂದರೆ, ಸಂಬಳದಾರರಿಗೆ ಮತ್ತು ಪಿಂಚಣಿದಾರರಿಗೆ ಇರುವ ಸ್ಟಾಂಡರ್ಡ್ ಡಿಡಕ್ಷನ್ ಅನುಕೂಲವನ್ನು ಹೊಸ ತೆರಿಗೆ ಪದ್ಧತಿಗೂ ವಿಸ್ತರಿಸಲಾಗಿದೆ. ವಾರ್ಷಿಕ 15.5 ಲಕ್ಷ ರೂ ಹಾಗೂ ಅದಕ್ಕಿಂತ ಹೆಚ್ಚಿನ ಆದಾಯ ಇರುವವರಿಗೆ 52,500 ರೂ ಸ್ಟಾಂಡರ್ಡ್ ಡಿಡಕ್ಷನ್ ಲಾಭ ದೊರೆಯಲಿದೆ.
Related Articles
ದೇಶದಲ್ಲಿ ತೆರಿಗೆ ಮಿತಿ ಶೇ.42.74 ಆಗಿದ್ದು, ಸರಕಾರದ ಪ್ರಕಾರ ಈ ಪ್ರಮಾಣ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು. ಈ ಹಿನ್ನೆಲೆಯಲ್ಲಿ ಸರ್ಚಾರ್ಜ್ ಪ್ರಮಾಣವನ್ನು ಶೇ.37ರಿಂದ ಶೇ.25ಕ್ಕೆ ಇಳಿಸಲು ಬಜೆಟ್‌ನಲ್ಲಿ ಪ್ರಸ್ತಾವಿಸಲಾಗಿದೆ. ಇದು ಹೆಚ್ಚಿನ ಮೊತ್ತದ ಸಂಬಳ ಪಡೆಯುವ ವರ್ಗಕ್ಕೆ ಅನುಕೂಲವಾಗಿ ಪರಿಣಮಿಸಲಿದೆ.
Advertisement
5.ಎಲ್‌ಟಿಸಿ ಮಿತಿ ಹೆಚ್ಚಳಸರಕಾರೇತರ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿ ಇದ್ದುಕೊಂಡು ನಿವೃತ್ತಿಯಾಗುವವರಿಗೆ ರಜೆ ನಗದೀಕರಣ ಮಾಡುವ ಸಂದರ್ಭದಲ್ಲಿ ಇರುವ ತೆರಿಗೆ ವಿನಾಯಿತಿ ಮೊತ್ತವನ್ನು 3 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳಿಗೆ ಏರಿಕೆ ಮಾಡಲು ಸರಕಾರ ಪ್ರಸ್ತಾವಿಸಿದೆ. ದೇಶದ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಸರಕಾರದ ತೆರಿಗೆ ಪಾವತಿ ಮಾಡುವ ವೆಬ್‌ಸೈಟ್ ಮೂಲಕ ಪ್ರತಿದಿನ 72 ಲಕ್ಷ ರಿಟರ್ನ್ಸ್ ಗಳು ಸಲ್ಲಿಕೆಯಾಗಿವೆ. ಪ್ರಸಕ್ತ ವರ್ಷ 6.6 ಕೋಟಿ ರಿಟರ್ನ್ಸ್ ಗಳನ್ನು ಪರಿಶೀಲಿಸಿ, ಕ್ಲೇಮುಗಳನ್ನು ಇತ್ಯರ್ಥಗೊಳಿಸಲಾಗಿದೆ. ಫಟಾಫಟ್ ರಿಟರ್ನ್ಸ್!
ರಿಟರ್ನ್ಸ್ ಗಳನ್ನು ಪರಿಶೀಲಿಸಿ ಅವುಗಳನ್ನು ವಿಲೇವಾರಿ ಮಾಡುವ ದಿನಗಳ ಸಂಖ್ಯೆ 93 ದಿನಗಳಿಂದ 16 ದಿನಗಳ ವರೆಗೆ ಇಳಿಕೆ ಮಾಡಲಾಗಿದೆ. ಶೇ.45ಕ್ಕೂ ಅಧಿಕ ರಿಟರ್ನ್ಸ್ ಗಳನ್ನು ಈಗ 24 ಗಂಟೆಗಳ ಅವಧಿಯಲ್ಲಿ ಪರಿಶೀಲಿಸಿ ಸಂಬಂಧಿಸಿದವರಿಗೆ ನೀಡಲಾಗುತ್ತದೆ. ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಸುಧಾರಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕೆ ಹೊಸ ಮಾದರಿಯ ಫಾರಂಗಳನ್ನು ಜಾರಿಗೊಳಿಸಲು ಸರಕಾರ ಉದ್ದೇಶಿಸಿದೆ. ಹೊಸ ಮತ್ತು ಹಳೆ ತೆರಿಗೆ ಪದ್ಧತಿ ನಡುವಿನ ವ್ಯತ್ಯಾಸ
ಹಾಲಿ ತೆರಿಗೆ ವ್ಯವಸ್ಥೆಯಲ್ಲಿ ಏನಿದೆ?
ಸದ್ಯ ಇರುವ ತೆರಿಗೆ ವ್ಯವಸ್ಥೆಯಲ್ಲಿ ಆರು ತೆರಿಗೆ ವ್ಯವಸ್ಥೆಗಳು ಇವೆ. ಮುಂದಿನ ವಿತ್ತೀಯ ವರ್ಷದಿಂದ ಅದನ್ನು ಐದಕ್ಕೆ ಇಳಿಕೆ.
ಸಂಬಳದಾರರಿಗೆ ಅನುಕೂಲವಾಗುವಂತೆ ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಳ
ತೆರಿಗೆ ಮಿತಿಯನ್ನು 5 ಲಕ್ಷ ರೂ.ಗಳಿಂದ 7 ಲಕ್ಷ ರೂ.ಗೆ ಏರಿಕೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ
ಯಾವುದಕ್ಕೆ ಅವಕಾಶ ಇಲ್ಲ?
ಬಜೆಟ್‌ನಲ್ಲಿ ಘೋಷಣೆ ಮಾಡಿದ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಈ ಅಂಶಗಳನ್ನು ಕ್ಲೇಮು ಮಾಡಲು ಅವಕಾಶ ಇಲ್ಲ
ಮನೆ ಬಾಡಿಗೆ ಭತ್ತೆ
ಗೃಹ ಸಾಲ ಬಡ್ಡಿ
ಸೆಕ್ಷನ್ 80ಸಿಸಿಡಿ (2) ಅಂದರೆ ಉದ್ಯೋಗದಾತರಿಂದ ಎನ್‌ಪಿಎಸ್‌ಗೆ ದೇಣಿಗೆ, ಉಳಿತಾಯ ಖಾತೆ ಮೇಲಿನ ಬಡ್ಡಿ, ಚಾಪ್ಟರ್ 6ಎ ಡಿಡಕ್ಷನ್‌ಗಳು (80ಸಿ, 80ಡಿ, 80ಇ ಇತರ) ಸೆಕ್ಷನ್ ಅನ್ನು ಹೊರತುಪಡಿಸಿ.
ಲೀವ್ ಟ್ರಾವೆಲ್ ಅಲೋವೆನ್ಸ್
ವೃತ್ತಿ ತೆರಿಗೆ (ಪ್ರೊಫೆಶನಲ್ ಟ್ಯಾಕ್ಸ್) ಸ್ಟಾರ್ಟ್‌ಅಪ್ ಗಳಿಗೆ ತೆರಿಗೆ
ಸ್ಟಾರ್ಟ್‌ಅಪ್ ಗಳನ್ನು ಶುರು ಮಾಡಲು ಉದ್ದೇಶಿಸಿದ್ದೀರಾ? ಹಾಗಿದ್ದರೆ ನಿಮಗೆ 2024ರ ವರೆಗೆ ಆದಾಯ ತೆರಿಗೆಯಿಂದ ವಿನಾಯಿತಿ ಸಿಗಲಿದೆ. ಸದ್ಯ ಈ ನಿಯಮ 2023 ಎ.1ರ ಒಳಾಗಾಗಿ ಸ್ಥಾಪನೆಗೊಂಡ ನವೋದ್ಯಮಗಳಿಗೆ ಅನ್ವಯವಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ನರೇಂದ್ರ ಮೋದಿ ನೇತೃತ್ವದ ಸರಕಾರ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾವ ಮಾಡಿ ದಂತೆ 2023 ಮಾ.31ರಿಂದ 2024ರ ಮಾ.31ರ ವರೆಗೆ ಸ್ಥಾಪನೆಯಾಗುವ ನವೋದ್ಯಮಗಳಿಗೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಲು ಕೇಂದ್ರ ಸರಕಾರ ತೀರ್ಮಾನಿಸಿದೆ. ಇದಲ್ಲದೆ ಈ ಕ್ಷೇತ್ರದಲ್ಲಿ ಉಂಟಾಗಿರುವ ನಷ್ಟದ ಪ್ರಮಾಣವನ್ನು ಹತ್ತು ವರ್ಷಗಳಿಗೆ ವಿಸ್ತರಿಸುವ ನಿಟ್ಟಿನಲ್ಲಿ ಕೂಡ ಪ್ರಸ್ತಾವವನ್ನು ಮಂಡಿಸಲಾಗಿದೆ. ಸದ್ಯ ನಷ್ಟ ವಿಸ್ತರಣೆ ಏಳು ವರ್ಷಗಳ ವರೆಗೆ ಅವಕಾಶ ಇದೆ. ಈ ಬಗ್ಗೆ ದೇಶದಲ್ಲಿನ ಮಾಹಿತಿ ತಂತ್ರಜ್ಞಾನ ಕಂಪೆನಿಗಳ ಒಕ್ಕೂಟ ನಾಸ್‌ಕಾಮ್ ಕೇಂದ್ರ ಸರಕಾರವನ್ನು ಆಗ್ರಹಿಸಿತ್ತು. ಅದಕ್ಕೆ ಅನುಸಾರವಾಗಿ ಈ ಬಜೆಟ್‌ನಲ್ಲಿ ಈ ಘೋಷಣೆ ಮಾಡಲಾಗಿದೆ.