Advertisement
ಈಗಾಗಲೇ ಪ್ರಾಥಮಿಕ ತರಗತಿ ಸಹಿತವಾಗಿ ಎಲ್ಲ ವಿದ್ಯಾರ್ಥಿಗಳಿಗೂ ಭೌತಿಕ ತರಗತಿ ಆರಂಭಿಸಿದ್ದರೂ, ಕೆಲವರಿಗೆ ಬಿಸಿಯೂಟ ನೀಡುತ್ತಿರಲಿಲ್ಲ. ಅಲ್ಲದೆ, ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ತರಗತಿ ಇರಲಿಲ್ಲ. ಮಂಗಳವಾರದಿಂದ ಪೂರ್ಣ ಪ್ರಮಾಣದ ತರಗತಿ ಜತೆಗೆ ಶಾಲೆಗಳಲ್ಲೇ ಬಿಸಿಯೂಟ ಲಭ್ಯವಾಗಲಿದ್ದು, ಬಿಸಿಯೂಟ ಸಿದ್ಧಪಡಿಸಿ, ನೀಡಲು ಬೇಕಾದ ಸಿದ್ಧತೆಯನ್ನು ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಮಾಡಿಕೊಳ್ಳಲಾಗಿದೆ. ಜತೆಗೆ ಅದಮ್ಯ ಚೇತನ,ಅಕ್ಷಯ ಫೌಂಡೇಶನ್ ಸೇರಿ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಕೂಡ ಬಿಸಿಯೂಟ ನೀಡಲು ತಯಾರಿ ಮಾಡಿಕೊಂಡಿವೆ.
ಸರಕಾರ ಈಗಾಗಲೇ ಪ್ರಾಥಮಿಕ ತರಗತಿಯಿಂದ ಪಿಯುಸಿ ವರಗೆಗೂ ಭೌತಿಕ ತರಗತಿ ಆರಂಭಿಸಲು ಅನುಮತಿ ನೀಡಿದೆ. ಆದರೆ, ಕೆಲವೊಂದು ಖಾಸಗಿ ಶಿಕ್ಷಣ ಸಂಸ್ಥೆಗಳು ಇನ್ನು ಭೌತಿಕ ತರಗತಿಗಳನ್ನು ಆರಂಭಿಸಿಲ್ಲ. ಆನ್‌ಲೈನ್ ತರಗತಿಯನ್ನೇ ಮುಂದುವರಿಸಿಕೊಂಡು ಬಂದಿದೆ. ದೀಪಾವಳಿ ಕಳೆದು ನ. 8ರಿಂದ ಭೌತಿಕ ತರಗತಿ ಆರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಂಡಿವೆ. ಇದನ್ನೂ ಓದಿ:ಉತ್ತರಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಅಖೀಲೇಶ್ ಘೋಷಣೆ
Related Articles
-ಬಿ.ಸಿ. ನಾಗೇಶ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ
Advertisement