Advertisement

Microsoft: “ಭಾರತದಲ್ಲಿ 75,000 ಮಹಿಳೆಯರಿಗೆ ಮೈಕ್ರೋಸಾಫ್ಟ್ ತರಬೇತಿ”

08:35 PM Feb 08, 2024 | Team Udayavani |

ಬೆಂಗಳೂರು: ಮೈಕ್ರೋಸಾಫ್ಟ್ನ “ಕೋಡ್‌ ವಿದೌಟ್‌ ಬ್ಯಾರಿಯರ್” ಯೋಜನೆಯನ್ನು ಭಾರತಕ್ಕೂ ವಿಸ್ತರಿಸಲಾಗುವುದು. ಈ ಯೋಜನೆಯಡಿ 2024ರಲ್ಲಿ 75,000 ಮಹಿಳಾ ಡೆವಲಪರ್‌ಗಳಿಗೆ ತಾಂತ್ರಿಕ ತರಬೇತಿ ನೀಡಲಾಗುವುದು ಎಂದು ಮೈಕ್ರೋಸಾಫ್ಟ್ ಮುಖ್ಯಸ್ಥ ಸತ್ಯ ನಾದೆಳ್ಲ ಘೋಷಿಸಿದ್ದಾರೆ.

Advertisement

ಬೆಂಗಳೂರಿನಲ್ಲಿ ನಡೆದ “ಮೈಕ್ರೋಸಾಫ್ಟ್ ಎಐ ಟೂರ್‌” ಕಾರ್ಯಕ್ರಮದಲ್ಲಿ 1,100 ಡೆವಲಪರ್‌ಗಳು ಮತ್ತು ತಾಂತ್ರಿಕ ತಜ್ಞರನ್ನು ಉದ್ದೇಶಿಸಿ ಮಾತನಾಡಿದ ಅವರು, “ಜಾಗತಿಕವಾಗಿ ಕೃತಕ ಬುದ್ಧಿಮತ್ತೆ (ಎಐ) ಆವಿಷ್ಕಾರವನ್ನು ವೇಗಗೊಳಿಸಲು ಭಾರತೀಯ ಡೆವಲಪರ್‌ಗಳ ಕೊಡುಗೆ ಮಹತ್ತರವಾದದು’ ಎಂದು ಹೇಳಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ಕ್ಲೌಡ್‌, ಎಐ ಮತ್ತು ಡಿಜಿಟಲ್‌ ಟೆಕ್ನಾಲಜಿ ಕ್ಷೇತ್ರದಲ್ಲಿ ಲಿಂಗ ಅನುಪಾತವನ್ನು ತಗ್ಗಿಸಲು 2021ರಲ್ಲಿ ಮೈಕ್ರೋಸಾಫ್ಟ್ “ಕೋಡ್‌ ವಿದೌಟ್‌ ಬ್ಯಾರಿಯರ್” ಯೋಜನೆಯನ್ನು ಆರಂಭಿಸಿತು. ಇದರಡಿಯಲ್ಲಿ ಮಹಿಳಾ ಡೆವಲಪರ್‌ಗಳಿಗೆ ಕಂಪನಿಯು ತಾಂತ್ರಿಕ ಕೌಶಲ್ಯ ತರಬೇತಿಯನ್ನು ಒದಗಿಸುತ್ತದೆ. ಇದೇ ತಿಂಗಳು ಈ ಯೋಜನೆ ಭಾರತದಲ್ಲೂ ಆರಂಭವಾಗಲಿದ್ದು, ಈ ವರ್ಷ 75,000 ಭಾರತೀಯ ಮಹಿಳಾ ಡೆವಲಪರ್‌ಗಳಿಗೆ ಮೈಕ್ರೋಸಾಫ್ಟ್ ತಾಂತ್ರಿಕ ತರಬೇತಿ ನೀಡಲಿದೆ ಎಂದು ಕಂಪನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next