Advertisement

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

12:56 AM May 17, 2024 | Team Udayavani |

ವಾಷಿಂಗ್ಟನ್‌: ಅಮೆರಿಕ, ಚೀನ ನಡುವೆ ವ್ಯಾಪಾರ ಸಂಬಂಧ ಬಿರುಕುಗೊಂಡ ಹಿನ್ನೆಲೆ ಮೈಕ್ರೊಸಾಫ್ಟ್ ಕಂಪೆನಿ ಚೀನದಲ್ಲಿನ ತನ್ನ ಎಐ ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 800 ಸಿಬಂದಿಯನ್ನು ವರ್ಗಾವಣೆ ಮಾಡಲು ಮುಂದಾಗಿದೆ. ಈ ಪೈಕಿ ಚೀನ ನಾಗರಿಕರೇ ಹೆಚ್ಚಿದ್ದಾರೆ. ಸಿಬಂದಿಗೆ ಅಮೆರಿಕ, ಐರ್ಲೆಂಡ್‌, ನ್ಯೂಜಿಲೆಂಡ್‌, ಆಸ್ಟ್ರೇಲಿಯಾಗಳಿಗೆ ವರ್ಗಗೊಳ್ಳಲು ಅವಕಾಶ ನೀಡಿದೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬೈಡೆನ್‌ ಚೀನದಿಂದ ಆಮದಾಗುತ್ತಿದ್ದ ಇ-ವಾಹನ, ಬ್ಯಾಟರಿ, ಕಂಪ್ಯೂಟರ್‌ ಚಿಪ್‌, ವೈದ್ಯಕೀಯ ಉತ್ಪನ್ನಗಳನ್ನು ಕಡಿತಗೊಳಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next