Advertisement

ಆನ್‌ಲೈನ್‌ ಪಾಠಶಾಲೆ!

03:22 PM Apr 20, 2020 | mahesh |

ಕೋವಿಡ್ ವೈರಸ್‌ ಕಾರಣದಿಂದಾಗಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ. ಹೀಗಾಗಿ ಶಾಲೆಗಳು, ಅನೇಕ ಕಚೇರಿ ವ್ಯವಹಾರಗಳನ್ನು ಮನೆಯಿಂದಲೇ ನಿರ್ವಹಿಸಲಾಗುತ್ತಿದೆ. ಇದನ್ನು ಸಾಧ್ಯವಾಗಿಸುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಅನೇಕರು ಕಚೇರಿ ಕೆಲಸಗಳನ್ನು ಮನೆಯಿಂದಲೇ ಮಾಡಲು, ತಮ್ಮ ತಂಡದ ಜೊತೆ ಆನ್‌ ಲೈನ್‌ ಮೀಟಿಂಗ್‌ಗಳನ್ನು  ನಡೆಸಲು ಕೆಲ ಆ್ಯಪ್‌ಗ್ಳ ಮೊರೆ ಹೋಗಿದ್ದಾರೆ. ಆದರೆ, ಎಲ್ಲ ಆ್ಯಪ್‌ಗಳು ಸುರಕ್ಷಿತವಲ್ಲ. ಇಂಥ ಸಂದರ್ಭದಲ್ಲಿ ವಿಶ್ವಾಸಾರ್ಹವಾದ ಮೈಕ್ರೋಸಾಸ್ಟ್, ಸಾಮೂಹಿಕ ವಿಡಿಯೋ ಮೀಟಿಂಗ್‌ಗಳನ್ನು ನಡೆಸಲು, ವೀಡಿಯೋ ಕಾಲ್‌ಗ‌ಳನ್ನು ಮಾಡಲು ಟೀಮ್‌ ಆ್ಯಪ್‌ ಅನ್ನು ಪರಿಚಯಿಸಿದೆ.

Advertisement

ಭೌತಿಕ ತರಗತಿಯಿಲ್ಲದೆ ವಿದ್ಯಾರ್ಥಿಗಳ ಕಲಿಕೆ, ಚಟುವಟಿಕೆಗಳು ಮತ್ತು ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಈ ಪ್ರಕ್ರಿಯೆಯನ್ನು ಸರಾಗಗೊಳಿಸಲು, ಮೈಕ್ರೋಸಾಫ್ಟ್ ಶಿಕ್ಷಣ ಸಂಸ್ಥೆಗಳಿಗೆ ಅಗತ್ಯವಿರುವ ಮೈಕ್ರೋಸಾಫ್ಟ್ ಟೀಮ್‌ ಅಪ್ಲಿಕೇಶನ್‌ ಅನ್ನು ಉಚಿತವಾಗಿ ಒದಗಿಸಲು ಮುಂದಾಗಿದೆ. ಇದು ತರಗತಿಯ ತಂಡದ ಕೆಲಸಗಳಿಗೆ ವಿಡಿಯೊ ಮೀಟಿಂಗ್‌ ಗಳು ಆಫಿಸ್‌ 365 ಅಪ್ಲಿಕೇಶನ್‌ಗಳ ಆನ್‌ಲೈನ್‌ ಆವೃತ್ತಿಗಳು, ಅನುಸರಣೆ ಪರಿಕರಗಳು ಮತ್ತು ಮಾಹಿತಿಯ ರಕ್ಷಣೆಯನ್ನು ಒಳಗೊಂಡಿರುವ ಸಂಪೂರ್ಣ ಉಚಿತ ವೈಯಕ್ತೀಕರಿಸಿದ ಹಬ್‌ ಅನ್ನು ಒದಗಿಸುತ್ತದೆ. ಕಾರ್ಪೋರೇಟ್‌ ಕಂಪನಿಗಳಂತೆಯೇ, ಭಾರತದಾದ್ಯಂತ ಶಾಲೆಗಳು ಕೂಡ ದೂರದ ಕಲಿಕೆಗಾಗಿ ತಂಡಗಳನ್ನು ಬಳಸುತ್ತಿವೆ. ಕರ್ನಾಟಕದ
ಅನೇಕ ಜನಪ್ರಿಯ ಶಾಲೆಗಳು ಮನೆಯಿಂದಲೇ ಕಲಿಕೆಗಾಗಿ ಮೈಕ್ರೋಸಾಫ್ಟ್ ಟೀಮ್‌ ಅಪ್ಲಿಕೇಶನ್‌ ಬಳಸುತ್ತಿವೆ.

ಈ ಬಿಕ್ಕಟ್ಟಿನ ಸಮಯದಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ದೈನಂದಿನ ಕೆಲಸ, ಕಲಿಕೆ ಮತ್ತು ವೈಯಕ್ತಿಕ ಸಂಪರ್ಕಗಳನ್ನು ಸಕ್ರಿಯಗೊಳಿಸುವ ಸಾಧನವನ್ನು ಎದುರು ನೋಡುತ್ತಿದ್ದಾರೆ. ಆದರೆ, ತಂತ್ರಜ್ಞಾನ ಆಧರಿತ ಉಪಕರಣಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ಸೈಬರ್‌ ಕ್ರೈಂಗಳ ಅಪಾಯ ಎದುರಿಸಬೇಕಾಗಬಹುದು. ಬಳಕೆದಾರರು, ಪಾಲನೆ ಮಾಡುವವರು ಮತ್ತು ಶಿಕ್ಷಣ ತಜ್ಞರು ವಿಡಿಯೋ ಸಭೆಗಳು, ಸಂಭಾಷಣೆಗಳಲ್ಲಿ ಸಂಭವನೀಯ ಅಪಾಯಗಳ ಬಗ್ಗೆ ತಿಳಿದಿರಬೇಕು, ಪ್ರೀತಿಪಾತ್ರರನ್ನು, ವಿಶೇಷವಾಗಿ ಮಕ್ಕಳು ಮತ್ತು ವೃದಟಛಿರನ್ನು ಸೈಬರ್‌ ಅಪರಾಧಿಗಳಿಂದ ಸುರಕ್ಷಿತವಾಗಿರಿಸಿಕೊಳ್ಳಬೇಕು. ಆದ್ದರಿಂದ ಮೈಕ್ರೋಸಾಫ್ಟ್ ಟೀಮ್‌ ವಿಶ್ವಾಸಾರ್ಹ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಲು ಸಹಕರಿಸುತ್ತದೆ. ದತ್ತಾಂಶದ ಗೌಪ್ಯತೆಯನ್ನು
ಖಚಿತಪಡಿಸುತ್ತದೆ.

ಯೋಜಿತವಲ್ಲದ ಸಭೆಗಳಲ್ಲಿ, ಅನಿರೀಕ್ಷಿತವಾಗಿ ಪಾಲ್ಗೊಳ್ಳುವವರ ಜೊತೆ ಬಳಕೆದಾರರು ಸೂಕ್ಷ್ಮ ಮಾಹಿತಿಯನ್ನು ಚರ್ಚಿಸುವುದನ್ನು ತಡೆಯಬೇಕು. ಸೆಷನ್‌ ರೆಕಾರ್ಡಿಂಗ್‌ಗಳಲ್ಲಿ, ಪ್ರವೇಶ ಅನುಮತಿ ಸುವಾಗ ಜಾಗರೂಕರಾಗಿರಬೇಕು. ಲ್ಯಾಪ್‌ ಟಾಪ್‌, ಪಿ.ಸಿಗಳಲ್ಲಿ ಸಹಜವಾಗಿಯೇ ಮೈಕ್ರೋಸಾಫ್ಟ್ ಟೀಮ್ ಅನ್ನು ಬಳಸಬಹುದು. ಅಲ್ಲದೇ ಟೀಮ್‌ ಟೀಮ್‌ ಆಪ್‌
ಅನ್ನು ಅಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಡೌನ್‌ಲೋಡ್‌ ಮಾಡಿಕೊಂಡು ಇನ್‌ಸ್ಟಾಲ್‌ ಮಾಡಿದ ಬಳಿಕ ಫಾರ್‌ ಸ್ಕೂಲ್, ಫಾರ್‌ ಫ್ರೆಂಡ್ಸ್ ಆ್ಯಂಡ್‌ ಫ್ಯಾಮಿಲಿ, ಫಾರ್‌ ವರ್ಕ್‌ ಎಂಬ ಆಯ್ಕೆಗಳಿವೆ. ನಿಮ್ಮ ಅಗತ್ಯಕ್ಕನುಸಾರವಾಗಿ ಅದನ್ನು ಆಯ್ಕೆಮಾಡಿಕೊಂಡು, ನಿಮ್ಮದೇ ತಂಡ ರಚಿಸಿಕೊಂಡು ಬಳಸಬಹುದು.
ಡೌನ್‌ಲೋಡ್‌ ಲಿಂಕ್‌: bit.ly/2Xy0fYC

ಕೆ.ಎಸ್‌. ಬನಶಂಕರ ಆರಾಧ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next