Advertisement

ಮೈಕ್ರೋಸಾಫ್ಟ್ ಸರ್ಫೇಸ್ ಗೋ 3 ಬಿಡುಗಡೆ

06:46 PM Nov 17, 2021 | Team Udayavani |

ನವದೆಹಲಿ: ಮೈಕ್ರೋಸಾಫ್ಟ್ ಸಂಸ್ಥೆಯು ಸರ್ಫೇಸ್ ಗೋ 3 ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

ಬುಧವಾರದಿಂದಲೇ ಅದರ ಮುಂಗಡ ಬುಕ್ಕಿಂಗ್‌ ಕೂಡ ಆರಂಭವಾಗಿದೆ. ಸರ್ಫೇಸ್ ಗೋ 2 ಲ್ಯಾಪ್‌ಟಾಪ್‌ಗಿಂತ ಶೇ. 60ರಷ್ಟು ಹೆಚ್ಚು ವೇಗ ಇದರಲ್ಲಿದೆ ಎಂದು ಸಂಸ್ಥೆ ಹೇಳಿದೆ.

ಇದರಲ್ಲಿ 10ನೇ ಜನರೇಷನ್‌ನ ಇಂಟೆಲ್‌ ಕೋರ್‌ ಐ-3 ಪ್ರೊಸೆಸರ್‌ ಅಳವಡಿಸಲಾಗಿದೆ. 10.5 ಇಂಚು ಡಿಸ್ಪ್ಲೇ ಇರುವ ಈ ಲ್ಯಾಪ್‌ಟಾಪ್‌ನಲ್ಲಿ 5ಎಂಪಿ ಕ್ಯಾಮರಾ ಸೇರಿಸಲಾಗಿದೆ.

ವಿಂಡೋಸ್‌ 11ರೊಂದಿಗೆ ಬರುವ ಲ್ಯಾಪ್‌ಟಾಪ್‌ ಸ್ಟೋರೇಜ್‌ ವಿಚಾರದಲ್ಲಿ ಹಲವು ಆಯ್ಕೆಗಳಲ್ಲಿ ಲಭ್ಯ.

ಇಂಟೆಲ್‌ ಪೆಂಟಿಯಮ್‌ ಗೋಲ್ಡ್‌ ಪ್ರೊಸೆಸರ್‌ 8ಜಿಬಿ ರ್ಯಾಮ್‌ ಮತ್ತು 128ಜಿಬಿ ಸ್ಟೋರೇಜ್‌ ಇರುವ ಲ್ಯಾಪ್‌ಟಾಪ್‌ ಅಮೇಜಾನ್‌ನಲ್ಲಿ 57,999 ರೂಪಾಯಿಗೆ ಲಭ್ಯ.

Advertisement

ಇದನ್ನೂ ಓದಿ:ಗೋವಾ: ತಾಂತ್ರಿಕ ಸಮಸ್ಯೆಯಿಂದಾಗಿ ಜುವಾರಿ ಸೇತುವೆ ಉದ್ಘಾಟನೆ ಮುಂದೂಡಿಕೆ

Advertisement

Udayavani is now on Telegram. Click here to join our channel and stay updated with the latest news.

Next