ನವದೆಹಲಿ : ಜಾನ್ ಥಾಂಪ್ಸನ್ ಅವರ ಉತ್ತರಾಧಿಕಾರಿಯಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಥಾನಕ್ಕೆ ಮೈಕ್ರೊಸಾಫ್ಟ್ ಸತ್ಯ ನಾಡೆಲ್ಲಾ ಅವರನ್ನು ಆಯ್ಕೆ ಮಾಡಿದೆ.
ಸ್ಟೀವ್ ಬಾಲ್ಮರ್ ಮುಖೇನ 2014 ರಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಾಡೆಲ್ಲಾ, ಲಿಂಕ್ಡ್ ಇನ್, ನ್ಯೂನ್ಸ್ ಕಮ್ಯುನಿಕೇಷನ್ಸ್ ಮತ್ತು ಜೆನಿಮ್ಯಾಕ್ಸ್ ನಂತಹ ಬಿಲಿಯನ್ ಡಾಲರ್ ಸೇರಿದಂತೆ ಹಲವು ಕಡೆ ಸೇವೆ ಸಲ್ಲಿಸಿದ ಅನುಭವ ಉಳ್ಳವರು.
ಇದನ್ನೂ ಓದಿ : ಕೋವಿಡ್ : ರಾಜ್ಯದಲ್ಲಿಂದು 10685 ಸೋಂಕಿತರು ಗುಣಮುಖ; 5983 ಕೋವಿಡ್ ಹೊಸ ಪ್ರಕರಣ ಪತ್ತೆ
ಸದ್ಯ ಅಧ್ಯಕ್ಷರಾಗಿರುವ ಜಾನ್ ಡಬ್ಲೂ ಥಾಮಸ್ ಸ್ವತಂತ್ರ ನಿರ್ದೇಶಕರಾಗಿ ಮುಂದುವರಿಯುವ ಹಿನ್ನೆಲೆಯಲ್ಲಿ ಸತ್ಯ ಅವರನ್ನು ನೇಮಿಸಲಾಗಿದೆ ಎಂದು ಮೈಕ್ರೋ ಸಾಫ್ಟ್ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಈ ಕುರಿತಾಗಿ ಪ್ರತಿಕ್ರಿಯೆ ನೀಡಿದ ಮೈಕ್ರೋಸಾಫ್ಟ್, ಪ್ರಮುಖ ಸ್ವತಂತ್ರ ನಿರ್ದೇಶಕರಾಗಿ, ಮಂಡಳಿಯ ಕಾರ್ಯಸೂಚಿಗಳಲ್ಲಿ ಸ್ವತಂತ್ರ ನಿರ್ದೇಶಕರ ಪರವಾಗಿ ಮಾಹಿತಿ ಒದಗಿಸುವುದು, ಸ್ವತಂತ್ರ ನಿರ್ದೇಶಕರ ಸಭೆಗಳನ್ನು ಕರೆಯುವುದು, ಕಾರ್ಯನಿರ್ವಾಹಕ ಅಧಿವೇಶನಗಳಿಗೆ ಕಾರ್ಯಸೂಚಿಗಳನ್ನು ನಿಗದಿಪಡಿಸುವುದು ಮತ್ತು ಪ್ರಮುಖ ಕಾರ್ಯಕ್ಷಮತೆಯ ಮೌಲ್ಯಮಾಪನಗಳು ಸೇರಿದಂತೆ ಮಹತ್ವದ ಅಧಿಕಾರವನ್ನು ಸಮರ್ಥವಾಗಿ ಮುನ್ನಡೆಸಲಿದ್ದಾರೆ ಎಂದು ತಿಳಿಸಿದೆ.
ಇದನ್ನೂ ಓದಿ : ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರಕ್ಕೆ ಅರಣ್ಯ ಸಚಿವರರೊಂದಿಗೆ ಸುನಿಲ್ ಕುಮಾರ್ ಚರ್ಚೆ