Advertisement

ಪೌಲ್‌ ಅಲೆನ್‌ ನಿಧನ

07:55 AM Oct 17, 2018 | Karthik A |

ಸ್ಯಾನ್‌ ಫ್ರಾನ್ಸಿಸ್ಕೊ: ವಿಶ್ವದ ದೈತ್ಯ ಐಟಿ ಕಂಪೆನಿಗಳಲ್ಲೊಂದಾದ ಮೈಕ್ರೋಸಾಪ್ಟ್ ಕಂಪೆನಿಯ ಸಹ ಸಂಸ್ಥಾಪಕ ಪೌಲ್‌ ಅಲೆನ್‌ (65) ಮಂಗಳವಾರ ನಿಧನರಾಗಿದ್ದಾರೆ. ನಾನ್‌ ಹಾಡ್ಜ್ಕಿನ್ಸ್‌ ಲಿಂಫೋಮಾ ಎಂಬ ಹೆಸರಿನ ಕ್ಯಾನ್ಸರ್‌ನಿಂದ ಅವರು ಬಳಲುತ್ತಿದ್ದರು. ಎರಡು ವಾರಗಳ ಹಿಂದಷ್ಟೇ ಅವರು ಈ ವಿಷಯ ಬಹಿರಂಗಪಡಿಸಿದ್ದರು.

Advertisement

1970ರ ದಶಕದಲ್ಲಿ ಬಿಲ್‌ ಗೇಟ್ಸ್‌ ಜತೆಗೂಡಿ ಮೈಕ್ರೋಸಾಫ್ಟ್ ಸಂಸ್ಥೆಯನ್ನು ಹುಟ್ಟುಹಾಕಿದ್ದ ಅವರು, ಅನಂತರ ಹೂಡಿಕೆದಾರರಾಗಿ, ಕ್ರೀಡಾ ತಂಡದ ಮಾಲಕರಾಗಿಯೂ ಗುರುತಿಸಿಕೊಂಡಿದ್ದರಲ್ಲದೆ, ಜಗತ್ತಿನ ಕುಬೇರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಜಗತ್ತಿನ ದೈತ್ಯ ವಿಮಾನ ತಯಾರಿಸಿದ ಹೆಗ್ಗಳಿಕೆ ಪಡೆದ ಸ್ಟ್ರಾಟೊಲಾಂಚ್‌ ಸಿಸ್ಟಮ್ಸ್‌ ಸಂಸ್ಥೆಯನ್ನೂ ಹುಟ್ಟುಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next