Advertisement

ಈ ತಿಂಗಳ ಕೊನೆಯಲ್ಲಿ ಬೆಂಗಳೂರಿಗೆ ಸತ್ಯ ನಾದೆಲ್ಲ ಭೇಟಿ?

10:15 AM Feb 14, 2020 | Hari Prasad |

ಹೊಸದಿಲ್ಲಿ: ಮೈಕ್ರೋಸಾಫ್ಟ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸತ್ಯ ನಾದೆಲ್ಲ ಈ ತಿಂಗಳ ಕೊನೇ ವಾರದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ.

Advertisement

ಈ ಸಂದರ್ಭದಲ್ಲಿ ಅವರು, ಗ್ರಾಹಕರು, ಯುವ ಸಾಧಕರು, ವಿದ್ಯಾರ್ಥಿಗಳು, ಡೆವಲಪರ್‌ಗಳು ಮತ್ತು ಉದ್ಯಮಿಗಳ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಮೈಕ್ರೋಸಾಫ್ಟ್ ಸಂಸ್ಥೆ ಹೇಳಿದೆ. ಆದರೆ ಈ ಭೇಟಿ ವೇಳೆ ಸಿಇಒ ಯಾವ ಯಾವ ನಗರಗಳಿಗೆ ತೆರಳಿದ್ದಾರೆ ಎಂದು ಸಂಸ್ಥೆ ಸ್ಪಷ್ಟಪಡಿಸಿಲ್ಲ.

ಮೂಲಗಳ ಪ್ರಕಾರ ಫೆ.24ರಿಂದ 26ರವರೆಗೆಭಾರತ ಪ್ರವಾಸ ಕೈಗೊಳ್ಳಲಿರುವ ನಾಡೆಲ್ಲಾ, ಬೆಂಗಳೂರು, ಹೊಸದಿಲ್ಲಿ ಮತ್ತು ಮುಂಬಯಿಗೆ ಭೇಟಿ ನೀಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next