Advertisement

ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದ ಮೈಕ್ರೋಮ್ಯಾಕ್ಸ್: ನೋಟ್-1 Sold Out, 1B ಇಂದು ಬಿಡುಗಡೆ

11:33 AM Nov 26, 2020 | Mithun PG |

ನವದೆಹಲಿ: ಕೆಲವರ್ಷಗಳ ಹಿಂದೆ ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ರಾರಾಜಿಸಿ ಮರೆಯಾಗಿದ್ದ ‘ಮೈಕ್ರೋಮ್ಯಾಕ್ಸ್’ ಇದೀಗ ಮತ್ತೆ ಅಧಿಕೃತವಾಗಿ ಲಗ್ಗೆಯಿಟ್ಟಿದೆ.  ಮಾತ್ರವಲ್ಲದೆ ಎರಡು ಹೊಸ ಸ್ಮಾರ್ಟ್ ಫೋನ್ ಗಳಿಂದ ಇತರೆ ಸಂಸ್ಥೆಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.

Advertisement

ಈಗಾಗಲೇ ನವೆಂಬರ್ 24ರಂದು ಮೈಕ್ರೋಮ್ಯಾಕ್ಸ್ ಸಂಸ್ಥೆಯ  ನೋಟ್ 1 ಬಿಡುಗಡೆಯಾಗಿ ಸಂಚಲನ ಸೃಷ್ಟಿಸಿತ್ತು. ಇದೀಗ ಮೈಕ್ರೋಮ್ಯಾಕ್ಸ್ 1B  ನವೆಂಬರ್ 26 ರಂದು ಮಧ್ಯಾಹ್ನ 12 ಗಂಟೆಗೆ ಫ್ಲಿಫ್ ಕಾರ್ಟ್ ನಲ್ಲಿ ಬಿಡುಗಡೆಯಾಗಲಿದ್ದು ಭಾರೀ ಕುತೂಹಲ ಕೆರಳಿಸಿದೆ.

ಮೈಕ್ರೋಮ್ಯಾಕ್ಸ್ ನೋಟ್ 1 ಬಿಡುಗಡೆಯಾದ ಕೆಲಕ್ಷಣಗಳಲ್ಲೆ ‘ಸೋಲ್ಡ್ ಔಟ್’ ಆಗಿ ಗ್ರಾಹಕರಿಂದ ಭಾರೀ ಪ್ರಶಂಶೆಗೆ ಒಳಗಾಗಿತ್ತು. ಮಾರುಕಟ್ಟೆಯಲ್ಲಿ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಇಂದು (ನ.26)  ಮಧ್ಯಾಹ್ನ ಫ್ಲಿಫ್ ಕಾರ್ಟ್ ಮುಖಾಂತರ ಬಿಡುಗಡೆಯಾಗಲಿರುವ ಈ ಸ್ಮಾರ್ಟ್ ಪೋನ್ ಗೆ ಎಸ್ ಬಿ ಐ ಕ್ರೆಡಿಟ್ ಕಾರ್ಡ್ ಮೂಲಕ 5% ಕ್ಯಾಶ್ ಬ್ಯಾಕ್ ಮತ್ತು ಇಎಂಐ ಸೌಲಭ್ಯ ದೊರಕುತ್ತಿದೆ. ಮಾತ್ರವಲ್ಲದೆ ಫ್ಲಿಫ್ ಕಾರ್ಟ್ ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ 5% ಅನ್ ಲಿಮಿಟೆಡ್ ಕ್ಯಾಶ್ ಬ್ಯಾಕ್, ಆ್ಯಕ್ಸಿಸ್ ಬ್ಯಾಂಕ್ ಬಝ್ ಕಾರ್ಡ್ ಮುಖಾಂತರ 5% ಹೆಚ್ಚುವರಿ ನಗದು ರಿಯಾಯಿತಿ ದೊರಕುತ್ತಿದೆ.

ಇದನ್ನೂ ಓದಿ: ನಿವಾರ್ ಚಂಡಮಾರುತದ ಅಬ್ಬರ: ಚೆನ್ನೈ,ಪಾಂಡಿಚೇರಿಯಲ್ಲಿ ಭಾರೀ ಗಾಳಿ-ಮಳೆ; ಜನಜೀವನ ಅಸ್ತವ್ಯಸ್ತ

Advertisement

ಇದರ ಜೊತೆಗೆ ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್ ಫೋನ್ ಅನ್ನು ಎಕ್ಸ್ ಚೇಂಜ್ ಆಫರ್ ಮೂಲಕ ಹಿಂದಿರುಗಿಸಿ  ಮೈಕ್ರೋಮ್ಯಾಕ್ಸ್ 1ಬಿ ಮೊಬೈಲ್  ಗೆ 6,850 ರೂ. ವರೆಗೂ ಡಿಸ್ಕೌಂಟ್ ಪಡೆಯಬಹುದು.   ಆ್ಯಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ 9 ತಿಂಗಳವರೆಗೂ ನೋ ಕಾಸ್ಟ್ ಇಎಂಐ ಸೌಲಭ್ಯ ಕೂಡ ದೊರಕುತ್ತಿದೆ.

ಮೈಕ್ರೋಮ್ಯಾಕ್ಸ್ 1B ವಿಶೇಷತೆಗಳು:   ಮೈಕ್ರೋಮ್ಯಾಕ್ಸ್ ಇನ್ 1ಬಿ 6.52 ಇಂಚಿನ ಹೆಚ್ ಡಿ ಪ್ಲಸ್ ಮಿನಿ ಡ್ರಾಪ್ ಡಿಸ್ ಪ್ಲೇ ಹೊಂದಿದೆ. ಮಿಡಿಯಾ ಟೆಕ್ ಹೈಪರ್ ಇಂಜಿನ್ ಗೇಮಿಂಗ್ ಟೆಕ್ನಾಲಜಿ ಇದರಲಿದ್ದು, 4 ಜಿಬಿ RAM , ಮತ್ತು 64 ಜಿಬಿ ವರೆಗೂ ವಿಸ್ತರಿಸಬಹುದಾದದ ಸ್ಟೋರೇಜ್ ಸೌಲಭ್ಯವನ್ನು ಹೊಂದಿದೆ.

5,000 mAh ಬ್ಯಾಟರಿ ಸಾಮರ್ಥ್ಯವಿದ್ದು, 10W  ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯಿದೆ. ಡ್ಯುಯೆಲ್ ಕ್ಯಾಮಾರ ಸೆಟಪ್ ಇದ್ದು, 13 ಎಂಪಿ ಪ್ರಾಥಮಿಕ ಮತ್ತು 2 ಎಂಪಿ ಸೆಕೆಂಡರಿ ಕ್ಯಾಮಾರವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 8 ಮೆಗಾಫಿಕ್ಸೆಲ್ ಸಾಮರ್ಥ್ಯವಿರುವ ಕ್ಯಾಮರಾವನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: ಕಾರ್ಮಿಕ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ; ಪಶ್ಚಿಮಬಂಗಾಳದಲ್ಲಿ ಬಂದ್ ಗೆ ವಿರೋಧ, ಘರ್ಷಣೆ

ಬೆಲೆ: 2ಜಿಬಿ RAM ಮತ್ತು 32 ಜಿಬಿ ಸ್ಟೋರೇಜ್ ಸಾಮಾರ್ಥ್ಯ ಹೊಂದಿರುವ ಮೈಕ್ರೋಮ್ಯಾಕ್ಸ್ ಇನ್ 1ಬಿ  ಸ್ಮಾರ್ಟ್ ಪೋನ್ ಗೆ  6,999 ರೂ.ಗಳು.

4ಜಿಬಿ RAM ಮತ್ತು 64ಜಿಬಿ ಸ್ಟೋರೇಜ್ ಹೊಂದಿರುವ ಸ್ಮಾರ್ಟ್ ಪೋನ್ ಗೆ 7,999 ರೂ. ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಭೀಕರ ಅಪಘಾತ: 41ಮಂದಿ ದಾರುಣ ಸಾವು, ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಮೃತದೇಹಗಳು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next