Advertisement

ಅಡುಗೆ ಉಪ್ಪಿನಲ್ಲಿ ಪ್ಲಾಸ್ಟಿಕ್‌ ಅಂಶ ಪತ್ತೆ 

06:00 AM Sep 04, 2018 | Team Udayavani |

ಮುಂಬಯಿ: ದೇಶದಲ್ಲಿ ನಿತ್ಯ ಬಳಕೆಯ, ಜನಪ್ರಿಯ ಬ್ರಾಂಡ್‌ಗಳ ಉಪ್ಪಿನಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಮೈಕ್ರೋ ಪ್ಲಾಸ್ಟಿಕ್‌ ಕಣಗಳು ಇವೆ. ಈ ಅಂಶವನ್ನು ಐಐಟಿ ಬಾಂಬೆಯ ಅಧ್ಯಯನ ತಂಡ ಪತ್ತೆಹಚ್ಚಿದೆ. ದ್ವಿಸದಸ್ಯರುಳ್ಳ ಈ ತಂಡ ಭಾರತದ ಉಪ್ಪಿನ ಬ್ರಾಂಡ್‌ಗಳ ಸುಮಾರು 24 ಕೆ.ಜಿ. ಉಪ್ಪನ್ನು ಪರೀಕ್ಷೆಗೊಳಪಡಿಸಿದೆ. ಸಾಮಾನ್ಯ ಉಪ್ಪಿನಲ್ಲಿ ಶೇ. 63ರಷ್ಟು ಪ್ರಮಾಣದ ಮೈಕ್ರೋ ಪ್ಲಾಸ್ಟಿಕ್‌ ಕಂಡು ಬಂದಿದ್ದರೆ, ಬ್ರಾಂಡೆಡ್‌ ಉಪ್ಪಿನಲ್ಲಿ ಶೇ.37 ಪ್ರಮಾಣದ ಪ್ಲಾಸ್ಟಿಕ್‌ ಫೈಬರ್‌ಗಳು ಪತ್ತೆಯಾಗಿವೆ ಎಂದು ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Advertisement

ಚೀನ, ಅಮೆರಿಕ ಬಳಿಕ ವಿಶ್ವದ ಮೂರನೇ ಅತೀ ದೊಡ್ಡ ಉಪ್ಪು ಉತ್ಪಾದಕ ರಾಷ್ಟ್ರಎಂಬ ಹೆಗ್ಗಳಿಕೆಯನ್ನು ಭಾರತ ಪಡೆದಿರುವಾಗ ಮತ್ತು ಬುದ್ಧಿಮಾಂದ್ಯ ಮಕ್ಕಳ ಜನನ ನಿಯಂತ್ರಿಸಲು ಅಯೋಡಿನ್‌ ಸಹಿತ ಉಪ್ಪು ಉಪಯೋಗಿಸುವಂತೆ ಸರಕಾರವೇ ಜಾಹೀರಾತು ನೀಡುತ್ತಿರುವಾಗಲೇ ಈ ವರದಿ ಕುತೂಹಲ ಪಡೆದುಕೊಂಡಿದೆ. ಎಲ್ಲಿಂದ ಬಂತು ಈ ಪ್ಲಾಸ್ಟಿಕ್‌? ಸಮುದ್ರಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಹೆಚ್ಚುತ್ತಿದ್ದು ಈ ಪ್ಲಾಸ್ಟಿಕ್‌ಗಳು ಕ್ರಮೇಣ ಛಿದ್ರಗೊಂಡು ಮೈಕ್ರೋ ಪ್ಲಾಸ್ಟಿಕ್‌ ಕಣಗಳಾಗಿ ಮಾರ್ಪಾಡಾಗುತ್ತವೆ. ಪ್ಲಾಸ್ಟಿಕ್‌ ಫೈಬರ್‌ ಅಂಶವು ಬಟ್ಟೆ ತೊಳೆಯುವ ಪ್ರಕ್ರಿಯೆಯಿಂದ ಬಿಡುಗಡೆಯಾಗುತ್ತಿದ್ದು, ಆ ನೀರು ನದಿಯಿಂದ ಸಾಗರಕ್ಕೆ ಸೇರುವುದರಿಂದ ಸಾಗರದ ನೀರು ಫೈಬರ್‌ಯುಕ್ತವಾಗುತ್ತಿದೆ. ಸಮುದ್ರ ನೀರಿನಿಂದ ತಯಾರಿಸಲ್ಪಡುವ ಉಪ್ಪಿನಿಂದ ಇವು ಮಾನವನ ದೇಹ ಸೇರುತ್ತದೆ ಎಂದಿದ್ದಾರೆ ವಿಜ್ಞಾನಿಗಳು.

63 ಶೇ. ಭಾರತೀಯ ಉಪ್ಪಿನಲ್ಲಿ ಕಂಡು ಬಂದ ಮೈಕ್ರೋ ಪ್ಲಾಸ್ಟಿಕ್‌ ಪ್ರಮಾಣ
97 ಶೇ. ಪ್ರತಿಷ್ಠಿತ ಬ್ರಾಂಡ್‌ಗಳ ಉಪ್ಪಿನಲ್ಲಿ ಕಾಣಿಸಿಕೊಂಡಿರುವ ಪ್ಲಾಸ್ಟಿಕ್‌ ಫೈಬರ್‌ ಅಂಶ

Advertisement

Udayavani is now on Telegram. Click here to join our channel and stay updated with the latest news.

Next