ಇಸ್ಲಾಮಾಬಾದ್: ವಿಶ್ವಕ್ಕೆ ಕೋವಿಡ್ 19 ಸೋಂಕು ಕಾಟ ಕೊಟ್ಟ ಸಮಯದಲ್ಲಿ ಆನ್ ಲೈನ್ ಶಿಕ್ಷಣವು ಹೆಚ್ಚಾಗಿ ಜಾರಿಗೆ ಬಂತು. ಆದರೆ ಇದೀಗ ಕ್ರಿಕೆಟ್ ಕೋಚಿಂಗ್ ನ್ನು ಆನ್ ಲೈನ್ ಮೂಲಕ ನಡೆಸಲು ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಮುಂದಾಗಿದೆ.
ಹೌದು, ವಿಶ್ವದಲ್ಲೇ ಮೊದಲ ಬಾರಿಗೆ, ಪಾಕ್ ಕ್ರಿಕೆಟ್ ತಂಡ ಆನ್ ಲೈನ್ ಮೂಲಕ ಕಾರ್ಯನಿರ್ವಹಿಸುವ ಮುಖ್ಯ ತರಬೇತುದಾರರನ್ನು ನೇಮಿಸಲು ಸಜ್ಜಾಗಿದೆ.
ದ.ಆಫ್ರಿಕಾ ಮೂಲದ ಮಿಕಿ ಅರ್ಥರ್ ರನ್ನು ಹೇಗಾದರೂ ಮುಖ್ಯ ತರಬೇತುದಾರ ಹುದ್ದೆಗೆ ನೇಮಿಸುವುದು ಪಿಸಿಬಿ ಲೆಕ್ಕಾಚಾರ. ಸದ್ಯ ಡರ್ಬಿಶೈರ್ ಕೋಚ್ ಆಗಿರುವ ಮಿಕಿ ಅರ್ಥರ್ ತಮ್ಮ ಸ್ಥಾನ ಬಿಡುವ ಸ್ಥಿತಿಯಲ್ಲಿಲ್ಲ.
ಇದನ್ನೂ ಓದಿ:ಕೆನಡಾದ ಹಿಂದೂ ದೇವಸ್ಥಾನದಲ್ಲಿ ಭಾರತ ವಿರೋಧಿ ಬರಹಗಳು; ವ್ಯಾಪಕ ಆಕ್ರೋಶ
ಹಾಗಾಗಿ ಆನ್‌ಲೈನ್ ಮೂಲಕವೇ ಪರಿಸ್ಥಿತಿ ನಿಭಾಯಿಸಿ, ಏಕದಿನ ವಿಶ್ವಕಪ್ ಶುರುವಾಗುವ ಹೊತ್ತಿಗಾದರೂ ತಂಡ ಸೇರಿಕೊಳ್ಳಿ ಎಂದು ಪಿಸಿಬಿ ಕೇಳಿಕೊಂಡಿದೆಯಂತೆ. ಹೀಗೆಂದು ವರದಿಗಳು ಹರಿದಾಡುತ್ತಿವೆ. ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳು ಹಲವು ಬಗೆಯ ಪ್ರತಿಕ್ರಿಯೆಗಳು ಬಂದಿವೆ.