Advertisement

ಆಸೀಸ್‌ ಬ್ಯಾಟ್ಸ್‌ಮನ್‌ ಕ್ಲಿಂಜರ್‌ ನಿವೃತ್ತಿ

06:50 AM Mar 03, 2018 | |

ಸಿಡ್ನಿ: ಆಸ್ಟ್ರೇಲಿಯದ ಹಿರಿಯ ಬ್ಯಾಟ್ಸ್‌ಮನ್‌ ಮೈಕಲ್‌ ಕ್ಲಿಂಜರ್‌ ತಮ್ಮ 2 ದಶಕಗಳ ಪ್ರಥಮ ದರ್ಜೆ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ಆದರೆ ಬಿಗ್‌ ಬಾಶ್‌ ಸೇರಿದಂತೆ ಟಿ20 ಕ್ರಿಕೆಟ್‌ ಲೀಗ್‌ನಲ್ಲಿ ಮುಂದುವರಿಯುವುದಾಗಿ ಹೇಳಿದ್ದಾರೆ.

Advertisement

“ಕಳೆದ 19 ವರ್ಷಗಳಿಂದ ಆಸ್ಟ್ರೇಲಿಯದ ಪ್ರಥಮ ದರ್ಜೆ ಕ್ರಿಕೆಟಿನ ಒಂದು ಭಾಗವಾಗಿ ಉಳಿದದ್ದು ನನ್ನ ಪಾಲಿನ ಅದೃಷ್ಟ. ಇಲ್ಲಿ ಆಡಿದ ಪ್ರತಿಯೊಂದು ನಿಮಿಷವನ್ನೂ ನಾನು ಆಸ್ವಾದಿಸಿದ್ದೇನೆ. 4 ಟ್ರೋಫಿ ವಿಜೇತ ವಾರಿಯರ್ ಹಾಗೂ ಸ್ಕಾರ್ಚರ್ ತಂಡಗಳಲ್ಲಿ ಕಾಣಿಸಿಕೊಂಡದ್ದು ನನ್ನ ಪಾಲಿನ ಅತ್ಯಂತ ಸಂತಸದ ಸಂಗತಿ. ಈ ಸಂದರ್ಭದಲ್ಲಿ ನನ್ನನ್ನು ಬೆಂಬಲಿಸಿದ, ಪ್ರೋತ್ಸಾಹಿಸಿದ ನನ್ನ ಕುಟುಂಬಕ್ಕೆ, ಸ್ನೇಹಿತರಿಗೆ, ಮುಖ್ಯವಾಗಿ ಪತ್ನಿ ಸಿಂಡಿ, ಮಕ್ಕಳಾದ ಬೈಲಿ, ಸಮ್ಮರ್‌ ಮತ್ತು ಈಸ್ಟನ್‌ಗೆ ಕೃತಜ್ಞತೆಗಳು. ಇವರೆಲ್ಲ ಕಳೆದೊಂದು ದಶಕದ ಕಾಲ ನನ್ನ ಜತೆಯೇ ಸಂಚರಿಸಿ ನನ್ನ ಕನಸನ್ನು ಬೆನ್ನಟ್ಟಲು ಬೆಂಗಾವಲಾಗಿ ನಿಂತಿದ್ದರು…’ ಎಂದು ಕ್ಲಿಂಜರ್‌ ವಿದಾಯದ ಸಂದರ್ಭದಲ್ಲಿ ಹೇಳಿದರು.

37ರ ಹರೆಯದ ಕ್ಲಿಂಜರ್‌ ತಮ್ಮ ಕ್ರಿಕೆಟ್‌ ಬಾಳ್ವೆಯಲ್ಲಿ ವಿಕ್ಟೋರಿಯಾ, ಸೌತ್‌ ಆಸ್ಟ್ರೇಲಿಯ ಮತ್ತು ವೆಸ್ಟರ್ನ್ ಆಸ್ಟ್ರೇಲಿಯ ತಂಡಗಳನ್ನು ಪ್ರತಿನಿಧಿಸಿದ್ದರು. ಇಂಗ್ಲಿಷ್‌ ಕೌಂಟಿಯಲ್ಲಿ ವೂರ್ಸ್ಟರ್‌ಶೈರ್‌ ಮತ್ತು ಗ್ಲೂಸ್ಟರ್‌ಶೈರ್‌ ತಂಡಗಳ ಪರವಾಗಿಯೂ ಆಡಿದ್ದರು. ಒಟ್ಟು 182 ಪಂದ್ಯಗಳಿಂದ 39.30ರ ಸರಾಸರಿಯಲ್ಲಿ 30 ಶತಕ ಸಹಿತ 11,320 ರನ್‌ ಗಳಿಸಿದ್ದು ಕ್ಲಿಂಜರ್‌ ಸಾಧನೆ. 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಸ್ಟ್ರೇಲಿಯ ಪರ ಆಡಿದ ಕ್ಲಿಂಜರ್‌ 143 ರನ್‌ ಹೊಡೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next